Posts

Paradha Movie Review (Telugu)

Image
  ಸಿನೆಮಾ ಕುರಿತ ಮಾತು: ಅದೊಂದು ಹಳ್ಳಿ... ಅಲ್ಲಿ ವಿಚಿತ್ರವಾದ ಒಂದು ಪದ್ಧತಿ ಇದೆ‌. ಆ ಪದ್ಧತಿ 'ಹೆಣ್ಣುಮಕ್ಕಳಿಗೆ ಮಾತ್ರ' ಅಂತ ಬಿಡಿಸಿ ಹೇಳಬೇಕಾಗಿಲ್ಲ ಅಲ್ವಾ? ಅದೇನೆಂದರೆ ಆ ಊರಿನ‌ ಹೆಣ್ಣುಮಕ್ಕಳು, ಒಂದು ವಯಸ್ಸಿಗೆ ಬಂದ ನಂತರ, ಮನೆಯಿಂದಾಚೆ ಬರುವಾಗ ಪರದೆಯಿಂದ ತಮ್ಮ ಮುಖ ಮುಚ್ಚಿಕೊಂಡೇ ಬರಬೇಕು. ಅವರು ತಮ್ಮ ಕುಟುಂಬದವರಿಗಲ್ಲದೇ, ಬೇರೆ ಯಾರಿಗೂ ತಮ್ಮ ಮುಖವನ್ನು ತೋರಿಸಬಾರದು. ಊರಿನಲ್ಲಿ ಓಡಾಡುವಾಗಲೂ ಆ ಪರದೆ, ಅವರ ಮುಖದ ಮೇಲೆ ಕಡ್ಡಾಯವಾಗಿ ಇರಲೇಬೇಕು. ಅಕಸ್ಮಾತ್ ಒಂದು ಕ್ಷಣಕ್ಕಾದರೂ ಅವರು ಆ ಪರದೆ ತೆಗೆದಿದ್ದು ಗೊತ್ತಾದರೆ, ಅದಕ್ಕೆ ಸಿಗುವ ಶಿಕ್ಷೆ ಏನು ಗೊತ್ತಾ? ಆತ್ಮಾಹುತಿ ಅರ್ಥಾತ್ ಮರಣದಂಡನೆ!! 'ಓ.. ಏನು? ಪರದೆ ತೆಗೆದುಬಿಟ್ಟರೆ ಸಾಯಿಸಿ ಬಿಡುತ್ತಾರಾ? ಈಗಿನ ಕಾಲದಲ್ಲೂ‌ ಈ ರೀತಿ ನಡೆಯುತ್ತಾ?' ಅಂತ ಕೆಲವರು ಉಡಾಫೆಯಾಗಿ ಮಾತನಾಡಬಹುದು. ಆದರೆ ಒಂದು ಪದ ಇದೆ.. 'ಸಮೂಹ ಸನ್ನಿ' ಅಂತ. ಆ ಹುಚ್ಚು ಹಿಡಿದ ಜನರು ಏನು ಬೇಕಾದರೂ ಮಾಡಬಹುದು.‌ ಈ ಹಳ್ಳಿಯಲ್ಲಿ ಆಗಿರುವುದೂ ಅದೇ! ಇಲ್ಲಿನ ಜನರ ಪ್ರಕಾರ ಆ ಹಳ್ಳಿಯ ಭವಿಷ್ಯವೇ ಈ ಹೆಣ್ಣುಮಕ್ಕಳ ಕೈಲಿದೆ. ಇವರು ತಮ್ಮ ಮುಖ ಕಾಣದಂತೆ ಕವರ್ ಮಾಡಿಕೊಂಡು ಓಡಾಡಿದರೆ ಮಾತ್ರವೇ, ಹಳ್ಳಿಯ ಜನ ನೆಮ್ಮದಿಯಿಂದ ಇರಲು ಸಾಧ್ಯವಂತೆ..! ಅಕಸ್ಮಾತ್ ಯಾರಾದರೂ ಅಸಡ್ಡೆಯಿಂದ ತಮ್ಮ ಮುಖಪರದೆಯನ್ನು ತೆಗೆದುಬಿಟ್ಟರೆ ಅಥವಾ ತಮ್ಮ ಮುಖವನ್ನು ಬೇರೆ ಯಾರಿಗಾದರೂ ತೋ...

ಎಡಗೈ ಅಪಘಾತಕ್ಕೆ ಕಾರಣ (ಕನ್ನಡ)

Image
  ಬೇರೆ ಭಾಷೆಗಳಲ್ಲಿ ಮಾನಸಿಕ ರೋಗದ ಬಗ್ಗೆ ಮತ್ತು ಅದನ್ನು ಅನುಭವಿಸುತ್ತಿರುವ ರೋಗಿಗಳ ಬಗ್ಗೆ ಸೂಕ್ಷ್ಮ ರೀತಿಯಲ್ಲಿ ಅರ್ಥ ಮಾಡಿಸುವ ಸಿನಿಮಾ ಬಂದಾಗ, 'ನಮ್ಮ ಕನ್ನಡದಲ್ಲಿ ಅಂತಹದ್ದೇ ಸಿನಿಮಾ ಯಾಕೆ ಬರಬಾರದು?' ಅಂತ ಯಾವಾಗಲೂ ಅಂದುಕೊಳ್ಳುತ್ತಿದ್ದೆ. ಹಾಗಾಗಿ ಈ ಸಿನೆಮಾ ಬಂದಾಗ ನನ್ನ ನಿರೀಕ್ಷೆ ದುಪ್ಪಟ್ಟಾಗಿತ್ತು. ದುರಾದೃಷ್ಟವೆಂದರೆ, ಅಂತಹ ಚಾನ್ಸ್ ಸಿಕ್ಕಿದರೂ ಕೂಡಾ, ಅದನ್ನು ಪರಿಪೂರ್ಣವಾಗಿ ತೋರಿಸುವಲ್ಲಿ ನಿರ್ದೇಶಕರು ಎಡವಿದ್ದಾರೆ. ಯಾವ ಪಾಯಿಂಟಿಗೂ ಫೋಕಸ್ ಕೊಡದೇ, ಲಂಗುಲಗಾಮಿಲ್ಲದೇ ಕಥೆ ಓಡಿಸಿದ್ದಾರೆ. ಅವರು ಮನಸ್ಸು ಮಾಡಿದ್ದರೆ, ಎಡಗೈ ಬಳಸುವವರ ಬಗ್ಗೆ ಅತ್ಯುತ್ತಮವಾದ ಕಥೆಯನ್ನು ತೆರೆಯ ಮೇಲೆ ತರಬಹುದಾಗಿತ್ತು. ಅವರ ಸಂಕಷ್ಟಗಳನ್ನು ನವಿರಾದ ಹಾಸ್ಯದಲ್ಲಿ ಕವರ್ ಮಾಡಿ, ಜನರಿಗೆ ಈ ಅಪರೂಪದ ಕೇಸ್ ಬಗ್ಗೆ ಅರಿವು ಮೂಡಿಸಬಹುದಿತ್ತು. ಈ ಸಿನೆಮಾ ನೋಡಿದ ನಂತರ, ಎಡಗೈ ಬಳಸುವವರ ಬಗ್ಗೆ ಜನರ ಅಭಿಪ್ರಾಯ ಬದಲಾಗುವಂತೆ ಮಾಡಬಹುದಿತ್ತು.‌ ನಮ್ಮ ಜನರು ಅಂಥವರ ಬಗ್ಗೆ ಸಾಫ್ಟ್ ಕಾರ್ನರ್ ಇಟ್ಟುಕೊಳ್ಳದೇ, ಸಾರ್ವಜನಿಕವಾಗಿ ನಿಂದನೆ ಮಾಡುತ್ತಾರೆ. ಇದರಿಂದ ಎಡಗೈ ಬಳಸುವವರಿಗೆ ಎಷ್ಟು ಮಾನಸಿಕ ಹಿಂಸೆಯಾಗುತ್ತದೆ ಅಂತ ಯಾರೂ ಯೋಚಿಸಲು ಹೋಗುವುದಿಲ್ಲ. ಆದರೆ ಇದೇನು ಖಾಯಿಲೆಯಲ್ಲ. ಅಲ್ಲದೇ.. ಪ್ರತೀ ಕೆಲಸಕ್ಕೂ ಬಲಗೈ ಅನ್ನೇ ಬಳಸಬೇಕು ಅಂತ ಯಾವುದೇ ರೂಲ್ಸ್ ಕೂಡಾ ಇಲ್ಲ. ಅಕಸ್ಮಾತ್ ಇದ್ದರೂ ಅದನ್ನು ನಾವೇ ಮಾಡಿಕೊಂಡಿರುವುದಷ್ಟೇ.. ಅದಕ್...

ಮಹಾನುಭಾವ (ತೆಲುಗು)

Image
"ಮಾನಸಿಕ ಖಾಯಿಲೆ ಕುರಿತ ಸಿನೆಮಾ" ಶರೀರದಲ್ಲಿ ಉಂಟಾಗುವ ನೂನ್ಯತೆಗಳ ಬಗ್ಗೆ ಎಲ್ಲರೂ ಸಿನೆಮಾ ಮಾಡುತ್ತಾರೆ. ನಮ್ಮ ಹೀರೋಗಳೂ ಸಹ ಕಣ್ಣಿಲ್ಲದೇ, ಕಾಲಿಲ್ಲದೇ ಇರುವ ಹಾಗೆ ನಟಿಸಿ ವೀಕ್ಷಕರ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ಆದರೆ ಮನಸ್ಸಿನಲ್ಲಿ ಉಂಟಾಗುವ ನೂನ್ಯತೆಗಳ ಬಗ್ಗೆ ಯಾರೂ ಜಾಸ್ತಿ ಬರೆದೂ ಇಲ್ಲ, ಸಿನೆಮಾ ಕೂಡಾ ಮಾಡಿಲ್ಲ. ಅಕಸ್ಮಾತ್ ಅಲ್ಲೊಂದು ಇಲ್ಲೊಂದು ಸಿನೆಮಾ ಮಾಡಿದ್ದರೂ, ಅದು ಮನಸ್ಸಿನ ಎಲ್ಲಾ ಖಾಯಿಲೆಗಳನ್ನು ಒಟ್ಟಿಗೆ ಸೇರಿಸಿ, ಅದಕ್ಕೆ ' ಹುಚ್ಚು' ಎಂಬ ಪಟ್ಟಿ ಕಟ್ಟಿ, ಹುಚ್ಚರೆಂದರೆ ಯಾವಾಗಲೂ ತಲೆ ಕೆದರಿಕೊಂಡು, ಬಟ್ಟೆ ಹರಿದುಕೊಂಡೇ ಇರುತ್ತಾರೆ, ತಮ್ಮನ್ನು ನೋಡಲು ಬಂದವರಿಗೆ ಕಚ್ಚುತ್ತಾರೆ ಎನ್ನುವ ತಪ್ಪು ಸಂದೇಶ ಕೊಡುವ ಚಿತ್ರಗಳೇ ಜಾಸ್ತಿ‌ ಇರುವುದು. ನಾಲ್ಕು ಜನರಲ್ಲಿ ಒಬ್ಬರಿಗೆ ಮನಸ್ಸಿನ ಖಾಯಿಲೆ ಇರುತ್ತದೆ ಅಂತ ಹೇಳುತ್ತದೆ ಮನಃಶಾಸ್ತ್ರ. ಅಲ್ಲದೇ ಮಾನಸಿಕ ಖಾಯಿಲೆಯ ಎಲ್ಲಾ ಲಕ್ಷಣಗಳೂ ಹುಚ್ಚೇ ಆಗಬೇಕೆಂದಿಲ್ಲ. ಅದರಲ್ಲಿ‌ ಕೆಲವು ಖಾಯಿಲೆಗಳು ಯಾರಿಗೂ ಹಾನಿ ಮಾಡದ, ಮೈಲ್ಡ್ ಖಾಯಿಲೆಯ ಜಾತಿಗೆ ಸೇರಿವೆ. ಅದರಲ್ಲಿ‌ ಒಂದು ಒಸಿಡಿ. ಅಂದರೆ " ಆಬ್ಸೆಸಿವ್ ಕಂಪಲ್ಸೀವ್ ಡಿಸಾರ್ಡರ್ ".  ಇದು ಒಂದು ಮಾನಸಿಕ ರೋಗವಾದರೂ, ಅವರು ಎಲ್ಲರಂತೆ ಬಟ್ಟೆ ಹರಿದುಕೊಂಡು, ಲಾಗ ಹಾಕಿಕೊಂಡು ಇರುವುದಿಲ್ಲ. ಇನ್‌ಫ್ಯಾಕ್ಟ್ ಅವರಿಗೆ ಆ ಖಾಯಿಲೆ ಇದೆ ಎನ್ನುವುದೇ ನಮಗೆ ಗೊತ್ತಾಗುವುದಿಲ್ಲ. ಇಂತಹಾ ಒಂದು ಮಾ...

ಛೂ ಮಂತರ್ (ಕನ್ನಡ)

Image
  ಕರ್ವ ನಿರ್ದೇಶಕರಾದ ನವನೀತ್ ಅವರ "ಛೂ ಮಂತರ್" ಸಿನೆಮಾದ ಮೇಲೆ ಸ್ವಲ್ಪ ನಿರೀಕ್ಷೆಗಳು ಹೆಚ್ಚಾಗಿಯೇ ಇದ್ದವು. ಏಕೆಂದರೆ ನಾವು ಯಾವುದೇ ಸಿನೆಮಾ ನೋಡುವಾಗ, ಆ ನಿರ್ದೇಶಕರ ಹಿಂದಿನ ಸಿನೆಮಾವನ್ನು ನೆನಪಿಸಿಕೊಂಡು, ತುಲನೆ ಮಾಡಿಯೇ ಮಾಡುತ್ತೇವೆ. ಜೊತೆಗೆ ಈಗಾಗಲೇ ಬೇಕಾದಷ್ಟು ಹಾರರ್ ಮೂವಿಗಳನ್ನು ನೋಡಿರುವ ನಮಗೆ, ಈ ನಿರ್ದೇಶಕರು ತಮ್ಮ ಚಿತ್ರದಲ್ಲಿ ಎಲ್ಲಿಯೂ ನೀಡಿರದಂತಹಾ ಅನುಭವ ಕೊಡ್ತಾರೆ ಅನ್ನುವ ನಿರೀಕ್ಷೆಯೂ ಸ್ವಲ್ಪ ಜಾಸ್ತಿಯೇ ಇತ್ತು. ಇಷ್ಟೆಲ್ಲಾ ನಿರೀಕ್ಷೆಗಳನ್ನು ಇಟ್ಟುಕೊಂಡು ಸಿನೆಮಾ ನೋಡಲು ಕೂತೆ. ಮೊದಲಿಗೆ ಇಷ್ಟವಾಗಿದ್ದು ಚಿತ್ರಕಥೆ. ಎಲ್ಲಿಯೂ ಬೋರ್ ಆಗದ ಹಾಗೆ, ಎರಡು ಟೈಮ್ ಲೈನ್ಗಳನ್ನು  ಒಂದೇ ಸಮನೆ ತೆಗೆದುಕೊಂಡು ಹೋಗಿದ್ದು ತುಂಬಾ ಚೆನ್ನಾಗಿತ್ತು. ಇದು ಎಲ್ಲಿಯೂ ಮಿಸ್ ಹೊಡೆದಿಲ್ಲ ಮತ್ತು ಇದೆರೆಡೂ ಬೇರೆ ಬೇರೆ ಅಂತ ಎಲ್ಲಿಯೂ ಅನುಮಾನ ಬರುವುದಿಲ್ಲ. 2024ರಲ್ಲಿ ಇರುವ ಟೆಕ್ನಾಲಜಿ, 2002ರಲ್ಲಿ ಇಲ್ಲದೇ ಇರುವುದನ್ನು ಕೂಡಾ ಕಥೆಯಲ್ಲಿ ಎಲ್ಲೂ ಬಿಟ್ಟು ಕೊಟ್ಟಿಲ್ಲ. ನಮಗೆ ವಿಷಯವೆಲ್ಲಾ ಗೊತ್ತಾಗಿ, ಮತ್ತೊಂದು ಬಾರಿ ಸಿನೆಮಾ ನೋಡಲು ಕುಳಿತರೂ ಸಹ, ಒಂದೇ ಒಂದು ಮಿಸ್ಟೇಕ್ ಕೂಡಾ ಕಂಡು ಬರುವುದಿಲ್ಲ. ಅಷ್ಟು ಪರ್ಫೆಕ್ಟ್ ಆಗಿ ಚಿತ್ರಕಥೆ ಹೆಣೆದಿದ್ದಾರೆ. ಇನ್ನು ಶರಣ್ ಅಂತೂ ಡೈನಮೋ ಪಾತ್ರದಲ್ಲಿ ನಟಿಸಿಲ್ಲ, ಬದಲಿಗೆ ಜೀವಿಸಿದ್ದಾರೆ. ಇಷ್ಟು ದಿನ ಸೀರಿಯಸ್ ಚಿತ್ರದಲ್ಲಿಯೂ ಕಾಮೆಡಿ ಮಾಡುತ್ತಿದ್ದ ನಟ, ಇದರಲ...

ಲಕ್ಕಿ ಭಾಸ್ಕರ್ (ತೆಲುಗು)

Image
  ನಾವು ಚಿಕ್ಕವರಿರುವಾಗ 'ದೊಡ್ಡವರಾದ ಮೇಲೆ ಒಳ್ಳೆಯವರಾಗಬೇಕು, ಕೆಲಸದಲ್ಲಿ ಪ್ರಾಮಾಣಿಕರಾಗಿರಬೇಕು' ಅಂತಲೇ ಎಲ್ಲರೂ ಹೇಳಿಕೊಡುತ್ತಾರೆ. ಅದೇ ರೀತಿ ಇರುವ ಪ್ರಯತ್ನ ಕೂಡಾ ನಾವು ಮಾಡುತ್ತೇವೆ. ಆದರೆ ಅದರಿಂದ ನಮಗೆ ಸಿಗುವುದು ಕೇವಲ ನಿಂದನೆ ಮತ್ತು ಅಪಮಾನ ಮಾತ್ರ.  ಲಕ್ಕಿ ಭಾಸ್ಕರ್ ಕಥೆಯೂ ಅಂಥದ್ದೇ.  ತನ್ನಲ್ಲಿರುವ ದುಡ್ಡಿನಿಂದ ತೃಪ್ತನಾಗಿ ಸಂಸಾರ ಮಾಡಿಕೊಂಡಿದ್ದ ಭಾಸ್ಕರ್ಗೆ, ಹೆಚ್ಚು ದುಡ್ಡು ಮಾಡಬೇಕು ಎಂಬ ಆಸೆ ಹುಟ್ಟಿಸಿದ್ದು ಇದೇ ಸಮಾಜ ಮತ್ತು ಸಮಾಜದ ಜನರು. ಅವರು ಮಾಡುವ ಮೋಸ ಮತ್ತು ಅವಮಾನಗಳಿಂದ ಪ್ರೇರಿತನಾಗಿ ಅವನು ದುಡ್ಡು ಮಾಡಲು ಹೊರಡುತ್ತಾನೆ.  ಇಲ್ಲೊಂದು ವಿಷಯ ಹೇಳಬೇಕು.  ಇದು ಬೇರೆಲ್ಲಾ ಸಿನಿಮಾಗಳಂತೆಯೇ ಶುರುವಾದರೂ, ಇದರ ನಾಯಕಿಯ ಪರಿಚಯ ತುಂಬಾ ವಿಶೇಷವಾಗಿತ್ತು. ಆಕೆಯನ್ನು ತುಂಬಾ ಮಹತ್ವದ ಪಾತ್ರ ಎನ್ನುವಂತೆ ಪರಿಚಯ ಮಾಡಿಸಿದ್ದು ನನಗಂತೂ ತುಂಬಾ ಇಷ್ಟವಾಯಿತು.  ಇನ್ನು ಕಥೆಯ ವಿಚಾರಕ್ಕೆ ಬಂದರೆ...  ಕಥೆ ನಮಗೆ ತುಂಬಾನೇ ಕನೆಕ್ಟ್ ಆಗುತ್ತದೆ. ಏಕೆಂದರೆ ನಾವು 90% ಜನ ಭಾಸ್ಕರನಂತೆಯೇ ಇದ್ದೇವೆ. ಮೇಲೆ ಏಳಲೂ ಆಗದೇ, ಕೆಳಗೆ ಬೀಳಲೂ ಸಹ ಆಗದೇ, ತ್ರಿಶಂಕುವಿನ ಥರಾ ಮಧ್ಯದಲ್ಲಿ ಸಿಲುಕಿಕೊಂಡಿದ್ದೇವೆ. ಒಳ್ಳೆಯ ಮನಸ್ಸು, ಒಳ್ಳೆಯ ಗುಣ, ಪ್ರಾಮಾಣಿಕತೆ ಇದೆಲ್ಲಾ ಇದ್ದರೂ ಕೂಡಾ, ಯಾರೂ ಗುರುತಿಸದೇ ಇರುವುದು ನಮಗೆ ನೋವುಂಟು ಮಾಡುತ್ತದೆ. ಹಾಗಾಗಿ ಇದರ ಪ್ರತ್ಯಕ್ಷ ಅನುಭವ ಇರುವವರಿಗ...

"ಕಾರು" by ಶೀತಲ್ ಶೆಟ್ಟಿ

Image
  ಚಿಕ್ಕ ವಯಸ್ಸಿನಲ್ಲಿ ನಮಗೊಂದು ಕನಸಿರುತ್ತದೆ.  ಅದು ಒಡವೆ-ವಸ್ತುವಿನದ್ದಲ್ಲ..  ದೊಡ್ಡ ಬಂಗಲೆ ಬೇಕು ಅಂತಲ್ಲ.. ಕೈ ತುಂಬಾ ದುಡ್ಡು ಬೇಕು ಅಂತಲೂ ಅಲ್ಲ.. ಕಂಪ್ಯೂಟರ್‌-ಲ್ಯಾಪ್ಟಾಪ್ ಸಹ ಅಲ್ಲ.. ಅವೆಲ್ಲಾ ಯೋಚನೆಗಳೂ ಬರದ ಮುಗ್ಧ ವಯಸ್ಸು ಅದು.. ಆ ಚಿಕ್ಕ ವಯಸ್ಸಿನಲ್ಲಿ ನಾವೇನು ಬಯಸಿರಬಹುದು..? ಇಲ್ಲೊಬ್ಬ ಪುಟ್ಟಿ ಇದ್ದಾಳೆ..  ಆಕೆಗೆ "ಕಾರ್" ಎಂದರೇನೇ ಆಕರ್ಷಣೆ.. ಮೊದಲು ಅದನ್ನು ಕೊಳ್ಳಬೇಕು, ನಂತರ ಅದು ಚಲಿಸಲು ಪೆಟ್ರೋಲ್ ಹಾಕಿಸಬೇಕು.. ಉಹುಂ ಅದೆಲ್ಲ ನಮ್ ಪುಟ್ಟಿಗೆ ಗೊತ್ತಿಲ್ಲ. ಅವಳಿಗೆ ಕಾರ್ ಅಂದ್ರೆ ಕಾರ್ ಅಷ್ಟೇ.. ಸದಾ ಪುಟ್ಟ ಆಟದ ಕಾರ್ ಇಟ್ಕೊಂಡು ಆಟ ಆಡ್ತಿರುತ್ತಾಳೆ..  ದೊಡ್ಡ ಕಾರ್ ಹೇಗಿರುತ್ತದೆ ಅಂತಲೇ ಆಕೆಗೆ ಗೊತ್ತಿರುವುದಿಲ್ಲ. ಅದನ್ನು ತನ್ನ ಗೆಳೆಯನ ಬಳಿ ಕೇಳಿದಾಗ ಅವನೋ "ಅದೊಂದು ಬೇರೆಯದೇ ಪ್ರಪಂಚ.. ಕಾರಿನೊಳಗೆ ಚಾಕ್ಲೇಟೂ, ಬಿಸ್ಕೇಟೂ, ಆಟ ಸಾಮಾನೂ ಇರುತ್ತೆ" ಅಂತ ಹೇಳ್ತಾನೆ. ಮಕ್ಕಳೇ ಹಾಗಲ್ವೇ? ಅವರ ಎಲ್ಲಾ ಯೋಚನೆಗಳೂ ಚಾಕ್ಲೇಟೂ-ಬಿಸ್ಕೇಟಿನ ಸುತ್ತಲೇ ಸುತ್ತುವುದು.  ಒಮ್ಮೆ ಸ್ಕೂಲಿನ ಬಳಿ‌ ಒಂದು ಕಾರ್ ಕಂಡರೂ ಪುಟ್ಟಿ ಅಲ್ಲಿಗೆ ಹೋಗುವಷ್ಟರಲ್ಲಿ ಕಾರ್ ಹೊರಟುಬಿಡುತ್ತದೆ. ಇದು ಪುಟ್ಟಿಯನ್ನು ಮತ್ತೂ ಕೆರಳಿಸುತ್ತದೆ. ಈ ಕಾರ್ ಅನ್ನೋಂಥದ್ದೇನಿದೆ ಅಂತ ತಿಳಿಯಲೇ ಬೇಕು ಎಂದು ನಿರ್ಧರಿಸುತ್ತಾಳೆ. ಆ ಊರಿನಲ್ಲಿ ದೆವ್ವದ ಮನೆಯೊಂದಿರುತ್ತೆ. 'ಅಜ್ಜಯ್ಯನ ಮನೆ'...  ಊರ...

ಬೀರಬಲ್ Trilogy (ಕನ್ನಡ)

Image
  ಸಿನೆಮಾ             : ಬೀರಬಲ್                           Trilogy Case 1 ನಿರ್ದೇಶಕರು      : ಎಂ.ಜಿ.ಶ್ರೀನಿವಾಸ್ ಪಾತ್ರವರ್ಗ        : ಎಂ.ಜಿ. ಶ್ರೀನಿವಾಸ್,                            ರುಕ್ಮಿಣಿ  ವಸಂತ್,                            ಸುರೇಶ ಹೆಬ್ಳೀಕರ್ ಇಸವಿ              ‌ ‌‌  : 2019 ಈ ಸಿನೆಮಾದ ಕಡೆಯ ಸಾಲುಗಳು ಈ ರೀತಿ ಇವೆ. "ಒಬ್ಬ ಶಕ್ತಿವಂತ ಶಕ್ತಿ ಇರುವ ತನಕ ಮಾತ್ರ ಗೆಲ್ತಾನೆ, ಆದರೆ ಅದೇ ಒಬ್ಬ ಬುದ್ಧಿವಂತ ಯಾವಾಗ್ಲೂ ಗೆಲ್ತಾನೆ" ಯಾಕಂದ್ರೆ ಗೆಲ್ಲೋಕ್ಕೆ ಬಂದಿರುವುದು ಬೇರೆ ಯಾರೂ ಅಲ್ಲ.. ಬೀರಬಲ್ ! ಅಂದ್ರೆ ಮಹೇಶ್ ದಾಸ್. ನಮ್ಮ ಹೀರೋ ಹೆಸರು ಕೂಡಾ ಅದೇ.. ಮಹೇಶ್ ದಾಸ್. ಮೊದಲ ನೋಟಕ್ಕೇ ನಮ್ಮನ್ನು ಬೋಲ್ಡ್ ಮಾಡುವ ಟ್ಯಾಲೆಂಟೆಡ್ ಹೀರೋ ಇವರು. ಹೇಗಂತೀರಾ? ಸಾಮಾನ್ಯವಾಗಿ ಸಿನೆಮಾಗಳಲ್ಲಿ ಹೀರೋ ಎಂಟ್ರಿ ಹೇಗಿರುತ್ತದೆ? ಭರ್ಜರಿ ಸಾಂಗ್...