Posts

Showing posts from November, 2024

"ಕಾರು" by ಶೀತಲ್ ಶೆಟ್ಟಿ

Image
  ಚಿಕ್ಕ ವಯಸ್ಸಿನಲ್ಲಿ ನಮಗೊಂದು ಕನಸಿರುತ್ತದೆ.  ಅದು ಒಡವೆ-ವಸ್ತುವಿನದ್ದಲ್ಲ..  ದೊಡ್ಡ ಬಂಗಲೆ ಬೇಕು ಅಂತಲ್ಲ.. ಕೈ ತುಂಬಾ ದುಡ್ಡು ಬೇಕು ಅಂತಲೂ ಅಲ್ಲ.. ಕಂಪ್ಯೂಟರ್‌-ಲ್ಯಾಪ್ಟಾಪ್ ಸಹ ಅಲ್ಲ.. ಅವೆಲ್ಲಾ ಯೋಚನೆಗಳೂ ಬರದ ಮುಗ್ಧ ವಯಸ್ಸು ಅದು.. ಆ ಚಿಕ್ಕ ವಯಸ್ಸಿನಲ್ಲಿ ನಾವೇನು ಬಯಸಿರಬಹುದು..? ಇಲ್ಲೊಬ್ಬ ಪುಟ್ಟಿ ಇದ್ದಾಳೆ..  ಆಕೆಗೆ "ಕಾರ್" ಎಂದರೇನೇ ಆಕರ್ಷಣೆ.. ಮೊದಲು ಅದನ್ನು ಕೊಳ್ಳಬೇಕು, ನಂತರ ಅದು ಚಲಿಸಲು ಪೆಟ್ರೋಲ್ ಹಾಕಿಸಬೇಕು.. ಉಹುಂ ಅದೆಲ್ಲ ನಮ್ ಪುಟ್ಟಿಗೆ ಗೊತ್ತಿಲ್ಲ. ಅವಳಿಗೆ ಕಾರ್ ಅಂದ್ರೆ ಕಾರ್ ಅಷ್ಟೇ.. ಸದಾ ಪುಟ್ಟ ಆಟದ ಕಾರ್ ಇಟ್ಕೊಂಡು ಆಟ ಆಡ್ತಿರುತ್ತಾಳೆ..  ದೊಡ್ಡ ಕಾರ್ ಹೇಗಿರುತ್ತದೆ ಅಂತಲೇ ಆಕೆಗೆ ಗೊತ್ತಿರುವುದಿಲ್ಲ. ಅದನ್ನು ತನ್ನ ಗೆಳೆಯನ ಬಳಿ ಕೇಳಿದಾಗ ಅವನೋ "ಅದೊಂದು ಬೇರೆಯದೇ ಪ್ರಪಂಚ.. ಕಾರಿನೊಳಗೆ ಚಾಕ್ಲೇಟೂ, ಬಿಸ್ಕೇಟೂ, ಆಟ ಸಾಮಾನೂ ಇರುತ್ತೆ" ಅಂತ ಹೇಳ್ತಾನೆ. ಮಕ್ಕಳೇ ಹಾಗಲ್ವೇ? ಅವರ ಎಲ್ಲಾ ಯೋಚನೆಗಳೂ ಚಾಕ್ಲೇಟೂ-ಬಿಸ್ಕೇಟಿನ ಸುತ್ತಲೇ ಸುತ್ತುವುದು.  ಒಮ್ಮೆ ಸ್ಕೂಲಿನ ಬಳಿ‌ ಒಂದು ಕಾರ್ ಕಂಡರೂ ಪುಟ್ಟಿ ಅಲ್ಲಿಗೆ ಹೋಗುವಷ್ಟರಲ್ಲಿ ಕಾರ್ ಹೊರಟುಬಿಡುತ್ತದೆ. ಇದು ಪುಟ್ಟಿಯನ್ನು ಮತ್ತೂ ಕೆರಳಿಸುತ್ತದೆ. ಈ ಕಾರ್ ಅನ್ನೋಂಥದ್ದೇನಿದೆ ಅಂತ ತಿಳಿಯಲೇ ಬೇಕು ಎಂದು ನಿರ್ಧರಿಸುತ್ತಾಳೆ. ಆ ಊರಿನಲ್ಲಿ ದೆವ್ವದ ಮನೆಯೊಂದಿರುತ್ತೆ. 'ಅಜ್ಜಯ್ಯನ ಮನೆ'...  ಊರ...