Posts

Showing posts from September, 2022

ವಿಕ್ರಮ್ (2022) - ತಮಿಳು

Image
  ನಾನು ಮೊದಲಿನಿಂದಲೂ ಪ್ರತಿಪಾದಿಸುತ್ತಿರುವುದು ಒಂದೇ ವಿಷಯ. ಒಂದು ಸಿನೆಮಾ ಜನರ ಮನಸ್ಸಿಗೆ ತಟ್ಟಬೇಕೆಂದರೆ ಎರಡು ಅಂಶ ಬಹಳ ಮುಖ್ಯವಾಗುತ್ತದೆ. ಮೊದಲನೆಯದು "ಡೈಲಾಗ್ಸ್..." ಅದನ್ನು ಜನಸಾಮಾನ್ಯರಾದ ನಾವು ನಮ್ಮ ದಿನನಿತ್ಯದ ಬದುಕಿನಲ್ಲಿ ಮಾತನಾಡಿಕೊಳ್ಳುವ ಮೂಲಕ ಸಂಭ್ರಮಿಸುತ್ತೇವೆ. ಎರಡನೆಯದು "ಬಿಜಿಎಂ...." ವಿಕ್ರಮ್ ಸಿನೆಮಾದ ಬಿಜಿಎಂಗೆ ಹತ್ತಕ್ಕೆ ನೂರು ಅಂಕ‌ ಕೊಡಬಹುದು. ಯಾರು ಮರ್ರೇ ಅಷ್ಟೊಳ್ಳೇ ಮ್ಯೂಸಿಕ್ ಕ್ರಿಯೇಟ್ ಮಾಡಿದವರು? ಇಷ್ಟು ದಿನ ಅವರು ಎಲ್ಲಿ ಬಚ್ಚಿಟ್ಟುಕೊಂಡಿದ್ದರು? ಆ ಮ್ಯೂಸಿಕ್ಕಿಗೆ ತಕ್ಕ ಸಿನೆಮಾಟೋಗ್ರಫಿ... ಅದರ ನಂತರ ಕ್ರೆಡಿಟ್ ಪಡೆಯೋದು ಎಡಿಟಿಂಗ್.. ವಾಹ್! ಸಿನೆಮಾ ಅಂದ್ರೆ ಇದು.. ವಿಕ್ರಮ್ ಸಿನೆಮಾ ಸುಮ್ಮಸುಮ್ಮನೆ ಓಡಿರುವುದಲ್ಲ. ಬದಲಿಗೆ ಅದನ್ನೊಂದು ಅಭ್ಯಾಸ ವಸ್ತು ಎಂದು ತೆಗೆದುಕೊಂಡರೆ ಅದರಿಂದ ತುಂಬಾ ಕಲಿಯಬಹುದು. ಮೊದಲಿಗೆ ಯಾವ ನಟನಿಂದ ಸಿನೆಮಾವನ್ನು ಕ್ಯಾರಿ ಓವರ್ ಮಾಡಬೇಕು ಎನ್ನುವುದನ್ನು ನಿರ್ದೇಶಕರಿಂದ ಕಲಿಯಬೇಕು. ನಿಜ ಹೇಳಬೇಕೆಂದರೆ ನಾನು ಫಹಾದ್ ಫಾಸಿಲ್ ಗಾಗಿಯೇ ನೋಡಲು ಶುರು ಮಾಡಿದ್ದು. ಕಮಲ್ ಹಾಸನ್ ನಂತರ ಆವರಿಸುತ್ತಾ ಬಂದರು. ಆದರೆ ಮೊದಲು ನಮ್ಮನ್ನು ಬಿಗಿಯಾಗಿ ಕುರ್ಚಿಯಲ್ಲಿ ಕೂರಿಸಿದ್ದು ಫಾಸಿಲ್ ಮಹಾಶಯನೇ! ಸಿನೆಮಾವನ್ನು ಸಿನೆಮಾದಂತೆಯೇ ನೋಡಬೇಕು. ಆಗ ಅದು ಸಿನೆಮಾ ಎನಿಸುತ್ತದೆ. ಹೌದು.. ಅಲ್ಲಿ ಮ್ಯಾಜಿಕ್ ನಡೆಯಬೇಕು. ಹೀರೋ ಕಥ...