Posts

Showing posts from October, 2025

ಥಪ್ಪಡ್ (ಹಿಂದಿ)

Image
ಅದೊಂದು ಪಾರ್ಟಿ.  ಆ ಪಾರ್ಟಿಗೆ ಸುಮಾರು ನಲವತ್ತು ಜನ ಬಂದಿರುತ್ತಾರೆ. ಪಾರ್ಟಿಯ ಉದ್ದೇಶವೇ ಚಿತ್ರದ ನಾಯಕನಿಗೆ ಪ್ರಮೋಶನ್ ಸಿಕ್ಕಿರುವುದು. ಆದರೆ ಆ ಪ್ರಮೋಶನ್ ಅವನಿಗೆ ಸಿಗದೇ, ಬೇರೆಯವರಿಗೆ ಸಿಕ್ಕಿದೆ ಅಂತ ಗೊತ್ತಾದಾಗ, ನಾಯಕ ತನಗೆ ಅನ್ಯಾಯವಾಗಿದೆ ಅಂತ ಕೂಗಾಡುತ್ತಾನೆ.  ಆಗ ಎಲ್ಲರೂ ಅವನಿಗೆ ಸಮಾಧಾನ ಮಾಡಲು ಯತ್ನಿಸುತ್ತಾರೆ. ಆದರೆ ಅವನು ಕೇಳದೇ ಮತ್ತಷ್ಟು ವ್ಯಗ್ರನಾಗುತ್ತಾನೆ. ಅಷ್ಟರಲ್ಲಿ ಅವನ ಹೆಂಡತಿ ಸಮಾಧಾನಿಸಲು ಅವನ ಬಳಿಗೆ ಬರುತ್ತಾಳೆ. ಅಷ್ಟೇ, ಆತ ಅವಳಿಗೆ ಸಮಾ ಒಂದು ಬಿಡುತ್ತಾನೆ... ಥಪ್ಪಡ್!  ಅಲ್ಲಿಗೆ ಅವನ ಕೋಪ ಮುಗಿಯುತ್ತದೆ‌. ಆದರೆ ಆಕೆಗೆ?  ಅಲ್ಲಿ ಸುಮಾರು ನಲವತ್ತು ಜನರಿದ್ದರು. ಜೊತೆಗೆ ತನ್ನ ಬೆನ್ನಿಗೆ ಇರಿದ ವ್ಯಕ್ತಿಯೂ ಇದ್ದ. ಅವರಲ್ಲಿ ಯಾರಿಗೆ ಬೇಕಿದ್ದರೂ ನಾಯಕ ಹೊಡೆಯಬಹುದಿತ್ತು. ಮತ್ತೂ ಕೋಪವಿದ್ದರೆ ತನಗೆ ಪ್ರಮೋಶನ್ ಕೊಡದ ಬಾಸಿಗೇ ಹೋಗಿ ಬಾರಿಸಬಹುದಿತ್ತು. ಆದರೆ ಆತ ತನ್ನ ಕೋಪವನ್ನು ಹೊರಹಾಕಲು ಬಳಸಿಕೊಂಡಿದ್ದು ತನ್ನ ಪತ್ನಿಯನ್ನ!!  ಯಾಕೆ? ಹೇಗಿದ್ದರೂ ಹೆಂಡತಿ ತನಗೆ ತಿರುಗಿಸಿ ಹೊಡೆಯಲಾರಳು ಎನ್ನುವ ಕಾನ್ಫಿಡೆನ್ಸ್ ಇಂದಲಾ ಅಥವಾ ಬೇರೆ ಯಾರಿಗೆ ಹೊಡೆದರೂ ಅದು ಅಫೆನ್ಸೀವ್ ಆಗುತ್ತದೆ ಎಂಬ ಕಾರಣದಿಂದಲಾ? ಬೇರೆಯವರಿಗೆ ಹೊಡೆಯಲು ಇಲ್ಲದ ಶಕ್ತಿ- ಧೈರ್ಯ, ಹೆಂಡತಿಯನ್ನು ಹೊಡೆಯುವಾಗ ಮಾತ್ರ ಯಾಕೆ ಬರುತ್ತದೆ?  ಸಮಾಜ ಗಂಡುಮಕ್ಕಳಿಗೆ ಏನು ಹೇಳಿ ಬೆಳೆಸುತ್ತದೆ?  ಹೆ...