ಲಕ್ಕಿ ಭಾಸ್ಕರ್ (ತೆಲುಗು)
ನಾವು ಚಿಕ್ಕವರಿರುವಾಗ 'ದೊಡ್ಡವರಾದ ಮೇಲೆ ಒಳ್ಳೆಯವರಾಗಬೇಕು, ಕೆಲಸದಲ್ಲಿ ಪ್ರಾಮಾಣಿಕರಾಗಿರಬೇಕು' ಅಂತಲೇ ಎಲ್ಲರೂ ಹೇಳಿಕೊಡುತ್ತಾರೆ. ಅದೇ ರೀತಿ ಇರುವ ಪ್ರಯತ್ನ ಕೂಡಾ ನಾವು ಮಾಡುತ್ತೇವೆ. ಆದರೆ ಅದರಿಂದ ನಮಗೆ ಸಿಗುವುದು ಕೇವಲ ನಿಂದನೆ ಮತ್ತು ಅಪಮಾನ ಮಾತ್ರ. ಲಕ್ಕಿ ಭಾಸ್ಕರ್ ಕಥೆಯೂ ಅಂಥದ್ದೇ. ತನ್ನಲ್ಲಿರುವ ದುಡ್ಡಿನಿಂದ ತೃಪ್ತನಾಗಿ ಸಂಸಾರ ಮಾಡಿಕೊಂಡಿದ್ದ ಭಾಸ್ಕರ್ಗೆ, ಹೆಚ್ಚು ದುಡ್ಡು ಮಾಡಬೇಕು ಎಂಬ ಆಸೆ ಹುಟ್ಟಿಸಿದ್ದು ಇದೇ ಸಮಾಜ ಮತ್ತು ಸಮಾಜದ ಜನರು. ಅವರು ಮಾಡುವ ಮೋಸ ಮತ್ತು ಅವಮಾನಗಳಿಂದ ಪ್ರೇರಿತನಾಗಿ ಅವನು ದುಡ್ಡು ಮಾಡಲು ಹೊರಡುತ್ತಾನೆ. ಇಲ್ಲೊಂದು ವಿಷಯ ಹೇಳಬೇಕು. ಇದು ಬೇರೆಲ್ಲಾ ಸಿನಿಮಾಗಳಂತೆಯೇ ಶುರುವಾದರೂ, ಇದರ ನಾಯಕಿಯ ಪರಿಚಯ ತುಂಬಾ ವಿಶೇಷವಾಗಿತ್ತು. ಆಕೆಯನ್ನು ತುಂಬಾ ಮಹತ್ವದ ಪಾತ್ರ ಎನ್ನುವಂತೆ ಪರಿಚಯ ಮಾಡಿಸಿದ್ದು ನನಗಂತೂ ತುಂಬಾ ಇಷ್ಟವಾಯಿತು. ಇನ್ನು ಕಥೆಯ ವಿಚಾರಕ್ಕೆ ಬಂದರೆ... ಕಥೆ ನಮಗೆ ತುಂಬಾನೇ ಕನೆಕ್ಟ್ ಆಗುತ್ತದೆ. ಏಕೆಂದರೆ ನಾವು 90% ಜನ ಭಾಸ್ಕರನಂತೆಯೇ ಇದ್ದೇವೆ. ಮೇಲೆ ಏಳಲೂ ಆಗದೇ, ಕೆಳಗೆ ಬೀಳಲೂ ಸಹ ಆಗದೇ, ತ್ರಿಶಂಕುವಿನ ಥರಾ ಮಧ್ಯದಲ್ಲಿ ಸಿಲುಕಿಕೊಂಡಿದ್ದೇವೆ. ಒಳ್ಳೆಯ ಮನಸ್ಸು, ಒಳ್ಳೆಯ ಗುಣ, ಪ್ರಾಮಾಣಿಕತೆ ಇದೆಲ್ಲಾ ಇದ್ದರೂ ಕೂಡಾ, ಯಾರೂ ಗುರುತಿಸದೇ ಇರುವುದು ನಮಗೆ ನೋವುಂಟು ಮಾಡುತ್ತದೆ. ಹಾಗಾಗಿ ಇದರ ಪ್ರತ್ಯಕ್ಷ ಅನುಭವ ಇರುವವರಿಗ...