Posts

Showing posts from October, 2023

Irul (ಮಲಯಾಳಂ)

Image
ಇದ್ದ ಮೂವರಲ್ಲಿ ಕದ್ದವರು ಯಾರು ಎಂಬ ಗಾದೆಯಂತಿದೆ ಈ ಸಿನೆಮಾ. ಇರುವುದೇ ಮೂರು ಕ್ಯಾರೆಕ್ಟರುಗಳು. ಒಬ್ಬ ಹೀರೋ, ಒಬ್ಬಳು ಹೀರೋಯಿನ್, ಮತ್ತೊಬ್ಬ ವಿಲನ್. ಹೀರೋಯಿನ್ ಯಾರು ಅಂತ ನೋಡದೇ ಕೂಡಾ ಹೇಳಬಹುದು. ಆದರೆ ಹೀರೋ ಯಾರು, ವಿಲನ್ ಯಾರು ಅಂತ ಹೇಳುವುದಕ್ಕೆ ಮಾತ್ರ ಸಿನೆಮಾವನ್ನು ಕೊನೆಯವರೆಗೂ ನೋಡಬೇಕಾಗುತ್ತದೆ. ಅಲೆಕ್ಸ್ ಎಂಬಾತ ಒಬ್ಬ ಲೇಖಕ. ತನ್ನ ಮೊದಲ ಪುಸ್ತಕ 'ಇರುಳ್' ಅನ್ನು ಆಗಷ್ಟೇ ಲೋಕಾರ್ಪಣೆ ಮಾಡಿರುತ್ತಾನೆ. ಅದೊಂದು ಡಾರ್ಕ್ ಸಬ್ಜೆಕ್ಟ್. ಅಂದರೆ ಸರಣಿ ಹತ್ಯೆಗಳ ಕುರಿತಾದ ನಿಜವಾದ ಸುದ್ದಿಯನ್ನು ಆಧರಿಸಿ, ತನ್ನದೇ ದೃಷ್ಟಿಕೋನದಿಂದ ಆ ಪುಸ್ತಕ ಬರೆದಿರುತ್ತಾನೆ. ಸದಾ ಅದನ್ನೇ ಯೋಚಿಸುತ್ತಿದ್ದರಿಂದಲೋ ಏನೋ, ರಾತ್ರಿ ಮಲಗಿದಾಗ ಅವನಿಗೆ ಕೆಟ್ಟ ಕೆಟ್ಟ ಕನಸುಗಳು ಬೀಳುತ್ತಿರುತ್ತವೆ. ಅದರಿಂದ ಅವನು ತುಂಬಾ ಡಿಸ್ಟರ್ಬ್ ಆಗಿರುತ್ತಾನೆ. ಅವನು ಅದನ್ನು ಮರೆಯಬೇಕೆಂದು ತನ್ನ ಗೆಳತಿ ಅರ್ಚನಾ ಬಳಿ ಹೋದರೆ, ಅವಳು ತುಂಬಾ ಬ್ಯುಸಿ ಇರುತ್ತಾಳೆ. ಅವಳು ಲಾಯರ್ ಆಗಿರುವುದರಿಂದ ಸದಾಕಾಲವೂ ಕೇಸ್ ಬಗೆಗಿನ ಫೋನ್ ಬರುತ್ತಲೇ ಇರುತ್ತದೆ. ಅಲೆಕ್ಸ್ ಇದರಿಂದ ಬೇಸತ್ತು, ತಾವಿಬ್ಬರೂ ಒಂದೆರೆಡು ದಿನ ಹೊರಗೆ ಎಲ್ಲಾದರೂ ಹೋಗಿ ಬರೋಣ ಅಂತ ಕೇಳುತ್ತಾನೆ. ಅರ್ಚನಾ ಒಪ್ಪುತ್ತಾಳೆ. ಆದರೆ ಅಲೆಕ್ಸ್ ಒಂದು ಷರತ್ತು ವಿಧಿಸುತ್ತಾನೆ. ಏನೆಂದರೆ ಅರ್ಚನಾ ತನ್ನ ಜೊತೆಯಲ್ಲಿ ಮೊಬೈಲ್ ಫೋನ್ ತರಬಾರದು ಅಂತ. ಜೊತೆಗೆ ತಾವು ಜೊತೆಗಿದ್ದಷ್ಟು ಹೊತ್ತೂ ಪರಸ...

Source code (ಇಂಗ್ಲೀಷ್)

Image
  ನಾವು ಸತ್ತ ನಂತರ ಈ ಪ್ರಪಂಚ ಹೇಗಿರುತ್ತದೆ ಅಂತ ನಮಗೆ ಗೊತ್ತಾಗುವುದಿಲ್ಲ. ಏಕೆಂದರೆ ನಾವು ಸಾಯುತ್ತಿದ್ದಂತೆ, ಈ ಜಗತ್ತಿನ ಜೊತೆಗಿನ ನಮ್ಮ ಕೊಂಡಿ ಶಾಶ್ವತವಾಗಿ ಕಳಚಿಕೊಳ್ಳುತ್ತದೆ. ಆದರೆ ಒಂದು ವೇಳೆ ನಾವು ಸತ್ತ ನಂತರವೂ, ಮತ್ತೊಮ್ಮೆ ಬದುಕುವ ಅವಕಾಶ ಸಿಕ್ಕರೆ ಹೇಗಿರುತ್ತದೆ? ನಾನು ಈ ಸಿನೆಮಾವನ್ನು ನೋಡಿದ್ದು ಕೇವಲ ಕುತೂಹಲಕ್ಕಾಗಿ. ಆದರೆ ನಂತರ ತಲೆಗೆ ಎಂತಹಾ ಹುಳ ಬಿಟ್ಟ ಹಾಗಾಯ್ತು ಎಂದರೆ, ಈ ಸಿನೆಮಾ ಬಗೆಗಿನ ಎಲ್ಲಾ ಮಾಹಿತಿಯನ್ನೂ ರಾತ್ರಿಯಿಡೀ ಜಾಲಾಡುವಂತಾಯ್ತು. ಹಿಂದಿಯಲ್ಲಿ ಈ ಸಿನೆಮಾ ವಿವರಣೆಯನ್ನು ಹುಡುಕಿ ಹುಡುಕಿ ನೋಡಿದ್ದಾಯ್ತು. ನಂತರ ಸಿನೆಮಾವನ್ನೇ ಮತ್ತೆ ಮತ್ತೆ ಹಿಂದೆ, ಮುಂದೆ ಓಡಿಸಿದ್ದಾಯ್ತು. ಇಷ್ಟು ಮಾಡಿದ ನಂತರವೇ ನನಗೆ ಸಿನೆಮಾ ಅರ್ಥವಾಗಿರಬೇಕಾದರೆ, ಈ ಸಿನೆಮಾ ನೋಡದವರಿಗೆ ಅರ್ಥವಾಗುವ ಹಾಗೆ ಬರೆಯುವುದು ಹೇಗೆ? ನೋಡದವರು ಇರಲಿ, ನೋಡಿದವರಿಗೇ ಅರ್ಥ ಆಗಿರುವುದು ಅನುಮಾನ. ಇಂದಿಗೂ ಈ ಸಿನೆಮಾವನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಅಂತ ಜಗತ್ತಿನಾದ್ಯಂತ ಚರ್ಚೆಯಾಗುತ್ತಲೇ ಇದೆಯಂತೆ. ಮೊದಲಿಗೆ; ಸ್ಟೀವನ್ಸ್ ಎನ್ನುವ ಸೈನಿಕನಿಗೆ ಅಚಾನಕ್ಕಾಗಿ ಎಚ್ಚರವಾಗುತ್ತದೆ. ಆಗವನು ಒಂದು ಚಲಿಸುವ ಟ್ರೈನಿನೊಳಗೆ ಇರುತ್ತಾನೆ. ಅವನೆದುರು ಒಬ್ಬ ಅಪರಿಚಿತ ಯುವತಿ ಕುಳಿತಿರುತ್ತಾಳೆ. ಆದರೆ ಅವಳು ಸೈನಿಕನ ಪರಿಚಯ ಇರುವ ಹಾಗೆ ಮಾತನಾಡುತ್ತಾಳೆ. ಸೈನಿಕನಿಗೆ ಇಲ್ಲಿ ಏನು ನಡೆಯುತ್ತಿದೆ ಅಂತ ಅರ್ಥವಾಗುವುದಿಲ್ಲ. ಏಕೆಂದರೆ ...