Posts

Showing posts from August, 2022

Ekkadiki Pothavu Chinnavada (2016)

Image
  ತೆಲುಗು ಸಿನೆಮಾ (ಜಾನರ್: ಹಾರರ್ ಕಾಮೆಡಿ) ನಾಯಕನ ಮುಂದೆ ಅವಳು ನಿಂತಿದ್ದಾಳೆ.. ಅವಳ್ಯಾರು ಅಂತ ನಾಯಕನಿಗೆ ಗೊತ್ತಿಲ್ಲ. ಆದರೆ ಅವಳೊಳಗಿರುವ 'ಆತ್ಮ' ಅವನಿಗೆ ಪರಿಚಯವಿದೆ. ಅವಳ ಒಳಗಿರುವ ಆತ್ಮದ ಜೊತೆ ಅವನಿಗೆ ಪ್ರೀತಿ ಇದೆ. ಆದರೆ ಆ ದೇಹ ಅವನಿಗೆ ಪರಿಚಿತವಲ್ಲ. ಅವಳೋ ಅವನನ್ನು ಬಿಡಲಾಗದೇ ಸತ್ತ ಮೇಲೂ ಬೇರೊಂದು ದೇಹ ಹುಡುಕಿ, ಅದರೊಳಗೆ ಸೇರಿಕೊಂಡು ನಾಯಕನಿಗೋಸ್ಕರ ಬಂದು ನಿಂತಿದ್ದಾಳೆ. ಈಗ ನಾಯಕ ಅವಳನ್ನ ಒಪ್ಪಬೇಕೋ ಬೇಡವೋ? ಅವನ ಪ್ರೀತಿ ಆತ್ಮದ ಜೊತೆಗೋ ಅಥವಾ ದೇಹದ ಜೊತೆಗೋ? ಅವನು ಅವಳ ನಡವಳಿಕೆ, ಗುಣವನ್ನು ಪ್ರೀತಿಸಿದ ಮೇಲೆ ಅದೇ ನಡವಳಿಕೆ, ಗುಣ ಹೊಂದಿರುವ, ಆದರೆ ಬೇರೆ ದೇಹವಿರುವ ಅವಳನ್ನು ಒಪ್ಪುವುದು ಸರಿಯಾಗುತ್ತೋ ಅಥವಾ ತಪ್ಪಾಗುತ್ತೋ? ಸಿನೆಮಾ ನೋಡುವಾಗ ನಮ್ಮ ತಲೆಯೊಳಗೆ ಇಂಥಾ ಎಷ್ಟೋ ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ಇದೊಂಥರಾ ವಿಕ್ರಮ್ ಬೇತಾಳ್ ಕಥೆ ಇದ್ದ ಹಾಗೆ.. ಉತ್ತರ ಗೊತ್ತಿದ್ದರೂ ಹೇಗೆಂದು ಹೇಳಲಾಗೋಲ್ಲ!! ಸಿನೆಮಾದ ಒಂದು ಹಂತದಲ್ಲಿ ನಾಯಕಿ "ಒಬ್ಬರನ್ನ ಪ್ರೀತಿಸಬೇಕು ಅಂದ್ರೆ ಅವರಲ್ಲಿ ಯಾವ ಗುಣ ಇರಬೇಕಾಗತ್ತೆ?" ಅಂತ ನಾಯಕನನ್ನ ಕೇಳ್ತಾಳೆ. ಅದ್ಕೆ ನಾಯಕ "character, Behavior and Attitude" ಅಂತ ಉತ್ತರ ಕೊಡ್ತಾನೆ. ಆದರೆ ಈಗ ನಾಯಕನಿಗೇ ಫುಲ್ ಕನ್ಫ್ಯೂಷನ್!! ಯಾಕಂದ್ರೆ ಅವನೇ ಹೇಳಿದ ಹಾಗೆ 'character, Behavior and Attitude'...