Posts

Showing posts from March, 2023

13B (ಹಿಂದಿ)

Image
  ಸಿನೆಮಾ ಎಂದರೆ ಹೇಗಿರಬೇಕು? ಕೈಯಲ್ಲಿ ಪಾಪ್ ಕಾರ್ನ್ ಹಿಡಿದು ಕೂತರೆ ತಿನ್ನುತ್ತಿರುವುದೂ ನಮ್ಮರಿವಿ್ಗಗೆ ಬರಬಾರದು ಹಾಗಿರಬೇಕು. ಉಸಿರಾಡುತ್ತಿದ್ದೇವೆಯೋ ಇಲ್ಲವೋ ಎನಿಸುವಷ್ಟು ಸಿನೆಮಾದೊಳಗೆ ತಲ್ಲೀನರಾಗಬೇಕು. ಅಂತಹಾ ಒಂದು ಸಿನೆಮಾ ನೋಡಬೇಕೆನ್ನುವುದು ನಮ್ಮೆಲ್ಲರ ಆಸೆಯಾಗಿರುತ್ತದೆ. 13B ನೋಡುತ್ತಿದ್ದರೆ ನನಗೆ ಇದೇ ಅನುಭವವಾಯ್ತು. ಹೊಸದಾಗಿ 13B ಫ್ಲಾಟಿಗೆ ಒಂದು ಕುಟುಂಬ ಬರುತ್ತದೆ. ಅಂದೇ ಒಂದು ಹೊಸಾ ಸೀರಿಯಲ್ ಸಹ ಶುರುವಾಗುತ್ತದೆ. ಆ ಸೀರಿಯಲ್ ಕಥೆ ಇವರ ಮನೆ ಕಥೆಯ ರೀತಿಯೇ ಇರುತ್ತದೆ. ಆದರೆ ಮೊದಲಿಗೆ ಯಾರೂ ಅದನ್ನು ಗಮನಿಸುವುದಿಲ್ಲ. ಆದರೆ ಸ್ವಲ್ಪ ಸಮಯದಲ್ಲಿಯೇ ನಾಯಕನಿಗೆ ಈ ವಿಷಯ ಗೊತ್ತಾಗುತ್ತದೆ. ಮನೆಯಲ್ಲಿ ನಡೆಯುವ ಘಟನೆ ಆ ದಿನದ ಎಪಿಸೋಡಿನಲ್ಲಿ ಮೊದಲೇ ಗೊತ್ತಾಗಲು ತೊಡಗುತ್ತದೆ. ಇದನ್ನರ್ಥ ಮಾಡಿಕೊಂಡ ನಾಯಕ ತಾನೂ ಸೀರಿಯಲ್ ನೋಡಲು ತೊಡಗುತ್ತಾನೆ.‌ ಅಂದಂದಿನ ಎಪಿಸೋಡ್ ಗಮನಿಸಿ ಅದರಂತೆ ತನ್ನ ಮನೆಯವರನ್ನು ಮುಂದಾಗಬಹುದಾದ ಪ್ರಮಾದಗಳಿಂದ ಕಾಪಾಡುತ್ತಿರುತ್ತಾನೆ. ತಾನು ಮನೆಗೆ ಬರದೇ ಇದ್ದಂತಹ ದಿನಗಳಲ್ಲಿ ಅಮ್ಮನಿಗೋ ಹೆಂಡತಿಗೋ ಫೋನ್ ಮಾಡಿ ಇವತ್ತು ಸೀರಿಯಲ್ಲಿನಲ್ಲಿ ಏನಾಯ್ತು ಅಂತ ವಿಚಾರಿಸುತ್ತಿರುತ್ತಾನೆ. ಇದನ್ನು ನೋಡಿ ಅವರು ಇವನೂ ಸೀರಿಯಲ್ಲಿಗೆ ಅಡಿಕ್ಟ್ ಆದ ಅಂತ ಅವನನ್ನು ಆಡಿಕೊಳ್ಳುತ್ತಾರೆ. ಅತ್ಯಂತ ವೇಗದ ನಿರೂಪಣೆ, ನಮ್ಮ ಊಹೆಗೂ ಮೀರಿದ ಕಥಾವಸ್ತುಗಳಿಂದ ಸಿನೆಮಾ ಮುಂದೋಡುವುದೇ ಗೊತ್ತಾಗುವುದಿಲ್ಲ. ಹಾ...

"Escape from Taliban" (ಹಿಂದಿ)

Image
ಹೆಣ್ಣಿನ ಶೋಷಣೆಯ ಅತ್ಯಂತ ಕರಾಳ ಮುಖವಿರುವ ಸಿನೆಮಾ ಇದು. ಅದಷ್ಟೇ ಅಲ್ಲದೇ ಇದು "ಸುಷ್ಮಿತಾ ಬ್ಯಾನರ್ಜಿ" ಎನ್ನುವವರ ಆತ್ಮಕಥೆಯೂ ಸಹ ಆಗಿದೆ. ಅವರು ಬರೆದಿರುವ ತಮ್ಮದೇ ಜೀವನದ ಕಥೆಯನ್ನು ಇಲ್ಲಿ ಸಿನೆಮಾವನ್ನಾಗಿಸಲಾಗಿದೆ. ವಿಪರ್ಯಾಸ ಎಂದರೆ ಇದರ ಲೇಖಕಿಯನ್ನು 2013 ರಲ್ಲಿ ಹತ್ಯೆಗೈಯ್ಯಲಾಗಿದೆ. ಇದಕ್ಕೆ ಕಾರಣಗಳು ಹಲವಾರು ಇದ್ದರೂ, ಮುಖ್ಯವಾದ ಕಾರಣ ಆಕೆ ಸಂಪ್ರದಾಯದ ಪ್ರಕಾರ ಬುರ್ಖಾ ತೊಡುತ್ತಿರಲಿಲ್ಲ ಎನ್ನುವುದು. 1989 ರಲ್ಲಿ ಸುಷ್ಮಿತಾ ಬ್ಯಾನರ್ಜಿ ಎಂಬ ಸಂಪ್ರದಾಯಸ್ಥ ಮನೆತನದ ಯುವತಿ, ಆಫ್ಘಾನಿಸ್ತಾನದ ವ್ಯಾಪಾರಿ ಜಾನಬಾಜ ಖಾನ್ ಎಂಬುವವರನ್ನು ಮದುವೆಯಾಗಿ ಆತನ ಜೊತೆ ಆಫ್ಘಾನಿಗೆ ಕಾಲಿಟ್ಟ ನಂತರ ಆಕೆಯ ಜೀವನದ ದುರಂತದ ಸರಮಾಲೆಗಳು ಬಿಚ್ಚಿಕೊಳ್ಳುತ್ತವೆ. ಆಕೆ ಅಲ್ಲಿನ ರೀತಿ-ಕಟ್ಟಲೆಗಳನ್ನು ಸಹಿಸಿಕೊಂಡು ಹೇಗೋ ಬದುಕುತ್ತಿದ್ದಳೇನೋ? ಆದರೆ ಅಷ್ಟರಲ್ಲಿಯೇ ಒಂದು ಆಘಾತಕರ ವಿಷಯ ಅವಳಿಗೆ ಗೊತ್ತಾಗುತ್ತದೆ. ಏನೆಂದರೆ..... ಆಕೆಯ ಪತಿ ಜಾನಬಾಜ ಖಾನನಿಗೆ ಈಗಾಗಲೇ ಒಂದು ಮದುವೆಯಾಗಿದ್ದು, ಒಂದು ಮಗುವೂ ಇರುತ್ತದೆ.‌ ಇದನ್ನು ತಿಳಿದು ಅವಳ ಜಂಘಾಬಲವೇ ಉಡುಗಿ ಹೋಗುತ್ತದೆ. ಆದರೆ ಆಕೆಯ ಪತಿಯಾಗಲಿ ಅಥವಾ ಆ ಮನೆಯವರಿಗಾಗಲಿ ಇದೊಂದು ದೊಡ್ಡ ವಿಷಯವೇ ಆಗಿರುವುದಿಲ್ಲ. ಇವಳು ಈ ವಿಷಯವಾಗಿ ಮಾಡುವ ಗಲಾಟೆ ಅವರಿಗೆ ಕ್ಷುಲ್ಲಕವಾಗಿ ಕಾಣುತ್ತದೆ.‌ ಆಫ್ಘನ್ ಮಹಿಳೆಯರಿಗೆ ಆ ದೇಶದಲ್ಲಿ ಯಾವ ರೀತಿಯಾದ ಸ್ವಾತಂತ್ರವೂ ಇರುವುದಿಲ್ಲ. ವಿದ್ಯೆ...

"ಏಜೆಂಟ್ ಸಾಯಿ ಶ್ರೀನಿವಾಸ ಅತ್ರೇಯ" (ತೆಲುಗು)

Image
  ಹೆಸರೇ ಹೇಳುತ್ತದೆ ಸಿನೆಮಾದ ಕಥೆ ಏನೆಂದು. ಇದರಲ್ಲಿ ನಾಯಕ ಒಬ್ಬ ಡಿಟೆಕ್ಟೀವ್. ಅವನಿಗೊಬ್ಬ ಯುವತಿ ಅಸಿಸ್ಟೆಂಟ್. ಈತ ತನ್ನ ಅಸಿಸ್ಟೆಂಟ್ ಮುಂದೆ ತಾನು ಹಾಗೆ, ಹೀಗೆ ಅಂತ ಜಂಭ ಕೊಚ್ಚುತ್ತಾ ಇರುತ್ತಾನೆ. ಆದರೆ ವಾಸ್ತವವಾಗಿ ಹಾಗಿರದೇ ಜನರ ಮುಂದೆ ಅಪಹಾಸ್ಯಕ್ಕೆ ಈಡಾಗುತ್ತಾ ಇರುತ್ತಾನೆ. ಏನೇ ಆದರೂ ಆತನ ಟ್ಯಾಲೆಂಟ್‌ ಮೆಚ್ಚತಕ್ಕದ್ದು. ಆತನ ಪ್ರತಿಭೆಯನ್ನು ನಾವೂ ಸಹ ಒಪ್ಪಿಕೊಳ್ಳುವಂತಹಾ ಎರಡು ಮೂರು ಇನ್ಸಿಡೆಂಟುಗಳೂ ಸಹ ನಡೆಯುತ್ತವೆ. ಆದರೆ ಪೊಲೀಸರು ಮಾತ್ರ ಇವನನ್ನು ಕ್ರೈಂ ಸೀನಿನಿಂದ ಒದ್ದು ಆಚೆ ಕಳಿಸುತ್ತಿರುತ್ತಾರೆ. ಇವನು ಚೂರೂ ಸಹ ಬೇಜಾರು ಮಾಡಿಕೊಳ್ಳದೇ ತನ್ನ ತನಿಖೆ ಮುಂದುವರೆಸುತ್ತಾ ಇರುತ್ತಾನೆ. ಹೀಗೆಯೇ ಜೀವನ ಮೂರಕ್ಕಿಳಿಯದೇ ಆರಕ್ಕೇರದೇ ಸಾಗುತ್ತಿರುತ್ತದೆ. ಹೆಚ್ಚುಕಡಿಮೆ ಅರ್ಧ ಗಂಟೆಯವರೆ್ಗೂಗೂ ಹೀಗೆಯೇ ಹಾಸ್ಯಮಯವಾಗಿ ಸಾಗುತ್ತಿರುವ ಕಥೆ ನಂತರ ದಿಢೀರನೇ ಗಂಭೀರವಾದ ತಿರುವು ತೆಗೆದುಕೊಂಡುಬಿಡುತ್ತದೆ. ಯಾರೂ ಊಹಿಸಿಯೂ ಇರದ ತಿರುವು !!!! ಒಮ್ಮೆ ನಾಯಕನ ಸ್ನೇಹಿತನಾದ ಸಿರೀಶ್ ರೈಲ್ವೇ ಟ್ರಾಕುಗಳ ಪಕ್ಕ ಸಿಗುತ್ತಿರುವ ನಿಗೂಢ ಹೆಣಗಳ ಬಗ್ಗೆ ಹೇಳುತ್ತಾನೆ. 'ಆ ಹೆಣಗಳು ಯಾವುವು? ಎಲ್ಲಿಯವು? ಒಂದೂ ಗೊತ್ತಾಗಿಲ್ಲ. ಆದರೆ ಆಗಾಗ ಐದಾರು ಹೆಣಗಳು ಸಿಗುತ್ತಲೇ ಇರುತ್ತವೆ' ಎಂದು ಹೇಳುತ್ತಾನೆ. ನಾಯಕನಿಗೆ ಒಂದು ನಂಬಿಕೆ ಇರುತ್ತದೆ. ಏನೆಂದರೆ... ಇಂದಲ್ಲ ನಾಳೆ ತಾನು ದೊಡ್ಡದೊಂದು ಕೇಸ್ ಸಾಲ್ವ್ ಮಾಡಿ ಫೇಮಸ್ ಆಗ...

"ತುಮ್ಹಾರಿ ಸುಲು" (ಹಿಂದಿ)

Image
  ಹೆಸರು ಕೇಳಿ ಇದ್ಯಾವ ಭಾಷೆಯೋ ಎಂದುಕೊಳ್ಳದಿರಿ. 'ಸುಲು' ಎಂದರೆ ಸುಲೋಚನಾ. ಅವಳೇ ನಮ್ಮ ನಾಯಕಿ. ಅತ್ಯಧಿಕ ಆತ್ಮವಿಶ್ವಾಸ ಇರುವ, ಏನು ಕೂಡ ಸಾಧಿಸಬಲ್ಲೆ ಎಂಬ ಛಲ ಇರುವ, ನಿರಂತರ ಕಲಿಕೆಯ ಹಸಿವಿರುವ ಸುಲೋಚನಾ!! ಆದರೆ ಅಕಾಡೆಮಿಕ್ ಆಗಿ ಆಕೆ ಸೋತವಳು. ಅಂದರೆ ಅವಳು ಟೆನ್ತ್ ಫೇಲ್. ಹೈಸ್ಕೂಲ್ ಸಹ ಪಾಸ್ ಮಾಡಲಾಗದ ಸುಲೋಚನಾ ಬೇರೇನೂ ಸಾಧಿಸಲಾಗದೇ ಗೃಹಿಣಿಯಾಗಿ ಬಾಳುತ್ತಿರುತ್ತಾಳೆ. ಆದರೆ ಮಕ್ಕಳ ಸ್ಕೂಲಿನಲ್ಲಿ, ಹೌಸಿಂಗ್ ಸೊಸೈಟಿಯಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ತರುತ್ತಾ ತನ್ನನ್ನು ತಾನು ಉತ್ಸಾಹದ ಚಿಲುಮೆಯಾಗಿಸಿಕೊಂಡಿರುತ್ತಾಳೆ. ಆಕೆಯ ಗಂಡ ಒಂದು ಪ್ರೈವೇಟ್ ಕಂಪನಿಯಲ್ಲಿ ಮ್ಯಾನೇಜರ್. ಆಕೆಯೇ ಹೇಳುವ ಪ್ರಕಾರ ಹಸುವಿನಂತಹವನು. ಹೆಂಡತಿಯ ಯಾವ ಮಾತಿಗೂ ಇಲ್ಲ ಅಂದವನಲ್ಲ, ಆಕೆಯ ಯಾವುದೇ ಸಾಹಸ ಕಾರ್ಯಕ್ಕೂ ಬೇಡ ಅಂದವನೂ ಅಲ್ಲ. ಒಬ್ಬರೂ ಅನ್ಯೋನ್ಯವಾಗಿಯೇ ಇರುತ್ತಾರೆ. ಇಂತಹಾ ಸುಲೋಚನಾಳಿಗೆ ಒಮ್ಮೆ ಒಂದು ರೇಡಿಯೋ ಸ್ಟೇಷನ್ನಿಂದ ಬಹುಮಾನ ಗೆದ್ದಿರುವ ಬಗ್ಗೆ ಫೋನ್ ಬರುತ್ತದೆ. ಬಹುಮಾನ ತರಲು ಹೋದವಳಿಗೆ ಅಲ್ಲೊಂದು ಪೋಸ್ಟ್ ಕಾಣಸಿಗುತ್ತದೆ. ಏನೆಂದರೆ ಯಾರು ಬೇಕಾದರೂ ರೇಡಿಯೋ ಜಾಕಿ ಆಗಬಹುದು ಅಂತಿರುತ್ತದೆ. ಈಕೆ ಸೀದಾ ರೇಡಿಯೋ ಸ್ಟೇಷನ್ ಓನರ್ ಬಳಿ ಹೋಗಿ ತನಗೊಂದು ಚಾನ್ಸ್ ಕೊಡುವಂತೆ ಕೇಳುತ್ತಾಳೆ.‌ ಹೇಗೋ ಮಾಡಿ ಆ ಕೆಲಸ ಗಿಟ್ಟಿಸಿಕೊಂಡೂ ಬಿಡುತ್ತಾಳೆ. ನೀವೇ ಯೋಚಿಸಿ.... ಆಕೆ ಟೆನ್ತ್ ಫೇಲ್. ವೈಟ್ ಕಾಲರ್...

"ವಿ" (ಕನ್ನಡ)

Image
  ಇದು ತೆಲುಗಿನ ಚಿತ್ರವಾದರೂ ಸಹ ಕನ್ನಡದಲ್ಲಿ ಅಚ್ಚುಕಟ್ಟಾಗಿ ಡಬ್ ಆಗಿ ಮೂಡಿಬಂದಿದೆ. ನಟ-ನಟಿಯರೆಲ್ಲ ತೆಲುಗಿನವರು. ಆದರೆ ಚಿತ್ರ ಕನ್ನಡದ್ದೇ ಎಂಬ ಆಪ್ತತೆ ಕೊಡುತ್ತದೆ. ಈ ಚಿತ್ರದಲ್ಲಿ ಇಬ್ಬರು ಹೀರೋಗಳಿದ್ದಾರೆ. ಒಬ್ಬ ನಾಯಕ. ಮತ್ತೊಬ್ಬ ಪ್ರತಿನಾಯಕ. ಅಭಿನಯದಲ್ಲಿ ಇಬ್ಬರೂ ಸಮನಾದ ಪೈಪೋಟಿ ನೀಡಿದ್ದಾರೆ. ಜೊತೆಗೆ ಇಬ್ಬರು ನಾಯಕಿಯರೂ ಸಹ ಮುದ್ದಾಗಿದ್ದಾರೆ. ಕಥೆಯೇನು ಅಂದ್ರಾ? ಹೀರೋ ಒಬ್ಬ ಪೊಲೀಸ್ ಆಫೀಸರ್. ಒಂದು ದಂಗೆಯನ್ನು ಯಶಸ್ವಿಯಾಗಿ ಹತ್ತಿಕ್ಕಿದ ಎಂಬ ಕಾರಣಕ್ಕೆ ಆತನಿಗೆ ಸರ್ಕಾರದಿಂದ ಗ್ಯಾಲಂಟ್ರಿ ಅವಾರ್ಡ್ ಸಿಗುತ್ತದೆ. ಆದರೆ ಆ ಅವಾರ್ಡ್ ಸಿಕ್ಕ ಕಾರಣಕ್ಕಾಗಿಯೇ ಪ್ರತಿನಾಯಕ ನಾಯಕನಿಗೆ ಒಂದು ಟಾಸ್ಕ್ ಕೊಡುತ್ತಾನೆ. ತಾನು ಐದು ಕೊಲೆ ಮಾಡುವುದಾಗಿಯೂ, ಅದನ್ನು ತಡೆದರೆ ನಾಯಕ ಆ ಅವಾರ್ಡಿಗೆ ಅರ್ಹನೆಂದೂ, ಒಂದು ವೇಳೆ ಕೊಲೆಗಳನ್ನು ಅವನಿಂದ ತಡೆಯಲು ಆಗದಿದ್ದರೆ ನಾಯಕ ಗ್ಯಾಲಂಟ್ರಿ ಅವಾರ್ಡ್ ಅನ್ನು ಸರ್ಕಾರಕ್ಕೆ ವಾಪಸ್ ಮಾಡಬೇಕೆಂದು ಚಾಲೆಂಜ್ ಮಾಡುತ್ತಾನೆ. ನಾಯಕ ಈ ಚಾಲೆಂಜ್ ಅನ್ನು ಸ್ವೀಕರಿಸುತ್ತಾನೆ. ಆದರೆ ನಾಯಕನಿಂದ ಆ ಕೊಲೆಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ. ಪ್ರತೀಬಾರಿಯೂ ಪ್ರತಿನಾಯಕನೇ ಗೆಲ್ಲುತ್ತಾ ಹೋಗುತ್ತಾನೆ. ಕಡೆಗೆ ಐದನೇ ಕೊಲೆಯೂ ನಡೆದುಬಿಡುತ್ತದೆ. ನಾಯಕ ಕೂಡಲೇ ಪ್ರೆಸ್ ಮೀಟ್ ಕರೆದು ಸರ್ಕಾರ ತನಗೆ ಕೊಟ್ಟಿದ್ದ ಅವಾರ್ಡ್ ವಾಪಸ್ ಮಾಡಿ ರಾಜೀನಾಮೆ ಕೊಟ್ಟು ಹೊರ ನಡೆಯುತ್ತಾನೆ. ಹಾಗಾದರೆ ನಾಯಕ ಸೋ...

"ಅಶ್ವತ್ಥಾಮ" (ತೆಲುಗು)

Image
  ನಾಯಕ ತನ್ನ ತಂಗಿಯ ನಿಶ್ಚಿತಾರ್ಥಕ್ಕೆಂದು ಭಾರತಕ್ಕೆ ಬರುತ್ತಾನೆ. ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದು ಮದುವೆ ದಿನಾಂಕ‌ ಫಿಕ್ಸ್ ಆಗುತ್ತದೆ. ನಾಯಕಿಯ ತಂಗಿ ಅಂತೂ ತುಂಬಾ ಖುಷಿಯಲ್ಲಿ ಇರುತ್ತಾಳೆ. ಆ ರಾತ್ರಿ ಎಲ್ಲರೂ ಖುಷಿ-ಖುಷಿಯಿಂದ ನಿದ್ರಿಸುತ್ತಾರೆ. ಆದರೆ ಅದೇ ರಾತ್ರಿ ನಾಯಕನ ತಂಗಿ ಆತ್ಮಹತ್ಯೆಗೆ ಪ್ರತ್ನಿಸುತ್ತಾಳೆ....!!!! ನಾಯಕನಿಗೆ ಅದು ಗೊತ್ತಾಗಿ ಅದನ್ನು ತಡೆಯುತ್ತಾನೆ. ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಕ್ಕೆ ಕಾರಣ ಆಕೆ ಗರ್ಭಿಣಿಯಾಗಿರುವುದು ಅಂತ ಅವಳು ಹೇಳುತ್ತಾಳೆ. ನಾಯಕನಿಗೆ ಏನು ಹೇಳುವುದು ಅಂತ ಗೊತ್ತಾಗುವುದಿಲ್ಲ. ಇಲ್ಲಿ ನೋಡಿದರೆ ಮದುವೆ ಫಿಕ್ಸ್ ಆಗಿದೆ, ತಂಗಿ ನೋಡಿದರೆ ಮದುವೆಗೂ ಮೊದಲೇ ಪ್ರೆಗ್ನೆಂಟ್... ನಾಯಕನಿಗೆ ಮತ್ತಷ್ಟು ಷಾಕ್ ಆಗುವುದು ಆಕೆಗೆ ಈ ಗರ್ಭಕ್ಕೆ ಕಾರಣ ಯಾರು ಅಂತಲೇ ಗೊತ್ತಿಲ್ಲ ಎಂದಾಗ !!! ಒಬ್ಬ ಹೆಣ್ಣು ತನಗೆ ಅರಿವಿಲ್ಲದೇ ಗರ್ಭಿಣಿಯಾಗಲು ಹೇಗೆ ಸಾಧ್ಯ ಅಂತ ನಾಯಕ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ಳುತ್ತಾನೆ. ಕಡೆಗೆ ಈ ವಿಷಯವನ್ನು ತನ್ನ ತಂಗಿಯನ್ನು ಮದುವೆಯಾಗಲಿರುವ ಹುಡುಗನ ಬಳಿ ಮುಚ್ಚುಮರೆಯಿಲ್ಲದೇ ಹೇಳಿ, ಆ ಹುಡುಗನ ಒಪ್ಪಿಗೆ ಮೇರೆಗೆ ತಂಗಿಗೆ ಅಬಾರ್ಷನ್ ಮಾಡಿಸಿ, ಅದೇ ಮುಹೂರ್ತದಲ್ಲಿ ಅದೇ ಹುಡುಗನೊಂದಿಗೆ ಮದುವೆ ಮಾಡಿ ಕಳಿಸುತ್ತಾನೆ. ತಂಗಿಯ ಗಂಡ ದೊಡ್ಡ ಮನಸ್ಸಿನಿಂದ ಇದೆಲ್ಲವನ್ನೂ ಕ್ಷಮಿಸುತ್ತಾನೆ. ತಂಗಿ ಅತ್ತ ಹೋದ ಕೂಡಲೇ ಇದಕ್ಕೆ ಯಾರು ಕಾರಣ ಅಂತ ಹುಡುಕಲು ತೊಡಗುತ್ತ...

"Imaikka Nodigal" (ತಮಿಳು)

Image
  ಕಣ್ಣು ಮಿಟುಕಿಸದೇ ಈ ಸಿನೆಮಾ ನೋಡಿ! ಹೌದು.. ಸಿನೆಮಾದ ಕಥೆಯೇ ಹಾಗಿದೆ. ಒಂದಲ್ಲ ಎರಡಲ್ಲ.... ಸಿನೆಮಾ ಪೂರ್ತಿ ಟ್ವಿಸ್ಟೋ ಟ್ವಿಸ್ಟು. ಅವನು ವಿಲನ್... ಅಲ್ಲಲ್ಲ ಇವನು.. ಅಯ್ಯೋ ಇವನಲ್ಲ ಅವನೇ ವಿಲನ್ ಅಂತ ಕೊನೆವರೆಗೂ ಈ 'ವಿಲನ್' ಯಾರು ಅನ್ನೋ ನಿರ್ಧಾರಕ್ಕೆ ಬರಲಾಗದೇ ಉಗುರು ಕಚ್ಚುತ್ತಾ ಮುಂದೇನು ಅಂತ ನೋಡುವಂತಾಗುತ್ತದೆ. ಕಥೆ ಏನು ಅಂದ್ರಾ? ಇದು ಸಹ ಮಾಮೂಲಿ ಸೀರಿಯಲ್ ಕಿಲ್ಲರ್ ಕೇಸ್. ಕಥೆ ನಡೆಯುವುದು ಬೆಂಗಳೂರಿನಲ್ಲಿ. ಖಳನಾಯಕನ ಹೆಸರು "ರುದ್ರ". ದೊಡ್ಡ ಮನುಷ್ಯರ ಮಕ್ಕಳನ್ನ ಕಿಡ್ನಾಪ್ ಮಾಡುವುದು, ಅವರ ಬಿಡುಗಡೆಗೆ ಹಣ ಕೇಳುವುದು, ಹಣ ಪಡೆಯುವುದು ಮಾಡುತ್ತಿರುತ್ತಾನೆ. ಆದರೆ ಹಣ ಪಡೆದ ಮೇಲೆ ಕಿಡ್ನಾಪ್ ಮಾಡಿದವರನ್ನು ಬಿಡುಗಡೆ ಮಾಡದೇ ಸಾಯಿಸುತ್ತಿರುತ್ತಾನೆ. ಇದು ರುದ್ರನ ಸ್ಪೆಷಾಲಿಟಿ. ಆದರೆ ಇದೇ ರೀತಿಯ ಸೀರಿಯಲ್ ಕಿಲ್ಲರ್ ಆಗಿದ್ದ ರುದ್ರ ಎಂಬ ವ್ಯಕ್ತಿಯನ್ನು ನಾಯಕಿ ಕಂ ಸಿಬಿಐ ಅಧಿಕಾರಿ ಆಗಿರುವ ಅಂಜಲಿ ನಾಲ್ಕು ವರ್ಷದ ಕೆಳಗೇ ಎನ್ಕೌಂಟರ್ ಮಾಡಿ ಸಾಯಿಸಿರುತ್ತಾಳೆ. ಅಂದ್ಮೇಲೆ "ರುದ್ರ" ಮತ್ತೆ ಹೇಗೆ ಬದುಕಿ ಬರಲು ಸಾಧ್ಯ? ಇಲ್ಲಿ ಬೇರೇನೋ ಇದೆ ಅಂತ ಯೋಚಿಸುವಷ್ಟರಲ್ಲಿ ಆ ರುದ್ರನಿಂದ ಮತ್ತೊಂದು ಕಿಡ್ನಾಪಿಂಗ್ ಮತ್ತು ಕೊಲೆ ನಡೆಯುತ್ತದೆ. ಈ ಬಾರಿ ರುದ್ರ ಅಂಜಲಿಗೇ ನೇರ ಚಾಲೆಂಜ್ ಹಾಕಿ ತಾಕತ್ತಿದ್ದರೆ ಅದನ್ನು ತಡೆಯಲು ಹೇಳಿರುತ್ತಾನೆ. ಆದರೂ ಅಂಜಲಿ ವಿಫಲಳಾಗುತ್ತಾಳೆ. ಮತ್ತೊಂದ...

"ಬದ್ರೀನಾಥ್ ಕೀ ದುಲ್ಹನಿಯಾ" (ಹಿಂದಿ)

Image
  ಬಾಲಿವುಡ್ ಸಿನೆಮಾಗಳು ಎಂದರೆ ತಟ್ಟನೆ ಮನಸ್ಸಿಗೆ ಹೊಳೆಯುವುದು ಪ್ರೀತಿ-ಪ್ರೇಮ ಮಾತ್ರ. ಅಂತಹಾ ಸಿನೆಮಾಗಳು ಕೇವಲ ಸಮಯ ಕಳೆಯಲು ಮಾಡಿರುವಂಥವೇ ಹೊರತೂ ಅವುಗಳಿಂದ ಕಲಿಯುವಂಥದ್ದೇನಿಲ್ಲ. ಈ ಸಿನೆಮಾ ಕೂಡ ಅಂಥದ್ದೇ ಕ್ಯಾಟೆಗರಿ ಅಂತ ಬಹಳ ವರ್ಷಗಳ‌ ಕಾಲ ಇದನ್ನು ನೋಡಲು ಹೋಗಿರಲಿಲ್ಲ. ಆದರೆ ನೋಡಿದ ನಂತರ ನಾನೇನು ಕಳೆದುಕೊಂಡಿದ್ದೆ ಅಂತ ಅರಿವಾಯ್ತು. ನೇರವಾಗಿ ಹೆಣ್ಣುಮಕ್ಕಳ ಮದುವೆಯ ಸಂಕಷ್ಟ ಮತ್ತು ವರದಕ್ಷಿಣೆಯ ಕುರಿತಾಗಿ ಇದರಲ್ಲಿ ಚಿತ್ರಿಸಲಾಗಿದೆ. ಒಬ್ಬ ಮಿಡಲ್ ಕ್ಲಾಸ್ ತಂದೆ, ತಾನು ಜೀವಮಾನವಿಡೀ ದುಡಿದ ದುಡ್ಡನ್ನು ತನ್ನ ಹೆಣ್ಣುಮಕ್ಕಳ  ಒಂದು ದಿನದ ಮದುವೆಗೆ ಉಡಾಯಿಸಬೇಕಾಗಿರುತ್ತದೆ. ಆ ಮದುವೆಗಾಗಿ ಆತ ಪಡುವ ಪಾಡು, ಹೆಚ್ಚು ಹೆಣ್ಣುಮಕ್ಕಳು ಇದ್ದಷ್ಟೂ ಬೆಳೆಯುವ ಆತನ ಖರ್ಚು ಇವೆಲ್ಲವನ್ನೂ ಸಿನೆಮಾದಲ್ಲಿ ಮನವರಿಕೆ ಮಾಡಲಾಗಿದೆ. ಕೇವಲ ಮಿಡಲ್ ಕ್ಲಾಸಿನವರಿಗಷ್ಟೇ ಅರ್ಥವಾಗಬಹುದಾದ ಸಂಗತಿಗಳಿವು. ಹಾಗಾಗಿ ಶ್ರೀಮಂತ ಮನೆತನದಿಂದ ಬಂದಂತಹ ನಾಯಕನಿಗೆ ಸೂಕ್ಷ್ಮತೆಯಿಲ್ಲ. ತಾನು ಮೆಚ್ಚುವ ಹುಡುಗಿ ತನ್ನನ್ನು ಮದುವೆಯಾದರೆ ಅದು "ಆಕೆಯ ಅದೃಷ್ಟ" ಅಂತ ನಂಬಿರುವವನು. ಹಾಗಾಗಿ ನಾಯಕಿ ಆತನನ್ನು ಮದುವೆಯಾಗಲು ತಿರಸ್ಕರಿಸಿದಾಗ ಅವನಿಗೆ ನಂಬಲೇ ಆಗುವುದಿಲ್ಲ. ನಾಯಕನ ಮನೆತನ ಬಹಳ ಶಿಸ್ತಿನ ಫ್ಯಾಮಿಲಿ. ಅದರಲ್ಲಿ ಸೇರುವ ಹೆಣ್ಣುಮಕ್ಕಳು ಆ ಮನೆತನದ ಹಿರಿಯರ ಮಾತು ಮೀರುವಂತಿಲ್ಲ. ಎಷ್ಟೇ ಓದಿದ್ದರೂ, ಟಾಪ್ ಬಂದಿದ್ದರೂ ಹೊರಗೆ ಕೆಲಸ ಮ...

"ಅಳಿದು ಉಳಿದವರು" (ಕನ್ನಡ)

Image
  ಕಣ್ಮುಂದೆ ಕಾಣುವುದಷ್ಟೇ ಸತ್ಯ ಎಂದು ಅಂದುಕೊಳ್ಳುತ್ತೇವೆ ನಾವು. ಆದರೆ ನಮಗೆ ಕಾಣದ ಎಷ್ಟೋ ಸತ್ಯಗಳು ಈ ಪ್ರಪಂಚದಲ್ಲಿವೆ. ನಾವು ಏನನ್ನಾದರೂ ಕಾಣಲು ಕಣ್ಣೇ ಆಧಾರ. ಅಕಸ್ಮಾತ್ ಯಾವುದಾದರೊಂದು ಘಟನೆ ನಾವು ಕಣ್ಮುಚ್ಚಿರುವಾಗ ನಡೆ್ದದುಬಿಟ್ಟರೆ ನಮಗೆ ಅದರ ಅರಿವೇ ಇರುವುದಿಲ್ಲ. ಕಣ್ಣಿಗೆ ಕಂಡಿ್್ದದ್ದಷ್ಟೇ ಸತ್ಯ ಅಂತ ತಿರುಗುತ್ತಿರುತ್ತೇವೆ. ನಾಯಕ ಶೀಲಂ ಇಂತಹಾ ವ್ಯಕ್ತಿತ್ವದವನು. ಯಾರೂ ಕಾಣದ್ದನ್ನು ತಾನು ಕಾಣಬೇಕೆಂಬ ಹಂಬಲ.‌ ಇದುವರೆಗೂ ಜನರ ಕಲ್ಪನೆಗಳಲ್ಲಷ್ಟೇ ಮನೆಮಾಡಿರುವ ದೆವ್ವ-ಭೂತಗಳನ್ನು ಕಣ್ಣಾರೆ ಕಾಣಬೇಕೆಂಬ ಕುತೂಹಲ ಆತನಿಗೆ. ಅದಕ್ಕಾಗಿ ಹಗಲೂ-ರಾತ್ರಿ ಕ್ಯಾಮೆರಾ ಹೊತ್ತು ತಿರುಗುತ್ತಾನೆ. ಕ್ಯಾಮೆರಾ ಯಾಕೆ ಅಂದ್ರಾ? ತಾನು ಕಂಡ "ಸತ್ಯ"ವನ್ನು ಜನರಿಗೂ ತಿಳಿಸುವುದಕ್ಕೆ 🤗🤗 ಒನ್ಸ್ ಎಗೇನ್.. ಕಣ್ಣಿಗೆ ಕಾಣುವ "ಸತ್ಯ"ವನ್ನು ಮಾತ್ರ! ಒಂದು ಚಾನೆಲ್ಲಿನಲ್ಲಿ ಅವನ ಈ ಕಾರ್ಯಕ್ರಮ ಭರ್ಜರಿ ಟಿಆರ್ಪಿ ಗಳಿಸಿರುತ್ತದೆ. ಕಾಣದ ವಿಷಯಗಳ ಬಗ್ಗೆ ಜನರಿಗೆ ಕುತೂಹಲ‌ ಜಾಸ್ತಿ. ಹಾಗಾಗಿ ಅವನ ಈ ಕಾರ್ಯಕ್ರಮ ಯಾವುದೇ ಅಡೆತಡೆಯಿಲ್ಲದೇ ತೊಂಬತ್ತೊಂಬತ್ತು ಎಪಿಸೋಡ್ ಮುಗಿಸಿರುತ್ತದೆ. ಆದರೆ ಇಷ್ಟು ಎಪಿಸೋಡುಗಳಲ್ಲಿಯೂ ಆತನಿಗೆ ದೆವ್ವ-ಭೂತಗಳ ಇರುವಿಕೆಯ ಬಗ್ಗೆ ಒಂದು ಚಿಕ್ಕ ಸುಳಿವು ಸಹ ದೊರಕಿರುವುದಿಲ್ಲ. ಹಾಗಾಗಿ ಅವುಗಳನ್ನು ಕಣ್ಣಾರೆ ಕಾಣದ ಆತ ದೆವ್ವ-ಭೂತಗಳು ಮನಸ್ಸಿನ ಭ್ರಮೆ ಮಾತ್ರ ಅಂತ ತೀರ್ಮಾನಿಸಿರುವ ಸಾಧ್ಯ...

"ಫ್ರೆಂಚ್ ಬಿರಿಯಾನಿ" 🏆🌟🌟🌟

Image
ಇದು ಭಾರತ ❤ ಸರ್ವ ಜನಾಂಗದ ಶಾಂತಿಯ ತೋಟ... ಸರ್ವ ಸಹಿಷ್ಣು ದೇಶ ನಮ್ಮದು... "ಅತಿಥಿ ದೇವೋಭವ" ಇಲ್ಲಿನ ಘೋಷ ವಾಕ್ಯ. ನಾವೂ ಮನಸ್ಸಲ್ಲಿ ಹಾಗೇ ಅಂದ್ಕೊಂಡಿರ್ತೀವಿ. ಇಲ್ಲಿಗೆ ಬರೋ ಫಾರಿನ್ನರುಗಳೆಲ್ಲ ಚಂದದ ಆತಿಥ್ಯ ಪಡೆದು, ಕೇವಲ ಸಿಹಿ ನೆನಪುಗಳನ್ನು ಮಾತ್ರ ಹೊತ್ತು ತಮ್ಮ ದೇಶಕ್ಕೆ ಹೋಗಿರ್ತಾರೆ ಅಂತ. ಆದರೆ ಕೆಲವು ಫಾರಿನ್ನರುಗಳ ತಿಥಿಯೂ ಆಗುತ್ತದೆ ಅಂತ ನಮಗೆ ಗೊತ್ತಿತ್ತಾ? ಗೊತ್ತಿರಲಿಲ್ಲ ಅಲ್ವಾ? ಅದೂ ಭಾಷೆ ಬರದ ನಾಡಲ್ಲಿ ಮೊದಲ ಬಾರಿ ಲ್ಯಾಂಡ್ ಆದ ಫಾರಿನಪ್ಪನ ಕಥೆ ಬೇಡ. ಡಾನ್ ಉವಾಚ: "ಸೋಲೋಮನ್ ಸಾಮಾನ್ ಕೊಡ್ತಾನೆ, ಸುಲೇಮಾನ್ ಕೈಲಿ ತರಿಸು" ಈ ಹೆಸರುಗಳನ್ನು ಹೇಗೆ ನೆನಪಿಟ್ಕೊಳ್ಳೋದು? ಇದೊಂಥರಾ ಗುಂಡ "ಕಡುಬು ಕಡುಬು" ಅಂದ್ಕೊಂಡ ಹಾಗೆ. ಡಾನ್ ಮಗ ಮಣಿಗೆ ಹೆಸರುಗಳು ಕನ್ಫ್ಯೂಸ್ ಆಗಿ ಸುಲೇಮಾನ್, ಸೋಲೋಮನ್ ಎಲ್ಲವೂ ಮರೆತೋಗಿ ಸಾಮಾನೊಂದೇ ನೆನಪಿರುತ್ತೆ.. ಹೋಗಲಿ, ಆ "ಸಾಮಾನ್" ಆದರೂ ಏನು? ನಮಗೂ ಗೊತ್ತಿಲ್ಲ, ಪಾತ್ರಗಳಿಗೂ ಗೊತ್ತಿಲ್ಲ. ಆದರೆ ಫಾರಿನ್ನಿಂದ ಬರೋ ಮಾಲು "ಡ್ರಗ್" ಆಗಿರಲೇಬೇಕು ಅಂತಲೇ ಎಲ್ಲರ ತೀರ್ಮಾನ. ಹಾಗಾಗಿ ಆ ಡ್ರಗ್ ಬ್ಯಾಗಿಗಾಗಿ ಪೊಲೀಸು, ಡಾನ್ ಆದಿಯಾಗಿ ಎಲ್ಲರೂ ಸೈಮನ್ ಬೆನ್ನು ಬೀಳ್ತಾರೆ. ಇರಿ ಇರಿ... ಈ ಸೈಮನ್ ಯಾರು? ಅವನೇ... ತಿಥಿಯಾಗುವ ನಮ್ಮ ದೇಶದ ಅತಿಥಿ ಅವನು ಭಾರತಕ್ಕೆ ಕಾಲಿಟ್ಟಾಗಿಲಿಂದಲೂ ಗೊಂದಲವೋ ಗೊಂದಲ. ಮೊದಲಿಗೆ ಕ್ಯಾಬ್ ಮ...

"Vijetha" (ತೆಲುಗು)

Image
  ಕಥೆಯ ಸಾರಾಂಶ: ಈವರೆಗೂ ಸಿನೆಮಾ ಎಂದರೆ ಕೇವಲ ಪ್ರೀತಿ-ಪ್ರೇಮದ ಕುರಿತಾದದ್ದು ಅಂತ ಅಂದುಕೊಳ್ಳುತ್ತಿದ್ದೆವು. ಆದರೆ ಬದಲಾಗುತ್ತಿರುವ ಜಗತ್ತಿನ ಜೊತೆ ಸಿನೆಮಾ ರಂಗವೂ ಬದಲಾಗುತ್ತಿದೆ. ಈಗ ಪರಿಚಯಿಸುತ್ತಿರುವ ತೆಲುಗು ಸಿನೆಮಾ ತಂದೆ-ಮಗನ ಬಾಂಧವ್ಯದ ಬಗ್ಗೆ ಹೇಳುತ್ತದೆ. ಸಿನೆಮಾ ಮುಗಿಯುವಷ್ಟರಲ್ಲಿ ಕಣ್ಣಿನಿಂದ ಆನಂದ ಭಾಷ್ಪ ಉದುರದಿದ್ದರೆ ನೋಡಿ...  ನಾನು ಸಿನೆಮಾ ನೋಡಿದ್ದು ಹಿಂದಿಯಲ್ಲಿ. ಶ್ರೀನಿವಾಸ ರಾವ್ ಎಂಬಾತನಿಗೆ ಚಿಕ್ಕಂದಿನಿಂದಲೂ ಫೋಟೋಗ್ರಫಿ ಹುಚ್ಚು. ಬಹಳ ಆಸಕ್ತಿಯಿಂದ ಫೋಟೋ ತೆಗೆದು ವಿವಿಧ ಪತ್ರಿಕೆಗಳಿಗೆ ಕಳಿಸುತ್ತಿರುತ್ತಾನೆ. ಅವನು ತೆಗೆದ ಫೋಟೋಗಳನ್ನು ಮೆಚ್ಚುವ National Geographic ಮ್ಯಾಗಜೀನ್ ನವರು ಆತನನ್ನು ದೆಹಲಿಗೆ ಬರಲು ಹೇಳುತ್ತಾರೆ. ಅವನೂ ಸಂತಸದಿಂದಲೇ ಹೊರಡಲು ತಯಾರಾಗುತ್ತಾನೆ. ಆದರೆ ಅಷ್ಟರಲ್ಲೇ ನಡೆಯುವ ಪುಟ್ಟ ಅಪಘಾತದಲ್ಲಿ ಆತನ ಮಗನಿಗೆ ಗಂಭೀರ ಗಾಯವಾಗುತ್ತದೆ. ಆಪರೇಷನ್ನಿಗೆ ಲಕ್ಷಾಂತರ ಖರ್ಚಾಗುತ್ತದೆ. ಅದಕ್ಕಾಗಿ ಶ್ರೀನಿವಾಸ್ ರಾವ್ ತನ್ನ ಹವ್ಯಾಸವನ್ನು ಮೊಟಕುಗೊಳಿಸಿ ಕುಟುಂಬದವರ ಪಾಲನೆಗಾಗಿ ಆ ಊರಿನಲ್ಲಿಯೇ ಒಂದು ಕೆಲಸ ಹಿಡಿಯುತ್ತಾನೆ. ಅವನ ಪೂರ್ತಿ ಜೀವನ ತನ್ನ ಹೆಂಡತಿ ಮಕ್ಕಳಿಗಾಗಿ ಮುಡಿಪಾಗಿಡುತ್ತಾನೆ. ಅದರಲ್ಲಿಯೂ ತನ್ನ ಮಗನಾದ ರಾಮನಿಗಾಗಿ ಆತ ಬಹಳ ತ್ಯಾಗಗಳನ್ನು ಮಾಡುತ್ತಾನೆ. ಚಿಕ್ಕಂದಿನಿಂದ ಮಗ ಆಸೆ ಪಟ್ಟ ಎಲ್ಲವನ್ನೂ ಕೊಡಿಸುತ್ತಾನೆ. ಆವರೇಜ್ ಸ್ಟೂಡೆಂಟ್ ಆದ ರಾಮ್ ಇಂ...

"ಊಜಾ" ಕನ್ನಡ ಸಿನೆಮಾ

Image
ಹೆಸರೇ ಹೇಳುವಂತೆ ಇದೊಂದು ದೆವ್ವದ ಸಿನೆಮಾ. ಯೆಸ್... ನಾವಂದುಕೊಂಡಂತೆಯೇ ಸಿನೆಮಾ ಶುರುವಾಗುತ್ತದೆ. ಮೂವರು ಮುದ್ದಾದ ಹೆಣ್ಣುಮಕ್ಕಳಿಗೆ ಭೂತದ ಸಿನೆಮಾ ಮಾಡಬೇಕೆಂಬ ಆಸೆ. ಅವರಿಗೊಬ್ಬ ನಟನೆಯಿಂದ ಅವಕಾಶ ವಂಚಿತ ಯುವಕನೊಬ್ಬ ಜೊತೆಗೂಡುತ್ತಾನೆ. ನಾಲ್ವರೂ ಸೇರಿ ಸಿನೆಮಾ ಶುರು ಮಾಡುತ್ತಾರೆ. ಆದರೆ ಸಿನೆಮಾ ಜೊತೆಜೊತೆಗೆ ಅವೆಲ್ಲವೂ ಅವರ ಜೀವನದಲ್ಲಿಯೂ ನಡೆಯಲು ಶುರುವಾಗುತ್ತದೆ. ಅವರಿಗೆ ಅರ್ಥವಾಗುತ್ತದೆ.... ಯಾವುದೋ ಆತ್ಮ ತಮಗೆ ತೊಂದರೆ ಕೊಡುತ್ತಿದೆ ಅಂತ. ಅಷ್ಟರಲ್ಲೇ ಆ ನಾಲ್ವರಲ್ಲಿ ಒಬ್ವಳು ಆ ಆತ್ಮಕ್ಕೆ ಬಲಿಯೂ ಆಗುತ್ತಾಳೆ. ಹಾಗಾದರೆ ಆ ಆತ್ಮ ಯಾರದ್ದು..? ಆ ಆತ್ಮಕ್ಕೆ ಇವರೇನು ಮೋಸ ಮಾಡಿದ್ದರು..? ಯಾವ ಆತ್ಮ ಯಾರನ್ನು ಬೇಕಿದ್ದರೂ ಸಾಯಿಸಬಹುದೇ ಅಥವಾ ಅದರ ಹಿಂದೆ ಕಾರಣವೇನಾದರೂ ಇರುತ್ತದೆಯೇ..? ದೆವ್ವದ ಸಿನೆಮಾ ಅಂದ ಕೂಡಲೇ ನಮಗೆ ಒಂದಿಷ್ಟು ನಿರೀಕ್ಷೆಗಳು ಹುಟ್ಟಿ ಬಿಡುತ್ತವೆ. ಆಗ ಸಿನೆಮಾ ನಿರೂಪಣೆ ಹೇಗೇ ಇದ್ದರೂ ನಮಗೆ ನೀರಸ ಎನಿಸಲು ಶುರುವಾಗುತ್ತದೆ. ಹಾಗೆಯೇ "ಊಜಾ" ಸಿನೆಮಾ ಮೇಲೆಯೂ ನನಗೂ ಕೆಲವು ನಿರೀಕ್ಷೆಗಳಿದ್ದವು. ಆದರೆ "ಊಜಾ" ಅದೆಲ್ಲವನ್ನೂ ತಲೆಕೆಳಗು ಮಾಡಿದೆ. ಮೊದಲನೆಯದಾಗಿ ಈ ಸಿನೆಮಾದಲ್ಲಿ ನಾಯಕ-ನಾಯಕಿಯೇ ಇಲ್ಲ. ಅಂದರೆ ಸಿದ್ಧ ಸೂತ್ರಗಳನ್ನು ದಾಟಿದ ಸಿನೆಮಾ ಆಗಿದೆ ಇದು. ಆದರೂ ಇದರಲ್ಲಿ ಹಾಡುಗಳಿವೆ. ಸುಂದರವಾದ ಮೂವರು ಹೆಣ್ಮಕ್ಕಳಿದ್ದಾರೆ. ಅವರಿಗಿಂತಲೂ ಸುಂದರವಾದ ಮತ್ತೊಬ್ಬ ಹೆಣ್...

"ನಿಶ್ಯಬ್ದಂ" [amazon prime]

Image
"ಫರ್ಸ್ಟ್ ಡೇ ಫರ್ಸ್ಟ್ ಶೋ" ಎಂಬ ಕಲ್ಪನೆಯೇ ನಮ್ಮಲ್ಲಿ ಪುಳಕ‌ ಹುಟ್ಟಿಸುತ್ತದೆ. ಸಿನೆಮಾ ಹೇಗಿದೆಯೋ ಅದು ಬೇರೆ ವಿಷಯ. ಆದರೆ ಆ ಸಿನೆಮಾವನ್ನು ನಾನು ಎಲ್ಲರಿಗಿಂತಾ ಮೊದಲು‌ ನೋಡಿಬಿಡಬೇಕು ಅನ್ನುವ ಕ್ರೇಜ್ ನಮಗಿರುತ್ತದೆ. ಈಗಂತೂ ಅಮೆಜಾನ್ ಪ್ರೈಮಿನಲ್ಲಿ ನೇರವಾಗಿ ಸಿಗುವುದರಿಂದ ಸಿನೆಮಾ ಅನ್ನೋದು ಅಂಗೈಯಲ್ಲಿನ ಅರಗಿಳಿಯಾಗಿದೆ. ಹಾಗಾಗಿ "ನಿಶ್ಯಬ್ದಂ" ಟ್ರೈಲರ್ ನೋಡಿದಾಗಿನಿಂದ ಅಕ್ಟೋಬರ್ 'ಎರಡು' ಯಾವತ್ತು ಆಗುವುದೆಂದು ಕಾಯತೊಡಗಿದ್ದೆ. ಕಾಯುವುದಕ್ಕೆ ಕಾರಣ ಒಂದೇ... ಅದು ಅನುಷ್ಕಾ. ಅದರಲ್ಲೂ ಮೂಕಿ-ಕಿವುಡಿಯ ಪಾತ್ರ ಬೇರೆ. ಏನೋ ಹೊಸ ರೀತಿಯ ಥ್ರಿಲ್ಲರ್, ಎಂಟರ್ ಟೈನರ್, ಆಕ್ಷನ್, ಹಾರರ್ ಅಂತೆಲ್ಲ ಕಲ್ಪಿಸಿ ಅಕ್ಟೋಬರ್ ಎರಡರ ಬೆಳ್ಳಂಬೆಳಿಗ್ಗೆಯೇ ಸಿನೆಮಾ ನೋಡಲು ಕುಳಿತೆ. ಶುರುವಿನಲ್ಲಿಯೇ ಭಯಾನಕ ಕೊಲೆಯಾಗುತ್ತದೆ. ಆ ಕೊಲೆ ಮಾಡಿದವರು ಯಾರು.... ??? ಮತ್ಯಾರು....? ಆ ಮನೆಯಲ್ಲಿದ್ದ ಆತ್ಮ ಅಥವಾ ದೆವ್ವ.... !!! ನಂತರ ಆ ಮನೆ woodside villa ಭೂತ ಬಂಗಲೆಯಾಗಿಬಿಡುತ್ತದೆ. ಅಲ್ಲಿಗೆ ಯಾರೂ ಹೋಗುತ್ತಿರುವುದಿಲ್ಲ. ಆ ಮನೆಯಲ್ಲಿ ಒಂದು ಪೇಂಟಿಂಗ್ ಇರುತ್ತದೆ.‌ ಆ ಪೇಂಟಿಂಗಿಗಾಗಿ ನಮ್ಮ ಸಿನೆಮಾದ ನಾಯಕ ಮತ್ತು ನಾಯಕಿ ಸುಮಾರು ಐವತ್ತು‌ ವರ್ಷಗಳ ನಂತರ ಆ ಭೂತಬಂಗಲೆಗೆ ಭೇಟಿ ಕೊಡುತ್ತಾರೆ.‌ ಅವರಿಗೆ ಆ ಪೇಂಟಿಂಗ್ ಸಿಗುವುದಿಲ್ಲ. ಆದರೆ ಆ ಮನೆಯಲ್ಲಿದ್ದ ಭೂತಕ್ಕೆ ನಾಯಕ ಬಲಿಯಾಗುತ್ತಾನೆ. ಕಿವಿ ಕೇಳ...

ಕನ್ನಡ ಸಿನೆಮಾ: "ಲಾ.."

Image
ಹೆಸರಾಂತ ಬ್ಯಾನರ್, ಅದ್ಭುತವಾದ ತಾರಾಗಣ, ಹಿಂದೆ ಯಾರೂ ಮಾಡಿರದಂತಹ ನವನವೀನ ಕಥೆ... ಆದರೂ ಸಿನೆಮಾ ರುಚಿಸುವುದಿಲ್ಲ. ಕಾರಣ...? ಗೊತ್ತಿಲ್ಲ. ಹಾಲಿವುಡ್ ಚಿತ್ರಗಳನ್ನು‌ ನಾವು ಇಷ್ಟ ಪಡುವುದು ಅದರ ಸಹಜತೆಗೆ... ನಾಯಕ ಅಥವಾ ನಾಯಕಿಗೆ ಅಪಘಾತವಾಗಲೀ, ಬೆಂಕಿಯೇ ಸುಡಲಿ, ಬಟ್ಟೆಯೇ ಹರಿದುಹೋಗಲಿ ಅವರು ಆ ವೇಷದಲ್ಲಿಯೇ ಪಾತ್ರ ನಿಭಾಯಿಸುತ್ತಾರೆ. ಆದರೆ ಇಲ್ಲಿ ಗ್ಯಾಂಗ್ ರೇಪ್ ಆಗಿರುವ ಹುಡುಗಿ ಎಷ್ಟು ಆರಾಮಾಗಿ ಓಡಾಡಿಕೊಂಡಿರ್ತಾಳೆ ಎಂದರೆ ಫ್ಯಾಷನ್ ಶೋ ರೀತಿಯಲ್ಲಿ.. ಅವಳು ಮೇಕಪ್ ಮಾಡಿದಳು, ಒಳ್ಳೇ ಡ್ರೆಸ್ ಹಾಕಿದಳು ಅಂತ ನಮ್ಮ ತಕರಾರೇನಿಲ್ಲ. ಆದರೆ ಅವಳ ಮೇಲಾದ ಅತ್ಯಾಚಾರದ ಕುರಿತು ನಾವೆಂಬ ನಾವೇ ಸಹಾನುಭೂತಿ ತೋರಿಸುತ್ತಿರುವಾಗ ಆಕೆ ಕೂದಲೂ ಸಹ ಕೊಂಕದಂತೆ ಡ್ರೆಸಪ್ ಆಗಿ ಓಡಾಡುತ್ತಿದ್ದರೆ ಹೇಗಾಗಬೇಕು? ಆಕೆಯ ನೋವನ್ನು ನಮ್ಮ ನೋವು ಎಂದುಕೊಳ್ಳುವ ತಾದ್ಯಾತ್ಮತೆ ಹೇಗೆ ಸಿದ್ಧಿಸುತ್ತದೆ? ಒಂದು ಸಿನೆಮಾವನ್ನು ಕೊನೆವರೆಗೂ ಜನ ನೋಡಬೇಕೆಂದರೆ ಮೊದಲರ್ಧ ಗಂಟೆಯಲ್ಲಿ ಪ್ರೇಕ್ಷಕರನ್ನು ಹಿಡಿದಿಡಬೇಕಾಗುತ್ತದೆ. ಆದರೆ ಆ ಸಮಯದಲ್ಲಿ ಮಂಡ್ಯ ರಮೇಶ್ ತಮ್ಮ ವಿಕ್ಷಿಪ್ತ ನಡವಳಿಕೆಯಿಂದ ಜನರನ್ನು ಸಿನೆಮಾಗೆ ವಿಮುಖರನ್ನಾಗಿಸುವ ಪ್ರಯತ್ನ ಮಾಡುತ್ತಾರೆ. ಈ ಪಾತ್ರವನ್ನು ಕಂಡು ಕೋಪ, ದ್ವೇಷವನ್ನೂ ಮೀರಿ ಜಿಗುಪ್ಸೆ ಉಂಟಾಗುತ್ತದೆ. ಅವರ್ಯಾಕೆ ಹಾಗೆ ನಟಿಸಿದರೋ ಗೊತ್ತಿಲ್ಲ. ಪೊಲೀಸರ ನಿರ್ಲಕ್ಷ್ಯ ನಮಗೂ ಗೊತ್ತಿರುವಂಥದ್ದೇ. ಆದರೆ ಈ ನಡವಳಿಕೆ ಸಿನೆಮಾದ ಮ...

"Hichki" (ಹಿಂದಿ)

Image
"ಹಿಚಕ್... ಹಿಚಕ್..." ಯಾರಾದರೂ ಹೀಗೆ ಬಿಟ್ಟೂ ಬಿಡದೇ ಬಿಕ್ಕಳಿಸುತ್ತಿದ್ದರೆ ನಾವೇನು ಮಾಡುತ್ತೇವೆ? ನೀರು ಕುಡಿ ಅನ್ನುತ್ತೇವೆ.. ಸಕ್ರೆ ತಿನ್ನು ಅನ್ನುತ್ತೇವೆ.. ನೆತ್ತಿ ತಟ್ಟುತ್ತೇವೆ.. ಮೇಲೆ ನೋಡು ಬೆಕ್ಕು ಕೂತಿದೆ ಎನ್ನುತ್ತೇವೆ.. ಆದರೆ ಯಾವುದೋ ಖಾಯಿಲೆಯ ಪರಿಣಾಮದಿಂದಾಗಿ ಆ ಬಿಕ್ಕಳಿಕೆ ನಿಲ್ಲದೇ ಹೋದರೆ....?? ಆ ಬಿಕ್ಕಳಿಸುತ್ತಿರುವವರನ್ನು ಸಮಾಜ ಹೇಗೆ ನೋಡಬಹುದು..? ಎಷ್ಟು ಅಪಹಾಸ್ಯ ಮಾಡಬಹುದು..? ತನ್ನದಲ್ಲದ ತಪ್ಪಿಗೆ ಆ ವ್ಯಕ್ತಿ ಎಷ್ಟು ಅಪಮಾನ ಎದುರಿಸಬಹುದು..? ಆ ವ್ಯಕ್ತಿಯ ಶಿಕ್ಷಣ, ಸಾರ್ವಜನಿಕ ಜೀವನ, ಔದ್ಯೋಗಿಕ ಭವಿಷ್ಯ ಎಲ್ಲವೂ ಮೂರಾಬಟ್ಟೆಯಾಗಿಬಿಡುತ್ತದೆ. ಅಲ್ಲವೇ..?? ಆ ವ್ಯಕ್ತಿಯ ಜೀವನ ಹಾಳಾಗುವುದು ಬಿಕ್ಕಳಿಕೆಯಿಂದಲ್ಲ.... ಸಮಾಜ ಆ ವ್ಯಕ್ತಿಯನ್ನು ನೋಡುವ ದೃಷ್ಟಿಯಿಂದ....!!! ಹಾಗಾದರೆ ಸಮಾಜ ತಾನು ನೋಡುವ ದೃಷ್ಟಿ ಬದಲಿಸಿಕೊಂಡರೆ ಸಾಕು ಅಂತೀರ? ಅದಷ್ಟು ಸುಲಭವಲ್ಲ. ಸಮಾಜ ಮತ್ತು ಜನರು ಯಾವಾಗಲೂ ಅಬ್ನಾರ್ಮಲ್ ವಿಷಯಗಳತ್ತಲೇ ಆಕರ್ಷಿತರು. ನಾವೇ ಸಮಾಜದ ಈ ದೃಷ್ಟಿಯನ್ನು ನಿರ್ಲಕ್ಷಿಸಬೇಕು ಹೊರತೂ ಸಮಾಜದಿಂದ ಏನನ್ನೂ ಬಯಸುವಂತಿಲ್ಲ. ಈ ಸಿನೆಮಾ ನೋಡಿದ ನಂತರವಾದರೂ ನಾವುಗಳು ಇಂತಹಾ ನತದೃಷ್ಟರನ್ನು ನೋಡುವ "ದೃಷ್ಟಿ" ಬದಲಿಸಿಕೊಂಡರೆ ಸಿನೆಮಾ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ. ಇಂತಿಪ್ಪ ಖಾಯಿಲೆಯಿಂದ ಬಳಲುವ ಮತ್ತು ಸಹಿಸಲಾಗದಷ್ಟು ಹಿಚ್ಕಿ ಸದ್ದನ್ನು ಹೊರಡಿಸುವ ನಮ್ಮ ನಾಯಕಿ ...

"Thiruttu payale 2" (ತಮಿಳು)

Image
  ಆನ್ಲೈನ್ ಮೋಹ ಮತ್ತು ಸ್ನೇಹ ಎಷ್ಟಿರಬೇಕೋ ಅಷ್ಟಿದ್ದರೆ ಚಂದ ಅಂತ ತಿಳಿಸುವ ಸಿನೆಮಾ ಇದು. ಸಾಮಾಜಿಕ‌ ಜಾಲತಾಣದಲ್ಲಿ ಸಿಗುವ ಎಲ್ಲರೂ ನಮಗೆ ಅಪರಿಚಿತರೇ. ಅಂಥವರ ಬಳಿ ಮಾತನಾಡುವಾಗ ಎಷ್ಟು ಹುಷಾರಾಗಿದ್ದರೂ ಸಾಲದು. ಆದರೆ ಅಲ್ಲಿ ಸಿಕ್ಕ ಸ್ನೇಹಿತನೊಬ್ಬನ ಬಳಿ ಸಲುಗೆಯಿಂದ ಮಾತನಾಡಿದ ಕಾರಣಕ್ಕೆ ಆತನ ಜಾಲಕ್ಕೆ ಸಿಕ್ಕು ನರಳುವ ಹೆಣ್ಮಗಳ ಕಥೆ ಇದು. ನಾಯಕಿಗೆ ಸದಾ ಫೇಸ್‌ಬುಕ್‌ ಚಿಂತೆ. ಫೇಸ್ಬುಕ್ಕಿನಲ್ಲಿ ಫೋಟೋ ಅಪ್ಲೋಡ್ ಮಾಡುವುದು, ಎಷ್ಟು ಲೈಕ್ಸ್ ಬಂದಿದೆ ಅಂತ ಎಣಿಸುವುದು ಇದೇ ಕೆಲಸ ಅವಳಿಗೆ. ತನ್ನ ಫೋಟೋಗೆ ಬರುವ ಕಾಮೆಂಟ್ಸ್ ಓದಿ ಖುಷಿ ಪಡುತ್ತಿರುತ್ತಾಳೆ. ಯಾಕೋ ಇವಳ ಫೇಸ್‌ಬುಕ್‌ ಹುಚ್ಚು ಸ್ವಲ್ಪ ಜಾಸ್ತಿಯೇ ಆಯ್ತು ಅಂದುಕೊಳ್ಳುವಷ್ಟರಲ್ಲಿ ಅವನೊಬ್ಬ ಸಿಕ್ತಾನೆ.. ಸ್ನೇಹಿತ!!! ಅವನು ಯಾರು? ಎಲ್ಲಿಯವನು? ಏನು ಕೆಲಸ? ಉಹುಂ ನಾಯಕಿಗೆ ಅದ್ಯಾವುದೂ ಗೊತ್ತಿಲ್ಲ. ತನ್ನ ಗಂಡ ತನ್ನಲ್ಲಿ ಗಮನಿಸದ ವ್ಯಕ್ತಿತ್ವ ಮತ್ತು ಚೆಲುವು, ಹವ್ಯಾಸಗಳನ್ನು ಅವನ್ಯಾರೋ ಗುರುತಿಸಿದ ಅನ್ನುವ ಕಾರಣಕ್ಕೆ ಆ ಅಪರಿಚಿತನ ಸ್ನೇಹ ಮುಂದುವರೆಸುತ್ತಾಳೆ. ಆತ ಆಕೆಯ ಉಳಿದ ಫೇಸ್‌ಬುಕ್‌ ಪೋಸ್ಟುಗಳನ್ನು ಅಧ್ಯಯನ ಮಾಡಿ ಆಕೆಗೆ ಏನಿಷ್ಟ, ಏನಿಷ್ಟವಿಲ್ಲ ಎಂಬುದನ್ನು ತಿಳಿದುಕೊಂಡು ಆಕೆಗೆ ಇಷ್ಟವಾಗುವಂತೆ ನಡೆದುಕೊಳ್ಳುತ್ತಿರುತ್ತಾನೆ. ಅರೆ‌...!! ಮದುವೆಯಾಗಿರುವ ಒಬ್ಬ ಗೃಹಿಣಿಗೆ ಇಷ್ಟವಾಗುವ ಹಾಗೆ ಅವನ್ಯಾರೋ ಅಪರಿಚಿತ ಯಾಕೆ ನಡ್ಕೊಳ್ತಾ ಇದ್ದಾನೆ ಅಂತ ಆಶ್ಚರ...

"AI" Artificial Intelligence

Image
ಯಂತ್ರಗಳು ನಮ್ಮ ಕೆಲಸವನ್ನು ಹಗುರ ಮಾಡಿವೆ ಎನ್ನುವುದು ಎಲ್ಲರಿಗೂ ಗೊತ್ತು. ಮುಂದುವರೆದು ರೋಬೋಟುಗಳ ಆವಿಷ್ಕಾರ ನಮಗೆ ಮತ್ತಷ್ಟು ಸಹಾಯಕವಾಗಿದೆ. ಹಾಗೇ ಇನ್ನೂ ಸ್ವಲ್ಪ ಮುಂದುವರೆದು ರೋಬೋಟುಗಳಿಗೆ ಭಾವನೆಗಳನ್ನೂ ತುಂಬಿಬಿಟ್ಟರೆ....?  ಈ ಯೋಚನೆ ಒಬ್ಬ ವಿಜ್ಞಾನಿಗೆ ಬರುತ್ತದೆ.  ಬರುವುದೇ ತಡ ಆ ರೀತಿಯ ರೋಬಾಟನ್ನು ತಯಾರಿಸಿಯೇ ಬಿಡುತ್ತಾನೆ. ಅವುಗಳೇ Artificial Intelligence ಉಳ್ಳ ರೋಬಾಟುಗಳು. ಮನುಷ್ಯರಂತೆಯೇ ನಾಚಿಕೆ-ಭಯ-ಕೋಪ-ಪ್ರೀತಿ ಎಲ್ಲವೂ ಇರುವ ಮಾನವ ನಿರ್ಮಿತ ರೋಬಾಟುಗಳು. ಇಂತಹ ಒಂದು ರೋಬಾಟ್ ಆದ ಡೇವಿಡ್ಡನನ್ನು ಒಬ್ಬ ತಂದೆ-ತಾಯಿಗೆ ದತ್ತು ನೀಡಲಾಗುತ್ತದೆ. ಆ ತಂದೆ-ತಾಯಿಯರ ಒಬ್ಬನೇ ಮಗನಾದ ಮಾರ್ಟಿನ್ ಗುಣಪಡಿಸಲಾಗದ ಒಂದು ಖಾಯಿಲೆಯಿಂದ ನರಳುತ್ತಿರುತ್ತಾನೆ. ಹಾಗಾಗಿ ಮಾರ್ಟಿನ್ ಸ್ಥಾನಕ್ಕೆ ಡೇವಿಡ್ ಬರುತ್ತಾನೆ. ದಿನಕಳೆದಂತೆ ಡೇವಿಡ್ ಮನೆಯವರ ವಿಶ್ವಾಸವನ್ನೂ ಗಳಿಸುತ್ತಾನೆ. ಆದರೆ ಮನೆಯವರಿಗೆ ಅವನು ರೋಬಾಟ್ ಅಂತ ನೆನಪಿರುತ್ತದೆ ಹೊರತೂ ಡೇವಿಡ್ಡನಿಗೆ ತಾನು ನಿಜವಾದ ಮನುಷ್ಯ ಅಂತಲೇ ಅಂದುಕೊಂಡಿರುತ್ತಾನೆ.‌ ಅವನಿಗೆ ತನ್ನ ತಾಯಿ ಮೋನಿಕಾ ಮೇಲೆ ಬಹಳ ಮೋಹ. ಸದಾ ಅವಳ ಜೊತೆ ಇರಬೇಕೆಂಬ ಆಸೆ.‌ ಆದರೆ ಅಚಾನಕ್ಕಾಗಿ ಮಾರ್ಟಿನ್ ಹುಷಾರಾಗಿ ಮನೆಗೆ ಬಂದು ಬಿಡುತ್ತಾನೆ. ಅವನಿಗೆ ಡೇವಿಡ್ ಕಂಡರೆ ಹೊಟ್ಟೆಯುರಿಯಲು ಪ್ರಾರಂಭವಾಗುತ್ತದೆ. ಅದಕ್ಕಾಗಿ ಮನೆಯವರು ಅವನಿಗೆ ಬೈಯ್ಯುವ ಹಾಗೆ ಡೇವಿಡ್ ಕೈಲಿ ಬಹಳ ಕೆಟ್ಟ ಕೆಲಸಗಳನ...

"Sahasam" (ತೆಲುಗು)

Image
  ಅದೃಷ್ಟ ಎನ್ನುವುದು ಯಾರಿಗೆ ಹೇಗೆ ಎದುರಾಗುತ್ತದೆ ಅಂತ ಯಾರಿಗೂ ಗೊತ್ತಾಗುವುದಿಲ್ಲ.‌ ಕಾಣದ ನಿಧಿಯೊಂದಕ್ಕಾಗಿ ಹಲವರು ಪ್ರಾಣವನ್ನೇ ಪಣವಾಗಿಟ್ಟು ಹುಡುಕಾಟ ನಡೆಸುತ್ತಿರುವಾಗ, ಆ ನಿಧಿ ಅನಾಯಾಸವಾಗಿ ಒಬ್ಬ ಅಮಾಯಕನಿಗೆ ದೊರೆತರೆ ಹೇಗಿರುತ್ತದೆ? ಆ ನಿಧಿಯನ್ನು ನೋಡಿ ಅವನು ಮೂರ್ಚೆ ಹೋಗಬಹುದಾ? ಇದೆಲ್ಲ ನನ್ನದೇ ಅಂತ ಖುಷಿ ಪಡಬಹುದಾ? ಅಥವಾ ತನ್ನದಲ್ಲದ ವಸ್ತು ಇದು ಅಂತ ತಿರಸ್ಕರಿಸಬಹುದಾ? ನಾವಾಗಿದ್ದರೆ ಏನು ಮಾಡುತ್ತಿದ್ದೆವು? ಅದು 2003..... ಮೊದಲು ಭಾರತದ್ದೇ ಆಗಿದ್ದ, ಈಗ ಸ್ವಾತಂತ್ರಾ ನಂತರ ಪಾಕಿಸ್ತಾನಕ್ಕೆ ಸೇರಿರುವ ಒಂದು ಭೂಭಾಗದೊಳಗೆ ಡಾ. ಅಲಂ ಸಿದ್ದಿಕಿ ಎಂಬ ಪಾಕಿಸ್ತಾನದ ಪ್ರಾಚ್ಯಶಾಸ್ತ್ರಜ್ಞನೊಬ್ಬ ಕಾನಿಷ್ಕ ದೊರೆಯ ಕಾಲದಲ್ಲಿ ಅವಿತಿಟ್ಟಿರುವ ಸಂಪತ್ತನ್ನು ಅರಸುತ್ತಿರುತ್ತಾನೆ. ಆ ಸಂಪತ್ತಿನ ನಕಾಶೆಯು ಒಂದು ಪೆಟ್ಟಿಗೆಯೊಳಗೆ ಬಂಧಿಯಾಗಿದ್ದು, ಆ ಪೆಟ್ಟಿಗೆ ತೆರೆಯಲು ಬೀಗದ ಕೀ ಅವಶ್ಯಕತೆ ಎದುರಾಗುತ್ತದೆ. ಆದರೆ ಪ್ರಾಚ್ಯಶಾಸ್ತ್ರಜ್ಞನ ಬಳಿ ಬೀಗದ ಕೀ ಇರುವುದಿಲ್ಲ. ಈ ವಿಷಯ ಭಯೋತ್ಪಾದಕನಾದ "ಸುಲ್ತಾನ್" ಎಂಬ ವ್ಯಕ್ತಿಗೆ ಗೊತ್ತಾಗಿ, ಅವನು ಆ ನಿಧಿಯ ನಕಾಶೆ ಇರುವ ಪೆಟ್ಟಿಗೆಯನ್ನು ತನ್ನೊಂದಿಗೆ ಹೊತ್ತೊಯ್ಯುತ್ತಾನೆ.‌ ಬರೀ ಪೆಟ್ಟಿಗೆ ಇಟ್ಕೊಂಡು ಪ್ರಯೋಜನವೇನು? ಆತ ಪ್ರಾಚ್ಯಶಾಸ್ತ್ರಜ್ಞನಿಗೇ ಕೀ ಹುಡುಕುವ ಜವಾಬ್ದಾರಿ ಕೊಡುತ್ತಾನೆ. ಪ್ರಸ್ತುತ ಸಮಯ 2013.... ಗೋಪಿಚಂದ್ ಒಬ್ಬ ಮಹತ್ವಾಕಾಂಕ್ಷೆ ಉಳ್ಳ ಯುವ...

"ನಾನಿ" (ಕನ್ನಡ)

Image
  ಕನ್ನಡದಲ್ಲಿ ಹಾರರ್ ಸಿನೆಮಾ ಹುಡುಕುತ್ತಿದ್ದರೆ 'ನಾನಿ' ಅತ್ಯುತ್ತಮ ಆಯ್ಕೆ. ಇದು ಭಯಾನಕವಾಗಿರುವುದಲ್ಲದೇ, ನಮ್ಮ ಹೃದಯವನ್ನು ಕರಗಿಸುವಂತಹಾ ಒಂದು ಕರುಣಾಜನಕ ಕಥೆಯನ್ನೂ ಸಹ ಹೊಂದಿದೆ‌. ಮೊದಲಿಗೆ ದೆವ್ವದ ಆಟ ನೋಡಿ ಬೇಸತ್ತವರಿಗೆ, ಆ ದೆವ್ವದ ಹಿನ್ನೆಲೆ ತಿಳಿದು ಹೃದಯ ಆರ್ದ್ರವಾಗುತ್ತದೆ. ಎರಡು ದಿನ ಕಳೆದರೂ ಆ ಹಳೆಯ ಕಥೆ ನಮ್ಮನ್ನು ಕಾಡುತ್ತದೆ..... ನೂತನ ದಂಪತಿಗಳು ಒಂದು ಬಂಗಲೆಯಲ್ಲಿ ವಾಸಿಸಲು ಬಂದಾಗಿನಿಂದ ಚಿತ್ರ ಶುರುವಾಗುತ್ತದೆ‌. ಎರಡು ದಿನ ಮಾಮೂಲಿಯಾಗಿ ಕಳೆದ ನಂತರ, ಮೂರನೇ ದಿನದಿಂದ ಆ ಮನೆಯಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯತೊಡಗುತ್ತವೆ. ಇದು ದೆವ್ವದ ಸಿನೆಮಾ ಅಂತ ಮೊದಲೇ ಗೊತ್ತಿರುವುದರಿಂದ ಮತ್ತು ಇದೇ ರೀತಿಯ ಹಲವಾರು ಸಿನೆಮಾಗಳನ್ನು ನಾವು ಈಗಾಗಲೇ ನೋಡಿರುವುದರಿಂದ, ಈ ಸನ್ನಿವೇಶಗಳನ್ನು ನೋಡಿ ನಾವೇನು ಹೆದರುವುದಿಲ್ಲ. ಆದರೆ ಮುಂದೇನು ಆಗಬಹುದು ಎಂಬ ಕುತೂಹಲ ಉಳಿಸುವಲ್ಲಿ ಸಿನೆಮಾ ಸಫಲವಾಗಿದೆ. ಹಾಗೆ ಮುಂದೇನು ಅಂತ ನೋಡುವಾಗ, ಆ ಮನೆಯ ಹಿನ್ನೆಲೆ ತಿಳಿದುಬರುತ್ತದೆ. ಅದೊಂದು ಕರುಳು ಹಿಂಡುವಂತಹಾ ಕಥೆ. ನಿರ್ದೇಶಕರು ಅದನ್ನು ನಿರೂಪಿಸಿರುವ ರೀತಿಗೆ ಮನಸ್ಸು ಕದಡುತ್ತದೆ. ಕನಿಷ್ಠ ಎರಡು ದಿನಗಳಾದರೂ ಕಾಡುವ ಫ್ಲಾಷ್ ಬ್ಯಾಕ್ ಇಟ್ಟು ನಿರ್ದೇಶಕರು ನಮ್ಮ ಹೃದಯ ಗೆಲ್ಲುತ್ತಾರೆ. ಎಲ್ಲರನ್ನೂ ಕಾಡುವ ದೆವ್ವದ ಹಿಂದಿನ ಕಥೆ ಕೇಳಿ ನಾವೂ ದೆವ್ವದ ಪರವಾದಾಗ ಮತ್ತೇನು? ದೆವ್ವ ಆಡಿದ್ದೇ ಆಟ..... ಇರುವ ಹಾ...

"East side sushi" (ಇಂಗ್ಲೀಷ್-ಸ್ಪಾನಿಷ್-ಜಪಾನೀಸ್)

Image
  ಮಹಿಳಾ ಅಸಮಾನತೆಯೇ ಇದರ ಮುಖ್ಯವಿಷಯ. ಒಬ್ಬ ಹೆಂಗಸಿಗೆ ಕೆಲಸ ಸಿಕ್ಕಾಗ ಎಲ್ಲರೂ ಹೇಳುವುದೇನೆಂದರೆ, ಮಹಿಳೆಯಾದ ಕಾರಣಕ್ಕೆ ಅವಕಾಶ ಗಿಟ್ಟಿಸಿದಳು ಅಂತ. ಅದು ಕೇವಲ ಅಸೂಯೆಯ ಹೇಳಿಕೆಯಷ್ಟೇ. ಏಕೆಂದರೆ ನಿಜವಾಗಿ ನೋಡಿದರೆ ಮಹಿಳೆಯಾದ ಕಾರಣಕ್ಕೆ ಆಕೆ ಅವಕಾಶ ಕಳೆದುಕೊಳ್ಳುತ್ತಿದ್ದಾಳೆ. ಹೆಣ್ಣು-ಗಂಡು ಸಮಾನರು ಎನ್ನುವವರು ಸಹ ಆಕೆ ಮಹಿಳೆ ಎಂಬ ಕಾರಣಕ್ಕೆ ಕೆಲಸ ನೀಡಲು ಹಿಂಜರಿಯುತ್ತಿದ್ದಾರೆ. ಅದರಲ್ಲಿಯೂ ಆಕೆ ಆ ಕೆಲಸಕ್ಕೆ ಎಲ್ಲಾ ರೀತಿಯಲ್ಲಿಯೂ ಅರ್ಹಳಿದ್ದರೂ ಸಹ...... ಇದರ ನಾಯಕಿ ಒಬ್ಬ ಸಿಂಗಲ್ ಪೇರೆಂಟ್. ಇರುವ ತನ್ನೊಬ್ಬ ಮಗಳಿಗಾಗಿ, ಆ ಮಗುವಿನ ಭವಿಷ್ಯಕ್ಕಾಗಿ ಏನು ಮಾಡಲೂ ತಯಾರಿದ್ದಾಳೆ ಆಕೆ. ಆಕೆಯ ವೃದ್ಧ ತಂದೆಯೊಬ್ಬರೇ ಅವಳ ಎಲ್ಲಾ ಕೆಲಸಗಳಿಗೆ ಸಹಾಯ ಮಾಡುತ್ತಿರುವುದು. ಆ ಮೂವರೂ ಒಂದು ಮನೆಯಲ್ಲಿ ಒಟ್ಟಾಗಿ ಬದುಕುತ್ತಿರುತ್ತಾರೆ. ಆಕೆಯ ಆಸೆಗಳೇನು ಬಹಳ ದೊಡ್ಡವಲ್ಲ. ಇರಲು ಬಂಗಲೆ ಬೇಕು, ಕಾರಿನಲ್ಲಿ ಓಡಾಡಬೇಕು ಅಂತೆಲ್ಲಾ ಏನಿಲ್ಲ. ಕೇವಲ ತನ್ನ ಮತ್ತು ತನ್ನ ಮಗಳ ದೈನಂದಿನ ಅವಶ್ಯಕತೆ ಪೂರೈಕೆಯಾದರೆ ಸಾಕು. ಅದಕ್ಕಾಗಿ ರಸ್ತೆಯಲ್ಲಿ ಹಣ್ಣು ಮಾರುತ್ತಾಳೆ, ಜಿಮ್ ಕೆಲಸ ಮಾಡುತ್ತಾಳೆ, ಕಾರು ತೊಳೆಯುತ್ತಾಳೆ. ಒಟ್ಟಿನಲ್ಲಿ ಏನಾದರೂ ಸರಿ... ಕೆಲಸ ಅಂತ ಒಂದಿರಬೇಕು ಆಕೆಗೆ. ಅಷ್ಟರಲ್ಲಿ ಆಕೆಗೊಂದು ಜಾಹೀರಾತು ಕಾಣುತ್ತದೆ. ಜಪಾನೀಸ್ ರೆಸ್ಟೋರೆಂಟ್ ಒಂದಕ್ಕೆ ಹೆಲ್ಪರ್ ಬೇಕಾಗಿರುತ್ತದೆ. ಅಡುಗೆ ಸಹಾಯಕಿಯ ಕೆಲಸ. ಆ ಕೆಲಸ ಆಕೆಗೆ...

"Dhoom 2004" (ಹಿಂದಿ)

Image
  ಈಗಾಗಲೇ ಜನರು ಮೆಚ್ಚಿಕೊಂಡು ಭರ್ಜರಿಯಾಗಿ ಓಡಿರುವ ಚಿತ್ರದ ಬಗ್ಗೆ ಹೇಳುತ್ತಿದ್ದೇನೆ ಎಂದುಕೊಳ್ಳಬೇಡಿ. ಈ ಚಿತ್ರವನ್ನು ಜನ ಯಾಕೆ ಮೆಚ್ಚಿಕೊಂಡರು ಅಥವಾ ಈ ಚಿತ್ರ ಜನರ ಮನಸ್ಸನ್ನು ಯಾಕೆ ಗೆದ್ದಿತು ಅಂತ ಹೇಳುತ್ತಿದ್ದೇನೆ. ಸಿನೆಮಾ ಸಂಬಂಧಿತ ಸಂದರ್ಶನಗಳನ್ನು ಓದುವಾಗ ನೀವು ಒಂದು ವಿಷಯ ಗಮನಿಸಿರಬಹುದು. "ಈ ಸಿನೆಮಾ ಸಿದ್ಧ ಸೂತ್ರಗಳನ್ನು ಮೀರಿದೆ" ಎನ್ನುವ ಮಾತು. ಇದರರ್ಥ ಸಿನೆಮಾ ಮಾಡಲು ಕೆಲವು ಸೂತ್ರಗಳಿದ್ದು, ಕೆಲವು ಸಿನೆಮಾಗಳು ಅದನ್ನು ಪಾಲಿಸುತ್ತವೆ, ಕೆಲವು ಪಾಲಿಸುವುದಿಲ್ಲ. . ಆ ಸೂತ್ರಗಳು ಯಾವುವು ಅಂತ ನಮ್ಮೆಲ್ಲರಿಗೂ ಗೊತ್ತಿದೆ. ಒಬ್ಬ ಹೀರೋ, ಅವನಿಗೊಬ್ಬ ಹೀರೋಯಿನ್, ಒಬ್ಬ ವಿಲನ್, ಒಂದು ಫೈಟಿಂಗ್, ಐದು ಹಾಡುಗಳು.... ಇನ್ನಷ್ಟು ಮತ್ತಷ್ಟು ಹೀಗೆ. ಆದರೆ ಅದೆಂಥಾ ಸಿನೆಮಾ ಆಗಲಿ.... ಎಷ್ಟೇ ಬಿಗ್ ಬಜೆಟ್ ಇರಲಿ, ಜನಪ್ರಿಯ ನಾಯಕನೇ ಇರಲಿ... ಸಿನೆಮಾದ ಮೊದಲ ಅರ್ಧಗಂಟೆಯೇ ಸಿನೆಮಾದ ನಿರ್ಣಾಯಕ. ಒಂದು "ಸಿನೆಮಾ" ಶುರು ಆಗುತ್ತಿದ್ದಂತೆಯೇ ಎಂತಹಾ ಕುತೂಹಲ ಮೂಡಿಸಬೇಕೆಂದರೆ ಅದಕ್ಕಾಗಿ ಪ್ರೇಕ್ಷಕ ಪೂರ್ತಿ ಸಿನೆಮಾ ನೋಡಬೇಕು. ಕೆಲವು ಸಿನೆಮಾಗಳು ಬಹಳ ಚಂದ ಇರುತ್ತವೆ. ಆದರೆ ಮೊದಲರ್ಧ ಗಂಟೆಯಲ್ಲಿ ಕುತೂಹಲ ಮೂಡಿಸುವಲ್ಲಿ ವಿಫಲವಾಗುತ್ತವೆ. ನನಗೇ ಎಷ್ಟೋ ಜನ ತಾಳ್ಮೆಯಿಂದ ನೋಡಿದ್ದರೆ ಸಿನೆಮಾ ಅರ್ಥವಾಗುತ್ತದೆ ಎಂದಿದ್ದಾರೆ. ಆದರೆ ನನ್ನ ಪ್ರಕಾರ ಮೊದಲಿಗೇ ಕುತೂಹಲ ಹುಟ್ಟಿಸದ ಸಿನೆಮಾವು ಪ್ರೇಕ್ಷಕರನ್...

"ಭಾಗ್ಯದ ಲಕ್ಷ್ಮೀ ಬಾರಮ್ಮ" (1986)

Image
  ನಿಮಗೆ ಜೀವನದಲ್ಲಿ ಬೇಸರವಾಗಿದೆಯೇ..? ಮಾಡುತ್ತಿರುವ ಕೆಲಸದಲ್ಲಿ ಏಕತಾನತೆ ಮೂಡಿದೆಯೇ..? ಯಾವುದರಲ್ಲಿಯೂ ಆಸಕ್ತಿ ಇಲ್ಲವಾಗಿದೆಯೇ..? ಹಾಗಾದರೆ ಖಂಡಿತಾ ಈ ಸಿನೆಮಾ ನೋಡಿ... ಮುದುರಿರುವ ನಮ್ಮ ಮನವನ್ನು ಉಲ್ಲಸಿತಗೊಳಿಸಿ ಹೂವಿನಂತೆ ಅರಳಿಸುತ್ತದೆ ಈ ಸಿನೆಮಾ. ಅಶ್ಲೀಲತೆಯ ಸೋಂಕೂ ಇರದ ಪರಿಶುದ್ಧ ಹಾಸ್ಯ ನಮ್ಮನ್ನು ಇಂದಿಗೂ ನಗೆಗಡಲಿನಲ್ಲಿ ತೇಲಿಸುತ್ತದೆ. ಕೆಲವು ಸಿನೆಮಾಗಳು ಎಲ್ಲಾ ಕಾಲಕ್ಕೂ ಸಲ್ಲುತ್ತವೆ. ಅದರಲ್ಲಿ "ಭಾಗ್ಯದ ಲಕ್ಷ್ಮಿ ಬಾರಮ್ಮ" ಸಹ ಒಂದು. 'ಭಾಗ್ಯದ ಲಕ್ಷ್ಮಿ ಬಾರಮ್ಮ.....' ಹೀಗೆ ಕರೆಯುವವರು ನಾಯಕ ಮತ್ತು ನಾಯಕಿ ಇಬ್ಬರೂ. ಇವರಿಬ್ಬರಿಗೂ ದುಡ್ಡಿನ‌ ಅವಶ್ಯಕತೆ ಬಹಳವಾಗಿರುತ್ತದೆ. ಆದರೆ ಯಾವುದೇ ಐಷಾರಾಮಿ ಜೀವನ ನಡೆಸಲು ಅಲ್ಲ. ಬದಲಿಗೆ ತಮ್ಮ-ತಮ್ಮ ಕುಟುಂಬದ ಅವಶ್ಯಕತೆಗಳಿಗಾಗಿ... ಅದಕ್ಕಾಗಿ ಇಬ್ಬರೂ ಮೂಗರೆಂದು ಸುಳ್ಳು ಹೇಳಿ ಅಂಗವಿಕಲರಿಗಾಗಿ ಮೀಸಲಿದ್ದ ಕೆಲಸ ಪಡೆಯುತ್ತಾರೆ. ಬಹುಮಾನದ ಆಸೆಗೆ ನಾಯಿಯೊಂದನ್ನು ಕದ್ದು ಡಾಗ್ ಷೋಗೆ ಹೋಗುತ್ತಾರೆ. ಆದರೆ ಏನೇ ಮಾಡಿದರೂ ಅವರಿಗೆ ಬೇಕಾಗಿದ್ದಷ್ಟು ದುಡ್ಡು ಎಲ್ಲಿಯೂ ಸಿಗುವುದಿಲ್ಲ. ಆಗ ಕಣ್ಣಿಗೆ ಬೀಳುವುದು ಆನಂದ ಎಂಟರ್ಪ್ರೈಸಸ್ ರವರ "ಆದರ್ಶ ದಂಪತಿ" ಕಾಂಟೆಸ್ಟ್. ಮದುವೆಯೇ ಆಗಿರದ ಇವರು ದಂಪತಿಗಳೆಂದು ಹೇಳಿ ಈ ಕಾಂಟೆಸ್ಟಿಗೆ ಭಾಗವಹಿಸಿದಾಗಲಿಂದ ನಿಜವಾದ ಮನರಂಜನೆ ಶುರುವಾಗುತ್ತದೆ. ಅದನ್ನು ಇಲ್ಲಿ ಹೇಳಿ ಪ್ರಯೋಜನವಿಲ್ಲ. ನೋಡ...