Posts

Showing posts from May, 2025

ಮಹಾನುಭಾವ (ತೆಲುಗು)

Image
"ಮಾನಸಿಕ ಖಾಯಿಲೆ ಕುರಿತ ಸಿನೆಮಾ" ಶರೀರದಲ್ಲಿ ಉಂಟಾಗುವ ನೂನ್ಯತೆಗಳ ಬಗ್ಗೆ ಎಲ್ಲರೂ ಸಿನೆಮಾ ಮಾಡುತ್ತಾರೆ. ನಮ್ಮ ಹೀರೋಗಳೂ ಸಹ ಕಣ್ಣಿಲ್ಲದೇ, ಕಾಲಿಲ್ಲದೇ ಇರುವ ಹಾಗೆ ನಟಿಸಿ ವೀಕ್ಷಕರ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ಆದರೆ ಮನಸ್ಸಿನಲ್ಲಿ ಉಂಟಾಗುವ ನೂನ್ಯತೆಗಳ ಬಗ್ಗೆ ಯಾರೂ ಜಾಸ್ತಿ ಬರೆದೂ ಇಲ್ಲ, ಸಿನೆಮಾ ಕೂಡಾ ಮಾಡಿಲ್ಲ. ಅಕಸ್ಮಾತ್ ಅಲ್ಲೊಂದು ಇಲ್ಲೊಂದು ಸಿನೆಮಾ ಮಾಡಿದ್ದರೂ, ಅದು ಮನಸ್ಸಿನ ಎಲ್ಲಾ ಖಾಯಿಲೆಗಳನ್ನು ಒಟ್ಟಿಗೆ ಸೇರಿಸಿ, ಅದಕ್ಕೆ ' ಹುಚ್ಚು' ಎಂಬ ಪಟ್ಟಿ ಕಟ್ಟಿ, ಹುಚ್ಚರೆಂದರೆ ಯಾವಾಗಲೂ ತಲೆ ಕೆದರಿಕೊಂಡು, ಬಟ್ಟೆ ಹರಿದುಕೊಂಡೇ ಇರುತ್ತಾರೆ, ತಮ್ಮನ್ನು ನೋಡಲು ಬಂದವರಿಗೆ ಕಚ್ಚುತ್ತಾರೆ ಎನ್ನುವ ತಪ್ಪು ಸಂದೇಶ ಕೊಡುವ ಚಿತ್ರಗಳೇ ಜಾಸ್ತಿ‌ ಇರುವುದು. ನಾಲ್ಕು ಜನರಲ್ಲಿ ಒಬ್ಬರಿಗೆ ಮನಸ್ಸಿನ ಖಾಯಿಲೆ ಇರುತ್ತದೆ ಅಂತ ಹೇಳುತ್ತದೆ ಮನಃಶಾಸ್ತ್ರ. ಅಲ್ಲದೇ ಮಾನಸಿಕ ಖಾಯಿಲೆಯ ಎಲ್ಲಾ ಲಕ್ಷಣಗಳೂ ಹುಚ್ಚೇ ಆಗಬೇಕೆಂದಿಲ್ಲ. ಅದರಲ್ಲಿ‌ ಕೆಲವು ಖಾಯಿಲೆಗಳು ಯಾರಿಗೂ ಹಾನಿ ಮಾಡದ, ಮೈಲ್ಡ್ ಖಾಯಿಲೆಯ ಜಾತಿಗೆ ಸೇರಿವೆ. ಅದರಲ್ಲಿ‌ ಒಂದು ಒಸಿಡಿ. ಅಂದರೆ " ಆಬ್ಸೆಸಿವ್ ಕಂಪಲ್ಸೀವ್ ಡಿಸಾರ್ಡರ್ ".  ಇದು ಒಂದು ಮಾನಸಿಕ ರೋಗವಾದರೂ, ಅವರು ಎಲ್ಲರಂತೆ ಬಟ್ಟೆ ಹರಿದುಕೊಂಡು, ಲಾಗ ಹಾಕಿಕೊಂಡು ಇರುವುದಿಲ್ಲ. ಇನ್‌ಫ್ಯಾಕ್ಟ್ ಅವರಿಗೆ ಆ ಖಾಯಿಲೆ ಇದೆ ಎನ್ನುವುದೇ ನಮಗೆ ಗೊತ್ತಾಗುವುದಿಲ್ಲ. ಇಂತಹಾ ಒಂದು ಮಾ...