Posts

Showing posts from November, 2025

Lokah Chapter 1 (ಮಲಯಾಳಂ)

Image
  ಅವಳು ಚಂದ್ರ.  ಆದರೆ ಅದು ಆಕೆ ತಾನಾಗಿಯೇ ಬದಲಾವಣೆ ಮಾಡಿಕೊಂಡಿರುವ ಹೆಸರು. ಅವಳ ನಿಜವಾದ ಹೆಸರು ನೀಲಿ..! ಅದು ಹಳೆಯ, ತುಂಬಾ ಹಳೆಯ ಹೆಸರು.. ಎಷ್ಟು ಹಳೆಯದೆಂದು ಅವಳಿಗೂ ಗೊತ್ತಿಲ್ಲ. ಸುಮಾರು ಸಾವಿರ ವರ್ಷಗಳಿಗೂ ಹಳೆಯದು ಇರಬಹುದು.  ಏಕೆಂದರೆ ಅವಳ ಹಳೆಯ ಕತೆಯನ್ನು (ಫ್ಲಾಷ್ ಬ್ಯಾಕ್) ನೋಡುವಾಗ, ಆಕೆಯ ತಂದೆ- ತಾಯಿ ಮತ್ತು ಅವರ ಕಡೆಯವರು ಹಾಕಿಕೊಂಡಿರುವ ಉಡುಗೆಯನ್ನು ಗಮನಿಸಿದರೆ, ಇದು ತುಂಬಾ ಪ್ರಾಚೀ‌ನ ಕಾಲದ ಘಟನೆ ಅಂತ ಗೊತ್ತಾಗುತ್ತದೆ.  ಆಗ ಬಾಲಕಿ ನೀಲಿಗೆ, ತನ್ನಲ್ಲಿ ಇರುವ ಶಕ್ತಿಯ ಬಗ್ಗೆ ಅರಿವಿರುವುದಿಲ್ಲ. ಆದರೆ ತನ್ನಪ್ಪ- ಅಮ್ಮನ ಮೇಲೆ ದೌರ್ಜನ್ಯ ನಡೆದಾಗ, ಅವಳ ಒಳಗಿನ ಶಕ್ತಿ ಒಮ್ಮೆಲೇ ಜಾಗೃತವಾಗುತ್ತದೆ.‌ ನಂತರ ಆಕೆ ತನ್ನಲ್ಲಿರುವ ಶಕ್ತಿಯನ್ನು, ಅಸಹಾಯಕರ ಉದ್ಧಾರಕ್ಕಾಗಿ ಬಳಸುತ್ತಾ, ಲೋಕ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುತ್ತಾಳೆ. ಸಧ್ಯಕ್ಕೆ ಅವಳು ತನ್ನ ಹೆಸರನ್ನು 'ಚಂದ್ರ' ಅಂತ ಇರಿಸಿಕೊಂಡು, ಭಾರತಕ್ಕೆ ಬಂದು, ಬೆಂಗಳೂರಿನಲ್ಲಿ ನೈಟ್ ಶಿಫ್ಟ್ ಕೆಲಸಕ್ಕೆ ಸೇರಿ, ಲೋ ಪ್ರೊಫೈಲ್ ಮೇನ್‌ಟೇನ್ ಮಾಡುತ್ತಾ ಬದುಕುತ್ತಿರುತ್ತಾಳೆ. ಏಕೆಂದರೆ ಅವಳು‌ ಒಂದೇ ಜಾಗದಲ್ಲಿ ಇಪ್ಪತ್ತು ವರ್ಷಗಳಿಗಿಂತಾ ಹೆಚ್ಚಿನ ಕಾಲ ನೆಲೆಸುವುದಿಲ್ಲ. ಅದು ಅವರ ರೂಲ್ಸು!  ಸಿನೆಮಾ ಮುಂದೆ ಹೋಗುತ್ತಾ ಇದ್ದಂತೆ, ನಮಗೆ ಅವಳಲ್ಲಿರುವ ಸೂಪರ್ ಪವರ್ಸ್‌ನ ಪರಿಚಯವಾಗುತ್ತಾ ಹೋಗುತ್ತದೆ. ಆಗ ಇವಳೇನು ಸೂಪರ್ ನ್ಯಾಚುರಲ್ ಹೀರೋ...