ಎಡಗೈ ಅಪಘಾತಕ್ಕೆ ಕಾರಣ (ಕನ್ನಡ)
ಬೇರೆ ಭಾಷೆಗಳಲ್ಲಿ ಮಾನಸಿಕ ರೋಗದ ಬಗ್ಗೆ ಮತ್ತು ಅದನ್ನು ಅನುಭವಿಸುತ್ತಿರುವ ರೋಗಿಗಳ ಬಗ್ಗೆ ಸೂಕ್ಷ್ಮ ರೀತಿಯಲ್ಲಿ ಅರ್ಥ ಮಾಡಿಸುವ ಸಿನಿಮಾ ಬಂದಾಗ, 'ನಮ್ಮ ಕನ್ನಡದಲ್ಲಿ ಅಂತಹದ್ದೇ ಸಿನಿಮಾ ಯಾಕೆ ಬರಬಾರದು?' ಅಂತ ಯಾವಾಗಲೂ ಅಂದುಕೊಳ್ಳುತ್ತಿದ್ದೆ. ಹಾಗಾಗಿ ಈ ಸಿನೆಮಾ ಬಂದಾಗ ನನ್ನ ನಿರೀಕ್ಷೆ ದುಪ್ಪಟ್ಟಾಗಿತ್ತು. ದುರಾದೃಷ್ಟವೆಂದರೆ, ಅಂತಹ ಚಾನ್ಸ್ ಸಿಕ್ಕಿದರೂ ಕೂಡಾ, ಅದನ್ನು ಪರಿಪೂರ್ಣವಾಗಿ ತೋರಿಸುವಲ್ಲಿ ನಿರ್ದೇಶಕರು ಎಡವಿದ್ದಾರೆ. ಯಾವ ಪಾಯಿಂಟಿಗೂ ಫೋಕಸ್ ಕೊಡದೇ, ಲಂಗುಲಗಾಮಿಲ್ಲದೇ ಕಥೆ ಓಡಿಸಿದ್ದಾರೆ. ಅವರು ಮನಸ್ಸು ಮಾಡಿದ್ದರೆ, ಎಡಗೈ ಬಳಸುವವರ ಬಗ್ಗೆ ಅತ್ಯುತ್ತಮವಾದ ಕಥೆಯನ್ನು ತೆರೆಯ ಮೇಲೆ ತರಬಹುದಾಗಿತ್ತು. ಅವರ ಸಂಕಷ್ಟಗಳನ್ನು ನವಿರಾದ ಹಾಸ್ಯದಲ್ಲಿ ಕವರ್ ಮಾಡಿ, ಜನರಿಗೆ ಈ ಅಪರೂಪದ ಕೇಸ್ ಬಗ್ಗೆ ಅರಿವು ಮೂಡಿಸಬಹುದಿತ್ತು. ಈ ಸಿನೆಮಾ ನೋಡಿದ ನಂತರ, ಎಡಗೈ ಬಳಸುವವರ ಬಗ್ಗೆ ಜನರ ಅಭಿಪ್ರಾಯ ಬದಲಾಗುವಂತೆ ಮಾಡಬಹುದಿತ್ತು. ನಮ್ಮ ಜನರು ಅಂಥವರ ಬಗ್ಗೆ ಸಾಫ್ಟ್ ಕಾರ್ನರ್ ಇಟ್ಟುಕೊಳ್ಳದೇ, ಸಾರ್ವಜನಿಕವಾಗಿ ನಿಂದನೆ ಮಾಡುತ್ತಾರೆ. ಇದರಿಂದ ಎಡಗೈ ಬಳಸುವವರಿಗೆ ಎಷ್ಟು ಮಾನಸಿಕ ಹಿಂಸೆಯಾಗುತ್ತದೆ ಅಂತ ಯಾರೂ ಯೋಚಿಸಲು ಹೋಗುವುದಿಲ್ಲ. ಆದರೆ ಇದೇನು ಖಾಯಿಲೆಯಲ್ಲ. ಅಲ್ಲದೇ.. ಪ್ರತೀ ಕೆಲಸಕ್ಕೂ ಬಲಗೈ ಅನ್ನೇ ಬಳಸಬೇಕು ಅಂತ ಯಾವುದೇ ರೂಲ್ಸ್ ಕೂಡಾ ಇಲ್ಲ. ಅಕಸ್ಮಾತ್ ಇದ್ದರೂ ಅದನ್ನು ನಾವೇ ಮಾಡಿಕೊಂಡಿರುವುದಷ್ಟೇ.. ಅದಕ್...