ಛೂ ಮಂತರ್ (ಕನ್ನಡ)
ಕರ್ವ ನಿರ್ದೇಶಕರಾದ ನವನೀತ್ ಅವರ "ಛೂ ಮಂತರ್" ಸಿನೆಮಾದ ಮೇಲೆ ಸ್ವಲ್ಪ ನಿರೀಕ್ಷೆಗಳು ಹೆಚ್ಚಾಗಿಯೇ ಇದ್ದವು. ಏಕೆಂದರೆ ನಾವು ಯಾವುದೇ ಸಿನೆಮಾ ನೋಡುವಾಗ, ಆ ನಿರ್ದೇಶಕರ ಹಿಂದಿನ ಸಿನೆಮಾವನ್ನು ನೆನಪಿಸಿಕೊಂಡು, ತುಲನೆ ಮಾಡಿಯೇ ಮಾಡುತ್ತೇವೆ. ಜೊತೆಗೆ ಈಗಾಗಲೇ ಬೇಕಾದಷ್ಟು ಹಾರರ್ ಮೂವಿಗಳನ್ನು ನೋಡಿರುವ ನಮಗೆ, ಈ ನಿರ್ದೇಶಕರು ತಮ್ಮ ಚಿತ್ರದಲ್ಲಿ ಎಲ್ಲಿಯೂ ನೀಡಿರದಂತಹಾ ಅನುಭವ ಕೊಡ್ತಾರೆ ಅನ್ನುವ ನಿರೀಕ್ಷೆಯೂ ಸ್ವಲ್ಪ ಜಾಸ್ತಿಯೇ ಇತ್ತು. ಇಷ್ಟೆಲ್ಲಾ ನಿರೀಕ್ಷೆಗಳನ್ನು ಇಟ್ಟುಕೊಂಡು ಸಿನೆಮಾ ನೋಡಲು ಕೂತೆ. ಮೊದಲಿಗೆ ಇಷ್ಟವಾಗಿದ್ದು ಚಿತ್ರಕಥೆ. ಎಲ್ಲಿಯೂ ಬೋರ್ ಆಗದ ಹಾಗೆ, ಎರಡು ಟೈಮ್ ಲೈನ್ಗಳನ್ನು ಒಂದೇ ಸಮನೆ ತೆಗೆದುಕೊಂಡು ಹೋಗಿದ್ದು ತುಂಬಾ ಚೆನ್ನಾಗಿತ್ತು. ಇದು ಎಲ್ಲಿಯೂ ಮಿಸ್ ಹೊಡೆದಿಲ್ಲ ಮತ್ತು ಇದೆರೆಡೂ ಬೇರೆ ಬೇರೆ ಅಂತ ಎಲ್ಲಿಯೂ ಅನುಮಾನ ಬರುವುದಿಲ್ಲ. 2024ರಲ್ಲಿ ಇರುವ ಟೆಕ್ನಾಲಜಿ, 2002ರಲ್ಲಿ ಇಲ್ಲದೇ ಇರುವುದನ್ನು ಕೂಡಾ ಕಥೆಯಲ್ಲಿ ಎಲ್ಲೂ ಬಿಟ್ಟು ಕೊಟ್ಟಿಲ್ಲ. ನಮಗೆ ವಿಷಯವೆಲ್ಲಾ ಗೊತ್ತಾಗಿ, ಮತ್ತೊಂದು ಬಾರಿ ಸಿನೆಮಾ ನೋಡಲು ಕುಳಿತರೂ ಸಹ, ಒಂದೇ ಒಂದು ಮಿಸ್ಟೇಕ್ ಕೂಡಾ ಕಂಡು ಬರುವುದಿಲ್ಲ. ಅಷ್ಟು ಪರ್ಫೆಕ್ಟ್ ಆಗಿ ಚಿತ್ರಕಥೆ ಹೆಣೆದಿದ್ದಾರೆ. ಇನ್ನು ಶರಣ್ ಅಂತೂ ಡೈನಮೋ ಪಾತ್ರದಲ್ಲಿ ನಟಿಸಿಲ್ಲ, ಬದಲಿಗೆ ಜೀವಿಸಿದ್ದಾರೆ. ಇಷ್ಟು ದಿನ ಸೀರಿಯಸ್ ಚಿತ್ರದಲ್ಲಿಯೂ ಕಾಮೆಡಿ ಮಾಡುತ್ತಿದ್ದ ನಟ, ಇದರಲ...