ಬೀರಬಲ್ Trilogy (ಕನ್ನಡ)
ಸಿನೆಮಾ : ಬೀರಬಲ್ Trilogy Case 1 ನಿರ್ದೇಶಕರು : ಎಂ.ಜಿ.ಶ್ರೀನಿವಾಸ್ ಪಾತ್ರವರ್ಗ : ಎಂ.ಜಿ. ಶ್ರೀನಿವಾಸ್, ರುಕ್ಮಿಣಿ ವಸಂತ್, ಸುರೇಶ ಹೆಬ್ಳೀಕರ್ ಇಸವಿ : 2019 ಈ ಸಿನೆಮಾದ ಕಡೆಯ ಸಾಲುಗಳು ಈ ರೀತಿ ಇವೆ. "ಒಬ್ಬ ಶಕ್ತಿವಂತ ಶಕ್ತಿ ಇರುವ ತನಕ ಮಾತ್ರ ಗೆಲ್ತಾನೆ, ಆದರೆ ಅದೇ ಒಬ್ಬ ಬುದ್ಧಿವಂತ ಯಾವಾಗ್ಲೂ ಗೆಲ್ತಾನೆ" ಯಾಕಂದ್ರೆ ಗೆಲ್ಲೋಕ್ಕೆ ಬಂದಿರುವುದು ಬೇರೆ ಯಾರೂ ಅಲ್ಲ.. ಬೀರಬಲ್ ! ಅಂದ್ರೆ ಮಹೇಶ್ ದಾಸ್. ನಮ್ಮ ಹೀರೋ ಹೆಸರು ಕೂಡಾ ಅದೇ.. ಮಹೇಶ್ ದಾಸ್. ಮೊದಲ ನೋಟಕ್ಕೇ ನಮ್ಮನ್ನು ಬೋಲ್ಡ್ ಮಾಡುವ ಟ್ಯಾಲೆಂಟೆಡ್ ಹೀರೋ ಇವರು. ಹೇಗಂತೀರಾ? ಸಾಮಾನ್ಯವಾಗಿ ಸಿನೆಮಾಗಳಲ್ಲಿ ಹೀರೋ ಎಂಟ್ರಿ ಹೇಗಿರುತ್ತದೆ? ಭರ್ಜರಿ ಸಾಂಗ್...