ವಿಕ್ರಮ್ (2022) - ತಮಿಳು

 



ನಾನು ಮೊದಲಿನಿಂದಲೂ ಪ್ರತಿಪಾದಿಸುತ್ತಿರುವುದು ಒಂದೇ ವಿಷಯ. ಒಂದು ಸಿನೆಮಾ ಜನರ ಮನಸ್ಸಿಗೆ ತಟ್ಟಬೇಕೆಂದರೆ ಎರಡು ಅಂಶ ಬಹಳ ಮುಖ್ಯವಾಗುತ್ತದೆ.

ಮೊದಲನೆಯದು "ಡೈಲಾಗ್ಸ್..."

ಅದನ್ನು ಜನಸಾಮಾನ್ಯರಾದ ನಾವು ನಮ್ಮ ದಿನನಿತ್ಯದ ಬದುಕಿನಲ್ಲಿ ಮಾತನಾಡಿಕೊಳ್ಳುವ ಮೂಲಕ ಸಂಭ್ರಮಿಸುತ್ತೇವೆ.

ಎರಡನೆಯದು "ಬಿಜಿಎಂ...."

ವಿಕ್ರಮ್ ಸಿನೆಮಾದ ಬಿಜಿಎಂಗೆ ಹತ್ತಕ್ಕೆ ನೂರು ಅಂಕ‌ ಕೊಡಬಹುದು. ಯಾರು ಮರ್ರೇ ಅಷ್ಟೊಳ್ಳೇ ಮ್ಯೂಸಿಕ್ ಕ್ರಿಯೇಟ್ ಮಾಡಿದವರು? ಇಷ್ಟು ದಿನ ಅವರು ಎಲ್ಲಿ ಬಚ್ಚಿಟ್ಟುಕೊಂಡಿದ್ದರು? ಆ ಮ್ಯೂಸಿಕ್ಕಿಗೆ ತಕ್ಕ ಸಿನೆಮಾಟೋಗ್ರಫಿ... ಅದರ ನಂತರ ಕ್ರೆಡಿಟ್ ಪಡೆಯೋದು ಎಡಿಟಿಂಗ್..

ವಾಹ್! ಸಿನೆಮಾ ಅಂದ್ರೆ ಇದು..

ವಿಕ್ರಮ್ ಸಿನೆಮಾ ಸುಮ್ಮಸುಮ್ಮನೆ ಓಡಿರುವುದಲ್ಲ. ಬದಲಿಗೆ ಅದನ್ನೊಂದು ಅಭ್ಯಾಸ ವಸ್ತು ಎಂದು ತೆಗೆದುಕೊಂಡರೆ ಅದರಿಂದ ತುಂಬಾ ಕಲಿಯಬಹುದು. ಮೊದಲಿಗೆ ಯಾವ ನಟನಿಂದ ಸಿನೆಮಾವನ್ನು ಕ್ಯಾರಿ ಓವರ್ ಮಾಡಬೇಕು ಎನ್ನುವುದನ್ನು ನಿರ್ದೇಶಕರಿಂದ ಕಲಿಯಬೇಕು.

ನಿಜ ಹೇಳಬೇಕೆಂದರೆ ನಾನು ಫಹಾದ್ ಫಾಸಿಲ್ ಗಾಗಿಯೇ ನೋಡಲು ಶುರು ಮಾಡಿದ್ದು. ಕಮಲ್ ಹಾಸನ್ ನಂತರ ಆವರಿಸುತ್ತಾ ಬಂದರು. ಆದರೆ ಮೊದಲು ನಮ್ಮನ್ನು ಬಿಗಿಯಾಗಿ ಕುರ್ಚಿಯಲ್ಲಿ ಕೂರಿಸಿದ್ದು ಫಾಸಿಲ್ ಮಹಾಶಯನೇ!

ಸಿನೆಮಾವನ್ನು ಸಿನೆಮಾದಂತೆಯೇ ನೋಡಬೇಕು. ಆಗ ಅದು ಸಿನೆಮಾ ಎನಿಸುತ್ತದೆ. ಹೌದು.. ಅಲ್ಲಿ ಮ್ಯಾಜಿಕ್ ನಡೆಯಬೇಕು. ಹೀರೋ ಕಥೆ ಅತಿರಂಜಿತವಾಗಿರಬೇಕು. ಇಲ್ಲದಿದ್ದರೆ ಅದು ಸಿನೆಮಾ ಹೇಗಾಗುತ್ತದೆ. ಡಾಕ್ಯುಮೆಂಟರಿ ಆಗುತ್ತದಷ್ಟೇ.. ವಿಕ್ರಮ್ ಸಿನೆಮಾ ಇದೆಲ್ಲದರಲ್ಲಿಯೂ ಗೆದ್ದಿದೆ. ಈ ಸಿನೆಮಾ ತನ್ನೊಳಗೆ ನೂರಾರು ಗುಟ್ಟುಗಳನ್ನು ಬಚ್ಚಿಟ್ಟುಕೊಂಡು, ಒಂದೊಂದೇ ಗುಟ್ಟನ್ನು ರಿವೀಲ್ ಮಾಡುತ್ತಾ ಸಿನೆಮಾ ಪ್ರೇಮಿಗಳಿಗೆ ಹುಚ್ಚು ಹಿಡಿಸುತ್ತದೆ.

ಕಮಲ್ ಹಾಸನ್ ಅವರ ಪ್ರತಿಯೊಂದು ಎಂಟ್ರಿ ಸೀನ್ ಕೂಡ ಅದ್ಭುತ...!!  ಲೆಜೆಂಡ್ ಆಕ್ಟರ್ ಅವರು....! ಏನೂ ಮಾಡುವುದೇ ಬೇಡ. ಜಸ್ಟ್ ಅವರ ಸ್ಕ್ರೀನ್ ಪ್ರೆಸೆನ್ಸ್ ಸಾಕು. ಹುಚ್ಚೆದ್ದು ಕುಣಿಯುವ ಹಾಗೆ ಆಗುತ್ತದೆ‌.

ಕಥೆಯ ಬಗ್ಗೆ ನಾನು ಏನೂ ಹೇಳುವುದಿಲ್ಲ. ಏಕೆಂದರೆ ನಿರ್ದೇಶಕರ ಚಮತ್ಕಾರ ಅಡಗಿರುವುದು ಎಂಥಾ ಕಥೆಯನ್ನೇ ಆಗಲೀ.. ಅದನ್ನು ದೃಶ್ಯರೂಪಕ್ಕೆ ಹೇಗೆ ತಂದರು ಎನ್ನುವುದರ ಮೇಲೆ.. ಹಾಗಾಗಿ ಕಥೆಗಿಂತಾ ಚಿತ್ರಕಥೆ ಮುಖ್ಯವಾಗುತ್ತದೆ.

ಓಟಿಟಿಯಲ್ಲಿ ನೋಡಿದ್ದರಿಂದ ಆಗಾಗ ಷಾಕ್ ಹೊಡೆಸಿಕೊಂಡು "ಏನು?" ಅಂತ ಕಣ್ಣರಳಿಸಿ, ಕನ್ನಡಕ ತೆಗೆದು, ಕಣ್ಣುಜ್ಜಿಕೊಂಡು, ಮತ್ತೆ ಹಿಂದೆ ತಿರುಗಿಸಿ ರಿಪೀಟ್ ನೋಡಿದ್ದಾಯ್ತು. ಆದರೆ ಎರಡಲ್ಲ ಮೂರು ಬಾರಿ ನೋಡಿದರೂ ಆ ಸೀನ್ ಎಸೆನ್ಸ್ ಮಾಯವಾಗಲಿಲ್ಲ.

ಪ್ರತೀಬಾರಿಯೂ ಅದೇ ಗೂಸ್ ಬಂಪ್ಸ್..!!!

ಜೊಂಬಿ ರೆಡ್ಡಿ ಸಿನೆಮಾದ ನಂತರ ನನಗೆ ಅತ್ಯಂತ ಇಷ್ಟವಾದ ಬಿಜಿಎಂ ಎಂದರೆ ಈ ಸಿನೆಮಾದ್ದು. ಒಂದು ಸಿನೆಮಾದ ಎಲ್ಲಾ ವಿಭಾಗಗಳಿಗೂ ಮಹತ್ವ ಕೊಟ್ಟರೆ ಮಾತ್ರ ಇಂತಹಾ ಅದ್ಭುತ ಸಿನೆಮಾ ಮೂಡಿ ಬರುತ್ತದೆ.

ಕಮಲ್ ಹಾಸನ್ ಅವರ ಜೊತೆ ಕೆಲಸ ಮಾಡಿದವರೇ ಧನ್ಯರು... ಅವರನ್ನು ನೋಡುವುದೇ ಒಂದು ಖುಷಿ..

ನೋಡದೇ ಇದ್ದವರು ಮಿಸ್ ಮಾಡದೇ ನೋಡಿ.‌

ಅಂದ ಹಾಗೆ ಮತ್ತೊಬ್ಬ ಮುಖ್ಯವಾದ ನಟರ ಬಗ್ಗೆ ಹೇಳಲೇ ಇಲ್ಲ ಅಲ್ವಾ? ವಿಜಯ್ ಸೇತುಪತಿ... ಏನಾದರೂ ಹೇಳಬೇಕಾ???

ಬೇಡ ಅನ್ನಿಸುತ್ತೆ ❤

**********

ಕೆ.ಎ.ಸೌಮ್ಯ
ಮೈಸೂರು

Popular posts from this blog

Paradha Movie Review (Telugu)

ಥಪ್ಪಡ್ (ಹಿಂದಿ)

ಎಡಗೈ ಅಪಘಾತಕ್ಕೆ ಕಾರಣ (ಕನ್ನಡ)