13B (ಹಿಂದಿ)
ಸಿನೆಮಾ ಎಂದರೆ ಹೇಗಿರಬೇಕು? ಕೈಯಲ್ಲಿ ಪಾಪ್ ಕಾರ್ನ್ ಹಿಡಿದು ಕೂತರೆ ತಿನ್ನುತ್ತಿರುವುದೂ ನಮ್ಮರಿವಿ್ಗಗೆ ಬರಬಾರದು ಹಾಗಿರಬೇಕು. ಉಸಿರಾಡುತ್ತಿದ್ದೇವೆಯೋ ಇಲ್ಲವೋ ಎನಿಸುವಷ್ಟು ಸಿನೆಮಾದೊಳಗೆ ತಲ್ಲೀನರಾಗಬೇಕು. ಅಂತಹಾ ಒಂದು ಸಿನೆಮಾ ನೋಡಬೇಕೆನ್ನುವುದು ನಮ್ಮೆಲ್ಲರ ಆಸೆಯಾಗಿರುತ್ತದೆ. 13B ನೋಡುತ್ತಿದ್ದರೆ ನನಗೆ ಇದೇ ಅನುಭವವಾಯ್ತು. ಹೊಸದಾಗಿ 13B ಫ್ಲಾಟಿಗೆ ಒಂದು ಕುಟುಂಬ ಬರುತ್ತದೆ. ಅಂದೇ ಒಂದು ಹೊಸಾ ಸೀರಿಯಲ್ ಸಹ ಶುರುವಾಗುತ್ತದೆ. ಆ ಸೀರಿಯಲ್ ಕಥೆ ಇವರ ಮನೆ ಕಥೆಯ ರೀತಿಯೇ ಇರುತ್ತದೆ. ಆದರೆ ಮೊದಲಿಗೆ ಯಾರೂ ಅದನ್ನು ಗಮನಿಸುವುದಿಲ್ಲ. ಆದರೆ ಸ್ವಲ್ಪ ಸಮಯದಲ್ಲಿಯೇ ನಾಯಕನಿಗೆ ಈ ವಿಷಯ ಗೊತ್ತಾಗುತ್ತದೆ. ಮನೆಯಲ್ಲಿ ನಡೆಯುವ ಘಟನೆ ಆ ದಿನದ ಎಪಿಸೋಡಿನಲ್ಲಿ ಮೊದಲೇ ಗೊತ್ತಾಗಲು ತೊಡಗುತ್ತದೆ. ಇದನ್ನರ್ಥ ಮಾಡಿಕೊಂಡ ನಾಯಕ ತಾನೂ ಸೀರಿಯಲ್ ನೋಡಲು ತೊಡಗುತ್ತಾನೆ. ಅಂದಂದಿನ ಎಪಿಸೋಡ್ ಗಮನಿಸಿ ಅದರಂತೆ ತನ್ನ ಮನೆಯವರನ್ನು ಮುಂದಾಗಬಹುದಾದ ಪ್ರಮಾದಗಳಿಂದ ಕಾಪಾಡುತ್ತಿರುತ್ತಾನೆ. ತಾನು ಮನೆಗೆ ಬರದೇ ಇದ್ದಂತಹ ದಿನಗಳಲ್ಲಿ ಅಮ್ಮನಿಗೋ ಹೆಂಡತಿಗೋ ಫೋನ್ ಮಾಡಿ ಇವತ್ತು ಸೀರಿಯಲ್ಲಿನಲ್ಲಿ ಏನಾಯ್ತು ಅಂತ ವಿಚಾರಿಸುತ್ತಿರುತ್ತಾನೆ. ಇದನ್ನು ನೋಡಿ ಅವರು ಇವನೂ ಸೀರಿಯಲ್ಲಿಗೆ ಅಡಿಕ್ಟ್ ಆದ ಅಂತ ಅವನನ್ನು ಆಡಿಕೊಳ್ಳುತ್ತಾರೆ. ಅತ್ಯಂತ ವೇಗದ ನಿರೂಪಣೆ, ನಮ್ಮ ಊಹೆಗೂ ಮೀರಿದ ಕಥಾವಸ್ತುಗಳಿಂದ ಸಿನೆಮಾ ಮುಂದೋಡುವುದೇ ಗೊತ್ತಾಗುವುದಿಲ್ಲ. ಹಾ...