Posts

Vellai Pookkal (Tamil) ಸಿನೆಮಾ ವಿಮರ್ಶೆ

Image
  ಎರಡು ರೇಖೆಗಳು ಸಮಾನಾಂತರವಾಗಿ ಚಲಿಸುತ್ತಿರುತ್ತವೆ. ಆದರೆ ಅವರೆಡೂ ರೇಖೆಗಳು ಒಂದನ್ನೊಂದು ಸಂಧಿಸುವುದಿಲ್ಲ. ಅಕಸ್ಮಾತ್ ಸಂಧಿಸಿದರೆ ಏನಾಗುತ್ತದೆ....?? ಈ ಸಿನೆಮಾ ಆಗುತ್ತದೆ. ಹೇಗೆ? ನೀವೇ ನೋಡಿ.. ರೇಖೆ-1 ಚೆನ್ನೈ ಪೊಲೀಸ್ ಅಧಿಕಾರಿ 'ರುದ್ರನ್' ಕೊಲೆ ಕೇಸುಗಳನ್ನು ಲೀಲಾಜಾಲವಾಗಿ ಬಿಡಿಸುವುದರಲ್ಲಿ ಪ್ರವೀಣ. ಸಿನೆಮಾದ ಶುರುವಿನಲ್ಲಿ ಆತ ಬಗೆಹರಿಸುವ ಕೊಲೆ ಕೇಸಿನಿಂದ ಆತ ಎಷ್ಟು ಚಾಣಾಕ್ಷ ಅಂತ ನಮಗೆ ಗೊತ್ತಾಗುತ್ತದೆ. ಆದರೆ ಎಷ್ಟೇ ಚಾಣಾಕ್ಷನಾಗಿರಲಿ ಸೇವೆಯ ಅವಧಿ ಮುಗಿದ ಮೇಲೆ ರಿಟೈರ್ ಆಗಲೇಬೇಕು. ಹಾಗೆಯೇ ರುದ್ರನ್ ಸಹ ತನ್ನ ಸೇವೆಯಿಂದ ನಿವೃತ್ತನಾಗುತ್ತಾನೆ.‌ ನಂತರ ಆತ ತನ್ನ ಮಗ ನೆಲೆಸಿರುವ ದೇಶವಾದ ಅಮೆರಿಕಾಗೆ ಹೋಗುತ್ತಾನೆ. ಮಗ ಅಲ್ಲಿಯ ಬಿಳಿ ಹೆಂಡತಿಯನ್ನು ಮದುವೆ ಆಗಿದ್ದಾನೆಂದು ರುದ್ರನ್ ಕೋಪ ಮಾಡಿಕೊಂಡು ಬಹಳ ವರ್ಷಗಳಿಂದ ಮಗನನ್ನು ಮಾತು ಸಹ ಆಡಿಸಿರುವುದಿಲ್ಲ. ಈಗ ಆ ಮನಸ್ತಾಪ ಮರೆತು ಮಗನ ಜೊತೆ ಕಾಲ ಕಳೆಯಲು ಅಮೆರಿಕಾಗೆ ಹೋಗುತ್ತಾನೆ ರುದ್ರನ್. ಮಗ-ಸೊಸೆ ಇಬ್ಬರೂ ಆತನನ್ನು ತುಂಬು ಹೃದಯದಿಂದ ಸ್ವಾಗತಿಸುತ್ತಾರೆ. ಆತನ ಸೊಸೆ ಮಾವನಿಗಾಗಿ ತಮಿಳು ಮಾತನಾಡುವುದನ್ನು, ದಕ್ಷಿಣ ಭಾರತದ ತಿಂಡಿ ಮಾಡುವುದು ಕಲಿಯುತ್ತಿರುತ್ತಾಳೆ. ಆದರೂ ಯಾಕೋ ರುದ್ರನ್ ತನ್ನ ಮಗನನ್ನು ಒಪ್ಪಿಕೊಂಡಷ್ಟು ಮುಕ್ತವಾಗಿ ಸೊಸೆಯನ್ನು‌ ಒಪ್ಪಿಕೊಳ್ಳುವುದಿಲ್ಲ. ಸೊಸೆ ಸೋಲೊಪ್ಪಿಕೊಳ್ಳದೇ ದಿನನಿತ್ಯವೂ ಮಾವನನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲ...

Thumbadd (Marathi) ಸಿನೆಮಾ ವಿಮರ್ಶೆ

Image
  Thumbbad ಎಂಬುದು ಒಂದು ಊರಿನ ಹೆಸರು ಹೆಸರು ಮತ್ತು ಪೋಸ್ಟರ್ ನೋಡಿಯೇ ಇದ್ಯಾವುದೋ ಭಯಾನಕ (Horror) ಸಿನೆಮಾ ಅಂತ ಅರ್ಥವಾಗಿತ್ತು. ಈ ಸಿನೆಮಾ ನೋಡಲು ಶುರು ಮಾಡಿದಾಗಲೇ ರಾತ್ರಿ... ಮುಗಿದಾಗ ಮಧ್ಯರಾತ್ರಿ. ಮನಸ್ಸಿನಲ್ಲಿಯೇ ಸಿನೆಮಾ ಅನ್ನು ವಿಮರ್ಶಿಸುತ್ತಾ ಮಲಗಿದವಳಿಗೆ ಎಚ್ಚರವಾದದ್ದು ಬೆಳಗಿನ ಝಾವ. ಎದ್ದ ಕೂಡಲೇ ಅನ್ನಿಸಿದ್ದು 'ನಾನು ಸಿನೆಮಾ ನೋಡಿದೆನೋ? ಅಥವಾ ಕನಸು ಕಂಡೆನೋ?' ಅಂತ.  ನಿಜಕ್ಕೂ ಕನಸಿನಂತೆಯೇ ಇದೆ ಸಿನೆಮಾ.  ಯಾರಾದರೂ ಊಹೆ ಸಹ ಮಾಡಿರಲಿಕ್ಕಿಲ್ಲ ಈ ರೀತಿ ಆಗಬಹುದು ಅಂತ. ಥೇಟ್ ನಮ್ಮ ಕನಸಿನ ಹಾಗೆಯೇ ಸಿನೆಮಾದಲ್ಲಿಯೂ ಫ್ಯಾಂಟಸಿ ನಡೆಯುತ್ತದೆ. "ಕನಸು" ಅಂತಲೇ ಯಾಕೆ ಹೇಳಿದೆ ಎಂದರೆ, ನಾವು ನಮ್ಮ ಕನಸಿನಲ್ಲಿ ಏನು ನಡೆದರೂ ನಂಬುತ್ತೇವೆ. ಇಲ್ಲೂ ಹಾಗೆಯೇ.... ಯೋಚನೆಗೆ ಆಸ್ಪದವೇ ಇಲ್ಲ.. ಘಟನೆಗಳು ಸುಮ್ಮನೆ ನಡೆಯುತ್ತಾ ಹೋಗುತ್ತವೆ... ನಾವು 'ಮುಂದೇನು?' ಎಂಬ ಕಾತುರದಲ್ಲಿ ಕಾಯುವುದೊಂದೇ ಮಾರ್ಗ.. ಸಿಂಪಲ್ ಆಗಿ ಹೇಳಬೇಕಂದ್ರೆ ಇದೊಂದು ನಿಧಿಯ ಹುಡುಕಾಟದ ಕಥೆ.  ಶುರುವಿನಲ್ಲಿಯೇ ನಮಗೆ ಈ ಬಗ್ಗೆ ಮಾಹಿತಿ ಸಿಗುತ್ತದೆ. ಜೊತೆಗೆ ಆ ನಿಧಿ ಇನ್ನೂ ಯಾರಿಗೂ ಸಿಕ್ಕಿಲ್ಲ ಅನ್ನುವುದೂ ಸಹ ಗೊತ್ತಾಗುತ್ತದೆ. ಯಾರಿಗೂ ದಕ್ಕಿರದ ಆ ನಿಧಿಯನ್ನು ಕಾಣಲು, ಅದೆಲ್ಲಿದೆ ಅಂತ ತಿಳಿಯಲು ನಾವೂ ಸಹ ಆಸೆ ಪಡುತ್ತೇವಲ್ಲ... ಅಲ್ಲಿ ನಿರ್ದೇಶಕರು ಗೆದ್ದಿದ್ದಾರೆ ❤  ವಿನಾಯಕ... ಈ ಸಿನೆಮಾದ ಕಥಾನಾಯಕ. ತನ್ನ...

Newton (Hindi) ಸಿನೆಮಾ ವಿಮರ್ಶೆ

Image
  ಸರ್ಕಾರಿ ಕೆಲಸ ದೇವರ ಕೆಲಸ. ಸರ್ಕಾರ ಕೊಟ್ಟಿರುವ ಕೆಲಸವನ್ನು ಶ್ರಧ್ಧಾ-ಭಕ್ತಿಯಿಂದ ಮಾಡಿದರೆ ಸಿಗುವ ಉಡುಗೊರೆ ಕತ್ತು ಮುರಿತ. ಆಶ್ಚರ್ಯವಾಯ್ತೇ? ಚುನಾವಣಾ ಕರ್ತವ್ಯವನ್ನು ಅತ್ಯಂತ ನಿಷ್ಠೆಯಿಂದ ನಿಭಾಯಿಸುವ ನಮ್ಮ ಹೀರೋ ನ್ಯೂಟನ್ನಿಗೆ ಸಿಗುವ ಉಡುಗೊರೆ ಇದೇ... !!  ನಿಜವಾದ ನ್ಯೂಟನ್ ಹೊಸ ವಿಷಯಗಳನ್ನು ಕಂಡು ಹಿಡಿಯುವ ವಿಜ್ಞಾನಿಯಾದರೆ, ನಮ್ಮ ಹೀರೋ ನ್ಯೂಟನ್ ಈಗಿರುವ ವಿಷಯವನ್ನೇ ಅರಗಿಸಿಕೊಳ್ಳಲಾಗದೇ ತೊಳಲಾಡುವವನು. ರಾತ್ರೋರಾತ್ರಿ ಕೆಟ್ಟು ಕೂತಿರುವ ವ್ಯವಸ್ಥೆ ವಿರುದ್ಧ ಹೋರಾಡಿ ಗೆಲ್ಲಬೇಕೆಂದುಕೊಂಡವನು. ಆದರೆ ಅದರಲ್ಲಿ ಯಶಸ್ಸು ಸಿಗದೇ ಇತ್ತ ಕಡೆ ಸೋಲನ್ನೂ ಒಪ್ಪಿಕೊಳ್ಳದೇ ಪರದಾಡುತ್ತಿರುವನು. ಭಾರತೀಯರಲ್ಲಿ ಅನೇಕ ವಿಷಯಗಳು ಹಾಸುಹೊಕ್ಕಾಗಿವೆ. ಅದರಲ್ಲಿ ನಿರ್ಲಕ್ಷ್ಯತೆಯೂ ಒಂದು. ನೇರ ತನ್ನ ಬುಡಕ್ಕೆ ಬರುವವರೆಗೂ ಯಾರೂ ತುಟಿಕ್-ಪಿಟಿಕ್ ಎನ್ನಲಾರರು. ಇಂತಹಾ ಸಂದರ್ಭದಲ್ಲಿ ಯಾವುದೋ ಒಂದು ಮೂಲೆಯಲ್ಲಿರುವ, ನಕ್ಸಲರ ತಾಣ ಎಂದು ಗುರುತಿಸಿಕೊಂಡಿರುವ ಹಳ್ಳಿಯೊಂದಕ್ಕೆ ಮತದಾನದ ಕರ್ತವ್ಯ ನಿರ್ವಹಿಸಲು ಕರೆ ಬಂದರೆ ಯಾರು ತಾನೇ ಹೋಗುತ್ತಾರೆ? ಈಗಾಗಲೇ ಅಲ್ಲಿಗೆ ನಿಯೋಜನೆಗೊಂಡಿದ್ದ ಅಧಿಕಾರಿ ಹೃದ್ರೋಗದ ನೆಪ ಹೇಳಿ ತಪ್ಪಿಸಿಕೊಂಡಿರುತ್ತಾನೆ. ಆಗ ಅವನ ಜಾಗಕ್ಕೆ ನಮ್ಮ ಹೀರೋ ನ್ಯೂಟನ್ ಹೊರಡುತ್ತಾನೆ.  ಅದು ನಕ್ಸಲ್ ಪ್ರದೇಶ ಎಂದು ಹೇಳಿದಾಗ ನಮಗೆ ಇಲ್ಲಿಯೇ ನಡುಕ ಶುರುವಾಗಿರುತ್ತದೆ. ಆದರೆ ಅವನು ಧೈರ್ಯವಾಗಿ ಹೊರಡುತ್ತಾನೆ....

Saithan (Tamil) ಸಿನೆಮಾ ವಿಮರ್ಶೆ

Image
  ಸೈತಾನ ಎಂದರೇನು? ಸಿಂಪಲ್... ಮನುಷ್ಯ ಅಲ್ಲದವನೇ ಸೈತಾನ. ಹಾಗಾದರೆ ಮನುಷ್ಯ ಸೈತಾನನಾಗಲು ಏನು ಮಾಡಬೇಕು? ಅದೂ ಸಹ ಸಿಂಪಲ್. ಮನುಷ್ಯತ್ವ ಮರೆತರೆ ಆಯ್ತು. ಆದರೆ ನನಗೆ ಸದಾ ಕಾಡುವ ವಿಚಾರವೆಂದರೆ, ಸೈತಾನ ಯಾಕೆ ಯಾವಾಗಲೂ ಮನುಷ್ಯರ ವಿರುದ್ಧವಾಗಿಯೇ ವರ್ತಿಸುತ್ತಾನೆ, ಮನುಷ್ಯನನ್ನು ತನ್ನ ಶತೃ ಎಂದು ಯಾಕೆ ಎಂದುಕೊಳ್ಳುತ್ತಾನೆ ಅಂತ. ಸೈತಾನನಾದವನು ಮನುಷ್ಯರನ್ನು ಕೊಲ್ಲಲೇಬೇಕು ಎಂಬ ನಿಯಮವಿದೆಯೇ? ಸೈತಾನ ಸಹ ಮನುಷ್ಯನದ್ದೇ ಮತ್ತೊಂದು ರೂಪವಾದ ಮೇಲೆ ಅವನಲ್ಲಿಯೂ ತಾಳ್ಮೆ, ಕ್ಷಮೆ, ಬುದ್ಧಿ, ವಿವೇಚನೆಗಳು ಇರುತ್ತವೆಯಲ್ಲವೇ? ಅಂದ ಮೇಲೆ ಸೈತಾನ ಮನುಷ್ಯನನ್ನು ಕ್ಷಮಿಸಿ ಬಿಟ್ಟುಬಿಡಲು ಸಾಧ್ಯವಿಲ್ಲವೇ....? ಸಿನೆಮಾದ ಕಥೆ ಹೀಗಿದೆ. ನಾಯಕನ ಹೆಸರು ದಿನೇಶ್.‌  ಅತ್ಯಂತ ಬುದ್ಧಿವಂತನಾದ ದಿನೇಶ್ ನಮಗೂ ಸಹ ಹೊಟ್ಟೆಕಿಚ್ಚು ಬರಿಸುವಷ್ಟು ತಂತ್ರಜ್ಞಾನದಲ್ಲಿ ನಿಷ್ಣಾತ. ಜೊತೆಗೊಬ್ಬ ಅಮ್ಮ ಮತ್ತು ಸುಂದರಿಯಾದ ಹೆಂಡತಿ ಇರುವ ಮುದ್ದಾದ ಸಂಸಾರ ಆತನದ್ದು. ಆತನ ಹೆಂಡತಿ ಐಶ್ವರ್ಯಳನ್ನು ನೋಡಲು ಎರಡು ಕಣ್ಣು ಸಾಲದು ಎನ್ನುವಷ್ಟು ಸುಂದರಿ ಆಕೆ.‌ ಅದನ್ನು ನೋಡುತ್ತಾ, ಆಕೆಯ ಸೌಂದರ್ಯದೊಳಗೆ ಕಳೆದು ಹೋಗುತ್ತಾ ಸಿನೆಮಾದ ಹೆಸರೇ ನಮಗೆ ಮರೆತು ಹೋಗುವಂತಹಾ ಸಮಯದಲ್ಲಿ ಅವನ ಜೀವನ ಹಠಾತ್ ತಿರುವು ಪಡೆಯುತ್ತದೆ.‌ ಇದ್ದಕ್ಕಿದ್ದಂತೆ ದಿನೇಶನಿಗೆ ಯಾರೋ ತನ್ನ ಕಿವಿಯಲ್ಲಿ ಪಿಸುಗುಟ್ಟಿದ ಹಾಗೆ ಒಂದು ಧ್ವನಿ ಕೇಳಲು ಶುರುವಾಗುತ್ತದೆ. ಶಬ್ದ ಮಾತ್ರ ಕೇಳುತ...

ಸೂರರೈಪೊಟ್ರು (ಕನ್ನಡ ಡಬ್) ಸಿನೆಮಾ ವಿಮರ್ಶೆ

Image
  ಈ ಸಿನೆಮಾವನ್ನು ಕೇವಲ ಕಾಲ್ಪನಿಕ ಅಂತ ಯಾರಾದರೂ ಹೇಳಿದ್ದರೆ ನಾನು ಈ ಸಿನೆಮಾ ಅನ್ನು ಖಂಡಿತಾ ಒಪ್ಪುತ್ತಿರಲಿಲ್ಲ. ವಿಮಾನದ ಟಿಕೆಟ್ಟಿಗೆ ದುಡ್ಡಿರದ ವ್ಯಕ್ತಿ ಏರ್ಲೈನ್ಸ್ ನಡೆಸಿ ಯಶಸ್ವಿಯಾದ ಕಥೆ....!!! ಇದು ಸುಮ್ಮನೆ ನಾಯಕನಿಗಾಗಿ ಹೆಣೆದ ಕಥೆ ಆಗಿದ್ದರೆ ಬಹುಶಃ ಯಾರೂ ಇಷ್ಟಪಡುತ್ತಿರಲೂ ಇಲ್ಲ. ಆದರೆ ಇದು ನಿಜವಾಗಿ ನಡೆದ ಕಥೆ.‌.... !!!!! ಅದಕ್ಕಾಗಿಯೇ ‌ನಮಗೆ ಇಷ್ಟೊಂದು ಆಶ್ಚರ್ಯ. ಈ ವಿಷಯದ ಬಗ್ಗೆ ಕಥೆ ಬರೆಯಲೂ ಸಹ ಹಿಂದೆ-ಮುಂದೆ ಯೋಚಿಸುವಾಗ, ಇದನ್ನು ಒಬ್ಬ ವ್ಯಕ್ತಿ ಜೀವಿಸಿಬಿಟ್ಟಿದ್ದಾರೆ... !!!!! ಅಕ್ಷರಶಃ ಪವಾಡದಂತೆಯೇ ತೋರುವ ಈ ಯಶಸ್ಸು ನಮ್ಮೆಲ್ಲರಿಗೂ ಸ್ಫೂರ್ತಿಯಾಗುತ್ತದೆ. ನಮ್ಮಂತಹಾ ಸಾಮಾನ್ಯರಿಗೂ ಅಸಾಮಾನ್ಯರಾಗುವ ಬಯಕೆ ಮೂಡಿಸುತ್ತದೆ. ಸಿನೆಮಾದಲ್ಲಿ ನಾಯಕನೊಬ್ಬ ನೂರು ಜನರನ್ನು ಒಂದೇ ಬಾರಿ ಹೊಡೆದು ಪುಡಿಗಟ್ಟಿದ ಅಂದ್ರೆ ನಂಬ್ತೀವಿ..‌ ಒಂದೇ ತಿಂಗಳಲ್ಲಿ ಕೋಟಿ ರೂಪಾಯಿ ದುಡಿದ ಅಂದ್ರೆ ನಂಬ್ತೀವಿ.. ಸಿನೆಮಾದಲ್ಲಿ ಬರುವ ದೆವ್ವ-ಭೂತಗಳನ್ನು ನಂಬ್ತೀವಿ.. ಆದರೆ ಒಬ್ಬ ಸಾಮಾನ್ಯ ಯುವಕ ಸಾಧನೆ ಮಾಡಿದ ಅಂದ್ರೆ ಯಾಕೆ ನಂಬೋಲ್ಲ? ಅದೂ ವಿಶೇಷವಾಗಿ ಈ ಕಥೆ. ಯಾಕೆಂದರೆ ನಾನೊಬ್ಬಳು ಸಾಮಾನ್ಯಳು. ನನ್ನಂತಹ ಕೋಟ್ಯಾಂತರ ಜನರಿದ್ದಾರೆ. ನಾವೆಲ್ಲರೂ ವಿಮಾನವನ್ನು ಹತ್ತಿರದಿಂದ ನೋಡಿಯೂ ಇಲ್ಲ. ಅದರೊಳಗೆ ಕುಳಿತೂ ಇಲ್ಲ. ನಾವು ನೋಡದ, ನಮ್ಮ ಜೀವನದ ಅಂಗವಾಗಿರದ ವಿಮಾನ ಹಾರಾಟದ ಕನಸನ್ನು ನಾವು ಊಹಿಸಿಕೊಳ್ಳಲೂ ಸಾಧ...

Parasite (ಕೊರಿಯನ್) ಸಿನೆಮಾ ವಿಮರ್ಶೆ

Image
  Parasite ಎಂದರೆ ಪರಾವಲಂಬಿ ಜೀವಿಗಳು. ಅಂದರೆ ಮತ್ತೊಬ್ಬರನ್ನ ತಮ್ಮ ಆಸರೆಯನ್ನಾಗಿ ಮಾಡಿಕೊಂಡು ಬದುಕುತ್ತಿರುವ ಜೀವಿಗಳು ಅಂತರ್ಥ. ಕಡೆಗೆ ತಮಗೆ ಆಸರೆ ಕೊಟ್ಟವರನ್ನೇ ಕಬಳಿಸುತ್ತವೆ ಈ ಪರಾವಲಂಬಿ ಜೀವಿಗಳು. ಹಾಗಾಗಿ ಹೆಸರು ಕೇಳಿಯೇ ಸಿನೆಮಾ ನೋಡಲು ಸ್ವಲ್ಪ ಭಯವಾಯ್ತು.... ಅಂತ್ಯ ದುರಂತವಾಗಿರಬಹುದು ಎಂಬ ಊಹೆಯಿಂದ!! ಅಲ್ಲದೇ ಕೊರಿಯನ್ ಸಿನೆಮಾ ಬೇರೆ. ಭಾಷೆ-ಸಂಸ್ಕೃತಿ ಏನೂ ಗೊತ್ತಿಲ್ಲದೇ ಹೇಗೆ ನೋಡುವುದು ಅಂತ ಇಷ್ಟು ದಿನ ನೋಡಿರಲಿಲ್ಲ. ಆದರೆ ಕಲೆಗೆ ದೇಶ-ಭಾಷೆಗಳ ಗಡಿಯಿಲ್ಲ. ಮನುಷ್ಯನೊಳಗಿನ ಪ್ರೇಮ-ದ್ವೇಷ-ಅಸೂಯೆಗಳು ಪ್ರಪಂಚದೆಲ್ಲೆಡೆ ಒಂದೇ ರೀತಿಯಾಗಿರುತ್ತದೆ. ಮನುಷ್ಯ ಯಾವುದರಲ್ಲಿ ವಿಭಿನ್ನತೆ ತೋರಿದರೂ ತನ್ನ ಸ್ವಭಾವದಲ್ಲಿ ನಾವೆಲ್ಲರೂ ಒಂದೇ ಎನ್ನುವುದನ್ನು ಈ ಸಿನೆಮಾ ತೋರಿಸಿಕೊಟ್ಟಿತು. ಹಿಂದಿ ಡಬ್ ಇರುವುದರಿಂದ ನಮ್ಮದೇ ಸಿನೆಮಾ ನೋಡಿದಷ್ಟು ಆಪ್ತತೆಯಿತ್ತು. ಸಿನೆಮಾ ಹೇಗೇ ಇರಲಿ.. ಎಷ್ಟೇ ಚೆನ್ನಾಗಿರಲಿ... ಅದನ್ನು ಪೂರ್ತಿ ನೋಡುವ ಹಾಗೆ ಮಾಡಬೇಕೆಂದರೆ ಶುರುವಿನ ಹತ್ತು-ಹದಿನೈದು ನಿಮಿಷ ಬಹಳ ಪ್ರಮುಖವಾಗಿರುತ್ತದೆ. ಆ ವಿಷಯದಲ್ಲಿ ಈ ಚಿತ್ರದ ನಿರ್ದೇಶಕರು ಗೆದ್ದಿದ್ದಾರೆ. ಒಮ್ಮೆ ನೋಡಲು ಶುರು ಹಚ್ಚಿಕೊಂಡವರು ಯಾವುದೇ ಕಾರಣಕ್ಕೂ ನಿಲ್ಲಿಸಲಾರರು. ಅಂತಹಾ ಬಿಗಿ ಕಥಾಹಂದರ ಇದರಲ್ಲಿದೆ. ಹಾಗಾದರೆ ಕಥೆಯೇನು? ನಮ್ಮ ನಿಮ್ಮೆಲ್ಲರ ಕಥೆಯೇ ಇದು. ನಮ್ಮ ಸುತ್ತಲೂ ಎಷ್ಟು ಸಿಕ್ಕರೂ ಸದಾ ಅತೃಪ್ತಿಯಿಂದಿರುವ, ಕ...

ಹೀರೋ (ತಮಿಳು) ಸಿನೆಮಾ ವಿಮರ್ಶೆ

Image
  ಸಿನೆಮಾದ ಆರಂಭ ಹೀಗಿದೆ. ಒಂದು ಪುಟ್ಟ ಮಗುವನ್ನು ನೀನು ದೊಡ್ಡವನಾದ ಮೇಲೆ ಏನಾಗಬೇಕು ಅಂತಿದ್ದೀಯ ಅಂತ ಕೇಳಿದರೆ ಸೈನಿಕನಾಗಿ ದೇಶಸೇವೆ ಮಾಡಬೇಕು, ಡಾಕ್ಟರಾಗಿ ಜನಸೇವೆ ಮಾಡಬೇಕು ಅಂತ ಉತ್ತರ ಸಿಗುತ್ತದೆ. ಅದೇ ಮಗು ದೊಡ್ಡದಾದ ನಂತರ ಇದೇ ಪ್ರಶ್ನೆ ಕೇಳಿದರೆ ಉತ್ತಮ ಸಂಬಳವಿರುವ ಕೆಲಸ, ಇರಲು ಮನೆ, ಓಡಾಡಲು ಕಾರು ಬೇಕು ಅಂತ ಉತ್ತರ ಬರುತ್ತದೆ. ಒಂದು ಉದಾತ್ತ ಧ್ಯೇಯವುಳ್ಳ ಮಗುವಿನ ಮನಸ್ಸನ್ನು ಸ್ವಾರ್ಥಿಯನ್ನಾಗಿಸಿದ್ದು ಯಾರು? ಅದು ಮತ್ಯಾರೂ ಅಲ್ಲ.... ನಮ್ಮ ಶಿಕ್ಷಣ ವ್ಯವಸ್ಥೆ !!! ಮತ್ತೊಂದೆಡೆ ಒಂದು ಕಾರ್ಪೋರೇಟ್ ಕಂಪನಿಯಿದೆ. ಅದಕ್ಕೊಬ್ಬ ಅನಭಿಷಿಕ್ತ ದೊರೆಯಿದ್ದಾನೆ. ಅವನಿಗೆ ಜನರು ಯೋಚಿಸುವುದು ಬೇಕಿಲ್ಲ. ಕೇವಲ ತಾನು ಹೇಳಿದಂತೆ ಕೇಳಿಕೊಂಡು ಬಿದ್ದಿರುವುದು ಬೇಕು. ಅಂದರೆ ಜನ ತಮ್ಮ ಸ್ವಂತ ಆಲೋಚನಾ ಶಕ್ತಿ ಉಪಯೋಗಿಸದೇ, ಆತ ನೀಡುವ ಸಂಬಳ ಪಡೆದುಕೊಂಡು, ಆತನ ಕಂಪನಿಯಲ್ಲಿ ಆತ ಹೇಳುವ ಕೆಲಸ ಮಾಡಿಕೊಂಡು, ವೀಕೆಂಡಲ್ಲಿ ಸಿನೆಮಾ ನೋಡಿಕೊಂಡು, ಸೋಮವಾರ ಮತ್ತೆ ಎದ್ದು ಕೆಲಸಕ್ಕೆ ಬರಬೇಕು. ಇದನ್ನು ಮೀರಿ ಯಾರಾದರೂ ಹೊಸತೇನಾದರೂ ಯೋಚಿಸಿದರೆ ಆತ ಅವರಿಗೆ ಲೋಬೋಟಮಿ ಮಾಡಿಬಿಡುತ್ತಾನೆ. ಲೋಬೋಟಮಿ ಒಂದು ರೀತಿಯ ಶಸ್ತ್ರಚಿಕಿತ್ಸೆ ಆಗಿದ್ದು, ಇದರಿಂದ ಮೆದುಳು ಯೋಚಿಸುವ ಶಕ್ತಿ ಕಳೆದುಕೊಳ್ಳುತ್ತದೆ. ಇದನ್ನು ಕಣ್ಣಿನ ಮೂಲಕ ನೇರ ಮೆದುಳಿಗೆ ಸರ್ಜರಿ ಮಾಡಲಾಗುತ್ತದೆ. ಆಗ ಆ ಶಸ್ತ್ರಚಿಕಿತ್ಸೆಗೆ ಒಳಗಾದವರು ತಾವಾಗಿಯೇ ಏನನ್ನು ಯೋಚ...